LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅತಿವೃಷ್ಠಿ, ಬರ ಪರಿಸ್ಥಿತಿ ಪರಿಶೀಲನೆಗೆ ಸೂಚನೆ: ಸಚಿವರಿಗೆ ಉಸ್ತುವಾರಿ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ ​

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಉದ್ಭವಿಸಿರುವ ಅತಿವೃಷ್ಠಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಬಾಧಿತ ಪ್ರದೇಶಗಳಲ್ಲಿ ತಕ್ಷಣವೇ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸಂಪುಟದ ಸಚಿವರಿಗೆ ಪ್ರಮುಖ ಸೂಚನೆ ನೀಡಿದ್ದಾರೆ.

​ಸಂಪುಟದ ಸಚಿವರು ತಮಗೆ ಜವಾಬ್ದಾರಿ ವಹಿಸಿರುವ ಉಸ್ತುವಾರಿ ಜಿಲ್ಲೆಗಳಿಗೆ ತಕ್ಷಣವೇ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲ್ಲೂಕಿನ ವಾಸ್ತವ ಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸುವಂತೆ ಆದೇಶಿಸಲಾಗಿದೆ.

​ಸಚಿವರ ಪ್ರವಾಸ ಮತ್ತು ಪರಿಶೀಲನೆ:
​ಸಚಿವರು ಪ್ರತಿಯೊಂದು ತಾಲ್ಲೂಕಿಗೆ ಖುದ್ದು ಭೇಟಿ ನೀಡಿ
, ಸ್ಥಳದಲ್ಲೇ ಸಾರ್ವಜನಿಕರು ಹಾಗೂ ರೈತರ ಅಹವಾಲುಗಳನ್ನು ಆಲಿಸಲಿದ್ದಾರೆ. ಪರಿಶೀಲನೆಯ ನಂತರ ವಾಸ್ತವ ಸ್ಥಿತಿಯ ಸಮಗ್ರ ವರದಿಯನ್ನು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ತಕ್ಷಣ ಸಲ್ಲಿಸುವಂತೆ ಪತ್ರದ ಮೂಲಕ ಸೂಚಿಸಲಾಗಿದೆ.

​ಜಿಲ್ಲಾವಾರು ಸಚಿವರ ಹಂಚಿಕೆ ವಿವರ (30 ಜಿಲ್ಲೆಗಳು):
​ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ವಹಿಸಿರುವ ಜಿಲ್ಲೆಗಳ ವಿವರ ಹೀಗಿದೆ:
​ಡಾ. ಜಿ. ಪರಮೇಶ್ವರ – ತುಮಕೂರು, ​ರಘುಮೂರ್ತಿ – ಚಿತ್ರದುರ್ಗ, ​ಬಿ.ಎಸ್. ಸುರೇಶ್ (ಬೈರತಿ) – ಚಿಕ್ಕಬಳ್ಳಾಪುರ, ​ಕೆ.ಹೆಚ್. ಮುನಿಯಪ್ಪ - ಬೆಂಗಳೂರು ಗ್ರಾಮಾಂತರ, ​ರಾಮಲಿಂಗಾರೆಡ್ಡಿ – ಕೋಲಾರ, ​ಹೆಚ್. ಸಿ. ಬಾಲಕೃಷ್ಣ - ಬೆಂಗಳೂರು ದಕ್ಷಿಣ, ​ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್ – ವಿಜಯನಗರ, ​ಕೆ.ಜೆ. ಜಾರ್ಜ್ – ಚಿಕ್ಕಮಗಳೂರು, ​ಕೆ.ಎಂ. ಶಿವಲಿಂಗೇ ಗೌಡ – ಹಾಸನ, ​

ಮಧು ಬಂಗಾರಪ್ಪ – ಶಿವಮೊಗ್ಗ. ​ಎಂ.ಬಿ. ಪಾಟೀಲ್ – ವಿಜಯಪುರ, ​ವಿಜಯಾನಂದ ಕಾಶಪ್ಪನವರ್ – ಬಾಗಲಕೋಟೆ, ​ಬಸವರಾಜ ರಾಯರೆಡ್ಡಿ – ಗದಗ, ​ಎಸ್.ಎಸ್. ಮಲ್ಲಿಕಾರ್ಜುನ – ದಾವಣಗೆರೆ, ​ರುದ್ರಪ್ಪ ಲಮಾಣಿ – ಹಾವೇರಿ, ​ಸತೀಶ್ ಜಾರಕಿಹೊಳಿ – ಬೆಳಗಾವಿ, ​ಸಂತೋಷ್ ಲಾಡ್ – ಧಾರವಾಡ, ​ಲಕ್ಷ್ಮಣ ಸವದಿ – ಉತ್ತರಕನ್ನಡ, ​ಪ್ರಿಯಾಂಕ್ ಖರ್ಗೆ – ಕಲಬುರಗಿ, ​ಅಜಯ್ ಧರಂ ಸಿಂಗ್ – ರಾಯಚೂರು, ​ಈಶ್ವರ್ ಖಂಡ್ರೆ – ಬೀದರ್, ​ಯು.ಟಿ. ಖಾದರ್ - ದಕ್ಷಿಣ ಕನ್ನಡ & ಉಡುಪಿ, ​ಪಿ.ಎಂ. ನರೇಂದ್ರ ಸ್ವಾಮಿ – ಕೊಡಗು, ​ಯತೀಂದ್ರ ಸಿದ್ದರಾಮಯ್ಯ – ಮೈಸೂರು, ​ಚಲುವರಾಯಸ್ವಾಮಿ – ಮಂಡ್ಯ, ​ಪುಟ್ಟರಂಗಶೆಟ್ಟಿ – ಚಾಮರಾಜನಗರ, ​ಬಿ. ನಾಗೇಂದ್ರ – ಬಳ್ಳಾರಿ, ​ಶರಣ ಪ್ರಕಾಶ್ ಪಾಟೀಲ – ಯಾದಗಿರಿ, ​ಶಿವರಾಜ್ ತಂಗಡಗಿ – ಕೊಪ್ಪಳ, ​ಕೃಷ್ಣ ಬೈರೇಗೌಡ - ಬೆಂಗಳೂರು ನಗರ.

​"ಸಂಕಷ್ಟದಲ್ಲಿರುವ ಜನರ ಜೊತೆಗೆ ನಮ್ಮ ಸರ್ಕಾರ ನಿಲ್ಲಲಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ತುರ್ತು ಪರಿಹಾರ ಹಾಗೂ ಸಹಾಯ ಕ್ರಮಗಳನ್ನು ಸರ್ಕಾರ ಖಂಡಿತ ಕೈಗೊಳ್ಳಲಿದೆ," ಎಂದು ಸರ್ಕಾರ ಸ್ಪಷ್ಟಪಡಿಸಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲ್ಲುಗುದಿಗೆ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಭಕ್ತಿ ಭಾವದಿಂದ ನಡೆದ ನಾಗ ಪಂಚಮಿ ಆಚರಣೆಬ್ಯಾಂಕ್ ಸರ್ಕಲ್ ಫುಟ್ ಪಾತ್ ಒತ್ತುವರಿ:ಸ್ಥಳೀಯರ ಆಕ್ರೋಶಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನನರಕಸದೃಶ ಬದುಕು - ಚರಂಡಿ ನೀರೆಲ್ಲಾ ರಸ್ತೆಗೆ!, ಸ್ವಚ್ಛತೆ ಇಲ್ಲದ ಊರು, ರೋಗಗಳ ತವರು!ಆ.22 ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ, ಆ.23ರಂದು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ : ರೈತ ಮುಖಂಡ ಮಹೇಶ್ವರಪ್ಪಪರಿಸರ ಮತ್ತು ಆಧ್ಯಾತ್ಮದ ಸಮನ್ವಯದ 'ನಾಗರ ಪಂಚಮಿ':ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ 'ಕ್ವಾಂಟಮ್ ಫೌಂಡ್ರಿ' ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಕನ್ನಡಿಗರ ಜೇಬಿಗೆ ಕನ್ನ: ಜೆಡಿಎಸ್ ತೀವ್ರ ಆಕ್ರೋಶ