ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಅಕ್ಕಿ ದರ ಮತ್ತೊಮ್ಮೆ ಗಗನಕ್ಕೇರಿದ್ದು, ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಒಂದೇ ತಿಂಗಳಲ್ಲಿ ಸತತವಾಗಿ ಎರಡನೇ ಬಾರಿಗೆ ಅಕ್ಕಿ ಬೆಲೆ ಹೆಚ್ಚಳವಾಗಿದ್ದು, ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮುಂದುವರಿದಿದೆ.
ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದಾಗಿ ಅಕ್ಕಿ ದರ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ಕೋಲಂ ಅಕ್ಕಿ ಏರಿಕೆ: ಕೆಲ ದಿನಗಳ ಹಿಂದೆ ಕೆಜಿಗೆ 75 ರೂ. ಇದ್ದ ಕೋಲಂ ಅಕ್ಕಿ ದರವು ಈಗ ನೇರವಾಗಿ 100 ರೂ.ಗೆ ಏರಿಕೆಯಾಗಿದೆ.
ಜೀರಾ ಸಾಂಬ ದರ ಜಿಗಿತ: ನಾಲ್ಕು ದಿನಗಳ ಹಿಂದೆ ಕೆಜಿಗೆ 180 ರೂ. ಇದ್ದ ಜೀರಾ ಸಾಂಬ ಅಕ್ಕಿಯ ಬೆಲೆ ಇದೀಗ 200 ರೂ.ಗೆ ತಲುಪಿದೆ.
ಮಳೆ ಕೊರತೆಯೇ ಪ್ರಮುಖ ಕಾರಣ: ಈ ವರ್ಷ ಮಳೆ ಕೊರತೆಯಿಂದಾಗಿ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೆ, ಸೂಕ್ತವಾಗಿ ಕಟಾವಿಗೆ ಬಾರದಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
ಕೋಲಂ ಅಕ್ಕಿ₹100-(₹75), ಸೋನಾ ಮಸೂರಿ ₹82 (₹68), ಜೀರಾ ಸಾಂಬ ₹200 (₹180), ಸ್ಟೀಮ್ ಅಕ್ಕಿ ₹75 (₹68), ವಾರದ ಹಿಂದಷ್ಟೇ (ಸೆಪ್ಟೆಂಬರ್ 15 ರಂದು), ನಾರ್ಮಲ್ ಅಕ್ಕಿ ಮೇಲೆ ಕೆಜಿಗೆ 5 ರಿಂದ 10 ರೂ. ಹಾಗೂ ಕ್ವಾಲಿಟಿ ಅಕ್ಕಿ ಮೇಲೆ 10 ರಿಂದ 20 ರೂ.ವರೆಗೆ ಏರಿಕೆಯಾಗಿತ್ತು.
ಕ್ವಿಂಟಲ್ ಅ ಮೇಲೆ ಸುಮಾರು 1000 ರೂ.ವರೆಗೆ ಹೆಚ್ಚಳ ಕಂಡಿತ್ತು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅಕ್ಕಿ ಬೆಲೆ ಏರಿಕೆಯು ಮತ್ತಷ್ಟು ಆರ್ಥಿಕ ಹೊರೆ ಸೃಷ್ಟಿಸಿದೆ.




