ಚಂದ್ರವಳ್ಳಿ ನ್ಯೂಸ್, ದೆಹಲಿ
ನವರಾತ್ರಿ ಮತ್ತು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರವನ್ನು ಬರೋಬ್ಬರಿ 25 ಬೇಸಿಸ್ ಪಾಯಿಂಟ್ಸ್ (ಶೇಕಡಾ 0.25) ಹೆಚ್ಚಳ ಮಾಡುವ ಮೂಲಕ ದೊಡ್ಡ ಆಘಾತ ನೀಡಿದೆ.
ಇದರೊಂದಿಗೆ ದೇಶದ ಅಧಿಕೃತ ರೆಪೋ ದರವು ಶೇಕಡಾ 5.25 ರಿಂದ ಶೇಕಡಾ 5.50ಕ್ಕೆ ಏರಿಕೆಯಾಗಿದೆ.
ಸಾಲಗಳ ಇಎಂಐ ಏರಿಕೆ: ರೆಪೋ ದರ ಹೆಚ್ಚಳವಾಗಿರುವುದರಿಂದ ಬ್ಯಾಂಕ್ಗಳಿಂದ ಪಡೆದ ಹೋಮ್ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ಗಳ ಬಡ್ಡಿದರಗಳು ಹೆಚ್ಚಾಗಲಿದ್ದು, ನಿಮ್ಮ ಮಾಸಿಕ ಇಎಂಐ ಮೊತ್ತ ಅಥವಾ ಸಾಲ ತೀರಿಸುವ ಅವಧಿ ಸುದೀರ್ಘವಾಗಲಿದೆ.
ಬಡ್ಡಿದರ ಇಳಿಕೆ ಸದ್ಯಕ್ಕಿಲ್ಲ: ಭವಿಷ್ಯದಲ್ಲಿ ಸದ್ಯದಲ್ಲೇ ಯಾವುದೇ ಬಡ್ಡಿದರ ಕಡಿತವಿರುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಠೇವಿದಾರರಿಗೆ ಸಿಹಿದರ: ಬಡ್ಡಿದರ ಏರಿಕೆಯಿಂದಾಗಿ ಬ್ಯಾಂಕ್ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿರುವ ಗ್ರಾಹಕರಿಗೆ ಹೆಚ್ಚಿನ ಬಡ್ಡಿಯ ಲಾಭ ಸಿಗಲಿದೆ.
ದರ ಹೆಚ್ಚಳಕ್ಕೆ ಕಾರಣ: ಹೆಚ್ಚುತ್ತಿರುವ ಹಣದುಬ್ಬರ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆರ್ಬಿಐ ಈ ನಿರ್ಧಾರ ಕೈಗೊಂಡಿದೆ.




