ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ಖ್ಯಾತ ಚಲನಚಿತ್ರ ನಟ ರಂಗಾಯಣ ರಘು ಅವರೊಂದಿಗೆ ಆತ್ಮೀಯವಾಗಿ ಮಾತನಾಡುವ ಅಪರೂಪದ ಅವಕಾಶ ದೊರೆಯಿತು. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನವರೇ ಆಗಿರುವ ರಂಗಾಯಣ ರಘು ಅವರ ಸರಳತೆ ಮತ್ತು ಸ್ನೇಹಪರತೆ ಮನಸ್ಸಿಗೆ ಮುದ ನೀಡಿತು ಎಂದು ಶಿರಾ ಶಾಸಕ ಟಿ.ಬಿ ಜಯಚಂದ್ರ ಅವರು ತಿಳಿಸಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ರಂಗಾಯಣ ರಘು ಅವರು ತಮ್ಮ ಅಭಿನಯದ “ಪ್ರೇಮದ ಊರಲ್ಲಿ” ಚಲನಚಿತ್ರವನ್ನು ತಪ್ಪದೆ ವೀಕ್ಷಿಸುವಂತೆ ಆತ್ಮೀಯವಾಗಿ ಮನವಿ ಮಾಡಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ನಾನು ಸಾಮಾನ್ಯವಾಗಿ ಸಿನಿಮಾ ನೋಡುವುದು ಅಪರೂಪವಾದರೂ, ರಂಗಾಯಣ ರಘು ಅವರ ಪ್ರೀತಿಯ ಮನವಿಗೆ ಗೌರವ ನೀಡಿ ಖಂಡಿತವಾಗಿಯೂ ‘ಪ್ರೇಮದ ಊರಲ್ಲಿ’ ಸಿನಿಮಾವನ್ನು ವೀಕ್ಷಿಸುತ್ತೇನೆ" ಎಂದು ತಿಳಿಸಿದ್ದಾರೆ.
ನಮ್ಮದೇ ಜಿಲ್ಲೆಯ ಪ್ರತಿಭಾವಂತ ಕಲಾವಿದರ ಕಲಾಪಯಣ ಯಶಸ್ವಿಯಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು.




