ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನತೆಗೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಮತ್ತೊಂದು ಬೆಲೆ ಏರಿಕೆಯ ಬಿಸಿ ನೀಡಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ಮಾರಾಟ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.
ಪರಿಷ್ಕೃತ ದರಗಳ ವಿವರ:
ಮೊಸರು: ಅರ್ಧ ಲೀಟರ್: 28 ರಿಂದ 34 ಗೆ ಏರಿಕೆ (6 ಹೆಚ್ಚಳ)
ಒಂದು ಲೀಟರ್: 54 ರಿಂದ 68 ಗೆ ಏರಿಕೆ (14 ಹೆಚ್ಚಳ)
ವಿವಿಧ ಮಾದರಿಯ ಹಾಲು (ಪ್ರತಿ ಲೀಟರ್ಗೆ):
ಟೋನ್ಡ್ ಹಾಲು: 46 ರಿಂದ 54 (8 ಹೆಚ್ಚಳ)
ಹೋಮೋಜಿನೈಸ್ಡ್ ಟೋನ್ಡ್ ಹಾಲು: 47 ರಿಂದ 56
ಹೋಮೋಜಿನೈಸ್ಡ್ ಹಸುವಿನ ಹಾಲು: 50 ರಿಂದ 58
ಸ್ಪೆಷಲ್ ಟೋನ್ಡ್ ಹಾಗೂ ಶುಭಂ ಹಾಲು: 52 ರಿಂದ 64
ಹೋಮೋಜಿನೈಸ್ಡ್ ಶುಭಂ ಹಾಲು: ₹53 ರಿಂದ ₹65
ದರ ಏರಿಕೆಗೆ ಪ್ರಮುಖ ಕಾರಣಗಳು: ಬರದ ಛಾಯೆ: ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ನೀರು ಮತ್ತು ಮೇವಿನ ಕೊರತೆ ಎದುರಾಗಿದ್ದು, ಪಶುಗಳ ನಿರ್ವಹಣೆ ವೆಚ್ಚ ಹೆಚ್ಚಾಗಿದೆ.
ರೈತರ ಹಿತರಕ್ಷಣೆ: ರಾಜ್ಯದಲ್ಲಿ ಸುಮಾರು 8.9 ಲಕ್ಷ ರೈತರು ಪ್ರತಿದಿನ ಕೆಎಂಎಫ್ಗೆ ಹಾಲು ಪೂರೈಸುತ್ತಿದ್ದಾರೆ. ಟೋನ್ಡ್ ಹಾಲಿನ ಮೇಲಿನ ₹8 ಹೆಚ್ಚಳದಲ್ಲಿ ₹7 ನೇರವಾಗಿ ಹಾಲು ಉತ್ಪಾದಕ ರೈತರಿಗೆ ತಲುಪಲಿದೆ.
ಜಿಡ್ಡಿನಾಂಶ ಆಧಾರಿತ ಪರಿಷ್ಕರಣೆ: ಹಾಲಿನಲ್ಲಿರುವ ಜಿಡ್ಡಿನಾಂಶ (ಫ್ಯಾಟ್) ಆಧಾರದ ಮೇಲೆಯೂ ಎಲ್ಲ ಮಾದರಿಯ ಹಾಲು ಮತ್ತು ಮೊಸರಿನ ಬೆಲೆ ಪರಿಷ್ಕರಿಸಲಾಗಿದೆ.




