LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯಲ್ಲದಕೆರೆ ಗ್ರಾ.ಪಂ.ಗೆ ಮುತ್ತಿಗೆ; ಕುಡಿಯುವ ನೀರಿಗೆ ಆಗ್ರಹಿಸಿ ಪಂಚಾಯಿತಿ ಆವರಣದಲ್ಲೇ ಅಡುಗೆ ಮಾಡಿ ಗ್ರಾಮಸ್ಥರ ಆಕ್ರೋಶ!

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಹಿರಿಯೂರು:
ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಗಳಿಕಟ್ಟೆ ಗ್ರಾಮದಲ್ಲಿ ಕಳೆದ ಸುಮಾರು ಎರಡು ತಿಂಗಳಿಂದ ತೀವ್ರ ಕುಡಿಯುವ ನೀರಿನ ಅಭಾವ ತಲೆದೋರಿದ್ದು
, ಸಮಸ್ಯೆ ಬಗೆಹರಿಸದ ಆಡಳಿತ ಮಂಡಳಿ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಮಂಗಳವಾರ ಚಂದ್ರವಳ್ಳಿ ನ್ಯೂಸ್ ವರದಿ ಬೆನ್ನಲ್ಲೇ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

​ಗ್ರಾಮದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಪಾತಾಳಕ್ಕೆ ಕುಸಿದಿದ್ದು, ಹಳೆ ಬೋರ್‌ವೆಲ್‌ಗಳಲ್ಲಿ ನೀರು ಖಾಲಿಯಾಗಿದೆ. ಹೊಸದಾಗಿ ಯಾವುದೇ ಬೋರ್‌ವೆಲ್ ಕೊರೆಸಿಲ್ಲ. ಇದರಿಂದಾಗಿ ಚಿಗಳಿಕಟ್ಟೆ ಗ್ರಾಮದ ಜನ ಹಾಗೂ ಜಾನುವಾರುಗಳು ಹನಿ ನೀರಿಗೂ ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಪಿಡಿಒ ಗಮನಕ್ಕೆ ತಂದರೂ "ಕುಡಿಯುವ ನೀರಿಗೆ ಅನುದಾನವಿಲ್ಲ" ಎಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾ, ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರವಾಗಿ ತೊಳಲಿದರು.

​ಆವರಣದಲ್ಲೇ ಅಡುಗೆ ಮಾಡಿ ಆಕ್ರೋಶ!
ಗ್ರಾಮಸ್ಥರ ಅಹವಾಲು ಸ್ವೀಕರಿಸಲು ಪಿಡಿಒ ತಡಮಾಡಿದ ಕಾರಣ ತಾಳ್ಮೆ ಕಳೆದುಕೊಂಡ ಗ್ರಾಮಸ್ಥರು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿಯೇ ಅಡುಗೆ ತಯಾರಿಸಲು ಮುಂದಾದರು. ಗ್ರಾಮಸ್ಥರ ಈ ತೀವ್ರ ಪ್ರತಿಭಟನೆಗೆ ಮಣಿದ ಪಂಚಾಯತಿ ಸಿಬ್ಬಂದಿ
, ತಕ್ಷಣವೇ ಹೊಸದಾಗಿ ಒಂದು ಮೋಟರ್ ತರಿಸಿಕೊಟ್ಟು ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು.

​ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಣಿಕಂಠ, ಕರೇಗೌಡ, ಗಿರೀಶ್, ರಾಜಪ್ಪ C.R., ಲಕ್ಷ್ಮಿಕಾಂತ್, ಯಶವಂತ್, ಶಿವಾನಂದಣ್ಣ, ಶ್ರೀನಿವಾಸ್, ದಿವಾಕರ್, ಲೋಹಿತ್, ಮುಕುಂದ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

​"ನಮಗೂ ಜವಾಬ್ದಾರಿ ಇದೆ, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ" - ತಿಪ್ಪೇಸ್ವಾಮಿ (ಪಿಡಿಒ, ಯಲ್ಲದಕೆರೆ).

"ಮಳೆ ಇಲ್ಲದೆ ಎಲ್ಲಾ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದು ನೀರಿನ ಅಭಾವ ಉಂಟಾಗಿದೆ. ಪಂಚಾಯತಿಯಲ್ಲಿ ಅನುದಾನ ಲಭ್ಯವಿಲ್ಲದಿರುವುದರಿಂದ ಹೊಸದಾಗಿ ಬೋರ್‌ವೆಲ್ ಕೊರೆಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ತಕ್ಷಣದ ಪರಿಹಾರವಾಗಿ ಹೊಸ ಮೋಟರ್ ತಂದು ಬಿಡುತ್ತಿದ್ದೇವೆ. ನಮಗೂ ಸಾರ್ವಜನಿಕರ ಬಗ್ಗೆ ಜವಾಬ್ದಾರಿ ಇದೆ."

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲ್ಲುಗುದಿಗೆ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಭಕ್ತಿ ಭಾವದಿಂದ ನಡೆದ ನಾಗ ಪಂಚಮಿ ಆಚರಣೆಬ್ಯಾಂಕ್ ಸರ್ಕಲ್ ಫುಟ್ ಪಾತ್ ಒತ್ತುವರಿ:ಸ್ಥಳೀಯರ ಆಕ್ರೋಶಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನನರಕಸದೃಶ ಬದುಕು - ಚರಂಡಿ ನೀರೆಲ್ಲಾ ರಸ್ತೆಗೆ!, ಸ್ವಚ್ಛತೆ ಇಲ್ಲದ ಊರು, ರೋಗಗಳ ತವರು!ಆ.22 ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ, ಆ.23ರಂದು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ : ರೈತ ಮುಖಂಡ ಮಹೇಶ್ವರಪ್ಪಪರಿಸರ ಮತ್ತು ಆಧ್ಯಾತ್ಮದ ಸಮನ್ವಯದ 'ನಾಗರ ಪಂಚಮಿ':ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ 'ಕ್ವಾಂಟಮ್ ಫೌಂಡ್ರಿ' ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಕನ್ನಡಿಗರ ಜೇಬಿಗೆ ಕನ್ನ: ಜೆಡಿಎಸ್ ತೀವ್ರ ಆಕ್ರೋಶ