Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness | Beauty Tips

ಹಿರಿಯೂರಿನಲ್ಲಿ ಅತ್ಯಾಧುನಿಕ ‘ನಾರಾಯಣ ಸ್ಕ್ಯಾನ್ಸ್ & ಡಯಾಗ್ನೋಸ್ಟಿಕ್ಸ್’: ಹೈಟೆಕ್ ವೈದ್ಯಕೀಯ ಸೌಲಭ್ಯ ಈಗ ನಿಮ್ಮ ಮನೆಯಂಗಳದಲ್ಲೇ!

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಅತ್ಯಾಧುನಿಕ ವೈದ್ಯಕೀಯ ತಪಾಸಣಾ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ‘ನಾರಾಯಣ ಸ್ಕ್ಯಾನ್ಸ್ & ಡಯಾಗ್ನೋಸ್ಟಿಕ್ಸ್’ ದಿನಾಂಕ: 01-11-2026, ಭಾನುವಾರ ಬೆಳಿಗ್ಗೆ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.

ನುರಿತ ತಜ್ಞರ ಸೇವೆ, ಕಡಿಮೆ ವೆಚ್ಚದಲ್ಲಿ!:
ಈ ನೂತನ ಕೇಂದ್ರದಲ್ಲಿ ರೇಡಿಯೋಲಾಜಿಸ್ಟ್ ಮತ್ತು ಭ್ರೂಣ ವೈದ್ಯಕೀಯ ತಜ್ಞರಾದ (Fetal Medicine Specialist) ಡಾ. ರಾಘವೇಂದ್ರ ಕೆ. (MBBS, MD Radiodiagnosis) ಅವರು ಲಭ್ಯವಿರಲಿದ್ದಾರೆ.

ಉನ್ನತ ತಂತ್ರಜ್ಞಾನ ಹಾಗೂ ನುರಿತ ವೈದ್ಯಕೀಯ ಅನುಭವದೊಂದಿಗೆ ರೋಗಿಗಳಿಗೆ ನಿಖರವಾದ ರೋಗನಿರ್ಣಯ ಮತ್ತು ಸಲಹೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಒದಗಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಇಲ್ಲಿಯವರೆಗೆ ತಪಾಸಣೆ ಮತ್ತು ಸ್ಕ್ಯಾನಿಂಗ್‌ಗಾಗಿ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕಾಗಲಿ ಅಥವಾ ರಾಜಧಾನಿ ಬೆಂಗಳೂರಿಗಾಗಲಿ ದೂರದ ಊರುಗಳಿಗೆ ಅಲೆಯಬೇಕಿದ್ದ ಹಿರಿಯೂರಿನ ಜನತೆಗೆ, ಈಗ ಅತ್ಯಾಧುನಿಕ ಹೈಟೆಕ್ ತಂತ್ರಜ್ಞಾನದ ವೈದ್ಯಕೀಯ ಸೌಲಭ್ಯವು ತಮ್ಮ ಸ್ವಂತ ಊರಿನಲ್ಲೇ ದೊರೆಯಲಿದೆ.

ಆಯಕಟ್ಟಿನ ಕೇಂದ್ರ ಸ್ಥಳ – ತಲುಪಲು ಅತ್ಯಂತ ಸುಲಭ:
ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗದ ರೋಗಿಗಳ ಅನುಕೂಲಕ್ಕಾಗಿ ಈ ಕ್ಲಿನಿಕ್ ಅನ್ನು ನಗರದ ಅತ್ಯಂತ ಜನನಿಬಿಡ ಮತ್ತು ಆಯಕಟ್ಟಿನ ಸ್ಥಳದಲ್ಲಿ ಆರಂಭಿಸಲಾಗುತ್ತಿದೆ.

ವಿಳಾಸ: ಟಿಎಪಿಸಿಎಂಎಸ್ (TAPCMS) ಕಟ್ಟಡ, ಸಂತೆಪೇಟೆ ರಸ್ತೆ, ಖಾಸಗಿ ಬಸ್ ನಿಲ್ದಾಣದ ಹತ್ತಿರ, ಹಿರಿಯೂರು.

ಸಮೀಪದ ಕುರುಹುಗಳು:
ಖಾಸಗಿ ಬಸ್ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕೇವಲ 100 ಮೀಟರ್ ಅಂತರದಲ್ಲಿದೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅತ್ಯಂತ ಸನ್ನಿಹಿತದಲ್ಲಿ (ಕೂಗಳತೆಯ ದೂರ) ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಸಂತೇಪೇಟೆ ರಸ್ತೆಯಲ್ಲಿದೆ.

ಬಸ್ ಮತ್ತು ಸಾರಿಗೆ ಸಂಪರ್ಕಕ್ಕೆ ಅತ್ಯಂತ ಹತ್ತಿರದಲ್ಲಿರುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಯಾವುದೇ ತೊಂದರೆಯಿಲ್ಲದೆ ತಲುಪಲು ಇದು ಸೂಕ್ತವಾದ ತಾಣವಾಗಿದೆ.

"ನಗರ ಮತ್ತು ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಗುಣಮಟ್ಟದ ಹಾಗೂ ಹೈಟೆಕ್ ವೈದ್ಯಕೀಯ ತಪಾಸಣಾ ಸೇವೆಗಳನ್ನು ಸುಲಭ ದರದಲ್ಲಿ ತಲುಪಿಸುವುದೇ ನಮ್ಮ ಆದ್ಯತೆ."

ಇಂದು ನಡೆಯಲಿರುವ ಈ ಶುಭ ಉದ್ಘಾಟನಾ ಸಮಾರಂಭಕ್ಕೆ ನಗರದ ಸಾರ್ವಜನಿಕರು, ಹಿರಿಯರು ಹಾಗೂ ರೋಗಿಗಳು ಆಗಮಿಸಿ ಈ ನೂತನ ವೈದ್ಯಕೀಯ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ವೈದ್ಯರಾದ ಡಾ.ಕೆ.ರಾಘವೇಂದ್ರ ಅವರು ಕೋರಿದ್ದಾರೆ.

news_1793489711_7_170.webp

 

news_1793489711_8_966.webp

 

​ಲಭ್ಯವಿರುವ ಸೌಲಭ್ಯಗಳು / ಸೇವೆಗಳು:
​ಎಲ್ಲಾ ತರಹದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ​ಗರ್ಭಿಣೆಯರ ಸ್ಕ್ಯಾನಿಂಗ್, ಡೇಟಿಂಗ್ ಸ್ಕ್ಯಾನ್ (
Dating Scan), ​ಅನಾಮಲಿ ಸ್ಕ್ಯಾನ್ (Anomaly Scan), 
​ಭ್ರೂಣದ ಎಕೋ ಸ್ಕ್ಯಾನ್ (Fetal Echo), ​3ಡಿ / 4ಡಿ ಸ್ಕ್ಯಾನ್, ​ಭ್ರೂಣದ ಬೆಳೆವಣಿಗೆಯ ಸ್ಕ್ಯಾನ್ (Growth Scan), ​ಕಲರ್ ಡಾಪ್ಲರ್, ​ಡಿಜಿಟಲ್ ಎಕ್ಸ್‌ರೇ  ಇತ್ಯಾದಿ ವೈದ್ಯಕೀಯ ಸೇವಾ ಸೌಲಭ್ಯಗಳು ಲಭ್ಯ.
​ಸಂಪರ್ಕ ಸಂಖ್ಯೆ (ದೂರವಾಣಿ ಮೂಲಕ ಹೆಸರು ನೊಂದಾಯಿಸಿಕೊಳ್ಳಲು):​9035339566. 
​ಇಂತಿ ನಿಮ್ಮ ವೈದ್ಯರಾದ:​ ಡಾ:​ಕೆ. ರಾಘವೇಂದ್ರ ಎಂ.ಬಿ.ಎಸ್.
, ಎಂಡಿ (ರೇಡಿಯಾಲಜಿ), ​ರೇಡಿಯಾಲಜಿಸ್ಟ್ & ಫೀಟಲ್ ಮೆಡಿಸಿನ್ ಸ್ಪೆಷಲಿಸ್ಟ್. 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಸಚಿವ ಟಿ.ರಘುಮೂರ್ತಿ ಸೂಚನೆನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪೋಸ್ಟರ್ ಬಿಡುಗಡೆನೂತನ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿಯವರಿಗೆ ಅಭಿನಂದನೆಬೆವಿಕಂ ಉಪ ವಿಭಾಗದ ಘಟಕ -1 ಮತ್ತು 2 ರ ಕಚೇರಿ ಉದ್ಘಾಟಿಸಿದ ಸಚಿವ ರಘುಮೂರ್ತಿಹಾಸನಾಂಬೆಗೆ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ: ಹಣ್ಣು-ಹೂವಿನ ಪ್ರದರ್ಶನ, ಕ್ರೀಡಾಕೂಟಕ್ಕೆ ಚಾಲನೆಹಾಸನಾಂಬಾ ದೇವಾಲಯದ ರಸ್ತೆಗೆ 'ಅಮೀರ್ ಮೊಹಲ್ಲಾ' ಹೆಸರು: ಸರ್ಕಾರದ ಪ್ರವಾಸ ಕಾರ್ಯಕ್ರಮಕ್ಕೆ ಸಿ.ಟಿ. ರವಿ ಆಕ್ಷೇಪಶ್ರೇಯಾ ಎನ್. ಗೌಡ ಸಾಧನೆಗೆ ಡಿ.ಕೆ ಶಿವಕುಮಾರ್ ಅಭಿನಂದನೆ: ಯುಪಿಎಸ್‌ಸಿ NDA ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಶ್ರೇಯಾಂಕಅನ್ನದಾತರಿಗೆ ಮೊದಲ ಕಂತಿನ 2,500 ನೇರ ಖಾತೆಗೆ ಜಮೆ-ಸಿಎಂನವೆಂಬರ್ 13ಕ್ಕೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಬಿಜೆಪಿ ನಾಯಕರ ಪೂರ್ವಭಾವಿ ಸಭೆ ಸಿ.ಎಚ್.ಎನ್ ರಾಮು ರಚಿತ ಪುಸ್ತಕ ಬಿಡುಗಡೆ: ದಲಿತ ಸಮಾಜದ ಹಕ್ಕುಗಳಿಗಾಗಿ ಕರೆ