Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ
'ಸ್ಟಿಂಗ್ ಆಪರೇಷನ್' ಕುತಂತ್ರದ ಬಗ್ಗೆ ಕಾಂಗ್ರೆಸ್ ಶಾಸಕ ಗಣಿಗ ರವಿ ಗಂಭೀರ ಆರೋಪ ಮಾಡಿದ್ದು, ಹೆಚ್.ಡಿ. ಕುಮಾರಸ್ವಾಮಿ ಶೈಲಿಯಲ್ಲಿ ಪೆನ್‌ಡ್ರೈವ್ ಪ್ರದರ್ಶಿಸಿ ಒಂದು ವಾರದೊಳಗೆ ದೆಹಲಿ ಮೂಲದ ಏಜೆನ್ಸಿ ಹಾಗೂ ನಾಯಕರ ಹೆಸರುಗಳ ಸಮೇತ ಸಮಗ್ರ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸೇರಿ ರಾಜ್ಯದ 10 ಸಚಿವರನ್ನು ಗುರಿಯಾಗಿಸಿ ಸ್ಟಿಂಗ್ ಆಪರೇಷನ್ ನಡೆಸಲು ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಪ್ರಗತಿ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ವಿಪಕ್ಷಗಳು ಈ ಅಪಪ್ರಚಾರದ ಕುತಂತ್ರ ಹೆಣೆದಿವೆ ಎಂದು ವಾಗ್ದಾಳಿ ನಡೆಸಿದರು.

ಗಣಿಗ ರವಿ ಪ್ರಮುಖ ಆರೋಪಗಳು: ಸುಪಾರಿ ಸಂಚು: ಸರ್ಕಾರದ ಸಚಿವರಿಗೆ ಮುಜುಗರ ತರಲು ದೆಹಲಿ ಮೂಲದ ಏಜೆನ್ಸಿಗೆ ಹಣ ನೀಡಿ ಸ್ಟಿಂಗ್ ಆಪರೇಷನ್ ಮಾಡಿಸಲು ಯತ್ನಿಸಲಾಗಿದೆ.

ದೃಢ ಸಾಕ್ಷ್ಯಗಳಿದೆ: ಸಿಸಿಟಿವಿ ದೃಶ್ಯಗಳು, ಆಡಿಯೋ, ವಿಡಿಯೋ ಹಾಗೂ ಹಣಕಾಸು ವ್ಯವಹಾರದ ಸಂಪೂರ್ಣ ದಾಖಲೆಗಳು ನಮ್ಮ ಬಳಿಯಿದ್ದು, ಇದು ಹಿಟ್ ಆ್ಯಂಡ್ ರನ್ ಆರೋಪವಲ್ಲ.

ಪಿಎಗಳು ಹಾಗೂ ಏಜೆನ್ಸಿ ಭಾಗಿ: ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ, ಯಾರ ಪಿಎಗಳು ಇದರಲ್ಲಿದ್ದರು ಎಂಬ ಬಗ್ಗೆ ಸ್ಪಷ್ಟ ಸಾಕ್ಷ್ಯಗಳಿವೆ.
ಒಂದು ವಾರದ ಗಡುವು: ಮುಂದಿನ ಏಳು ದಿನಗಳ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಗೂ ಮಾಧ್ಯಮಗಳ ಎದುರು ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಲಾಗುವುದು.

ಸಚಿವರು ಶುದ್ಧಹಸ್ತರಾಗಿರುವುದರಿಂದ ವಿಪಕ್ಷಗಳ ಈ ಬಲೆಗೆ ಬಿದ್ದಿಲ್ಲ ಎಂದು ತಿಳಿಸಿರುವ ಶಾಸಕ ಗಣಿಗ ರವಿ, ಈ ಸ್ಟಿಂಗ್ ಪ್ರಹಸನದ ಹಿಂದೆ ಇರುವ ಪ್ರಮುಖ ನಾಯಕರ ಮುಖವಾಡವನ್ನು ಶೀಘ್ರದಲ್ಲೇ ಕಳಚುವುದಾಗಿ ತಿಳಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಸಚಿವ ಟಿ.ರಘುಮೂರ್ತಿ ಸೂಚನೆನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪೋಸ್ಟರ್ ಬಿಡುಗಡೆನೂತನ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿಯವರಿಗೆ ಅಭಿನಂದನೆಬೆವಿಕಂ ಉಪ ವಿಭಾಗದ ಘಟಕ -1 ಮತ್ತು 2 ರ ಕಚೇರಿ ಉದ್ಘಾಟಿಸಿದ ಸಚಿವ ರಘುಮೂರ್ತಿಹಾಸನಾಂಬೆಗೆ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ: ಹಣ್ಣು-ಹೂವಿನ ಪ್ರದರ್ಶನ, ಕ್ರೀಡಾಕೂಟಕ್ಕೆ ಚಾಲನೆಹಾಸನಾಂಬಾ ದೇವಾಲಯದ ರಸ್ತೆಗೆ 'ಅಮೀರ್ ಮೊಹಲ್ಲಾ' ಹೆಸರು: ಸರ್ಕಾರದ ಪ್ರವಾಸ ಕಾರ್ಯಕ್ರಮಕ್ಕೆ ಸಿ.ಟಿ. ರವಿ ಆಕ್ಷೇಪಶ್ರೇಯಾ ಎನ್. ಗೌಡ ಸಾಧನೆಗೆ ಡಿ.ಕೆ ಶಿವಕುಮಾರ್ ಅಭಿನಂದನೆ: ಯುಪಿಎಸ್‌ಸಿ NDA ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಶ್ರೇಯಾಂಕಅನ್ನದಾತರಿಗೆ ಮೊದಲ ಕಂತಿನ 2,500 ನೇರ ಖಾತೆಗೆ ಜಮೆ-ಸಿಎಂನವೆಂಬರ್ 13ಕ್ಕೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಬಿಜೆಪಿ ನಾಯಕರ ಪೂರ್ವಭಾವಿ ಸಭೆ ಸಿ.ಎಚ್.ಎನ್ ರಾಮು ರಚಿತ ಪುಸ್ತಕ ಬಿಡುಗಡೆ: ದಲಿತ ಸಮಾಜದ ಹಕ್ಕುಗಳಿಗಾಗಿ ಕರೆ