Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ: ಅಕ್ಟೋಬರ್ 3 ರಿಂದ 7 ರವರೆಗೆ ಕೇಂದ್ರ ಅಂತರ್‌ಸಚಿವಾಲಯದ ತಂಡ ಪ್ರವಾಸ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ಬೆಳೆ ಹಾನಿ ಅಧ್ಯಯನಕ್ಕಾಗಿ ಕೇಂದ್ರ ಅಂತರ್‌ಸಚಿವಾಲಯದ ಉನ್ನತ ಮಟ್ಟದ ತಂಡವು ಅಕ್ಟೋಬರ್ 3 ರಿಂದ ಅಕ್ಟೋಬರ್ 7
, 2026 ರವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. 

​ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ  ಅಜಿತ್ ಕುಮಾರ್ ಸಾಹು ಅವರ ನೇತೃತ್ವದಲ್ಲಿ 10 ಸದಸ್ಯರ ಅಧಿಕಾರಿಗಳ ನಿಯೋಗವು ರಾಜ್ಯಕ್ಕೆ ಆಗಮಿಸಿದೆ. ಹೆಚಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲು ಅನುಕೂಲವಾಗುವಂತೆ ಈ ತಂಡವನ್ನು 3 ಉಪ-ತಂಡಗಳಾಗಿ ವಿಂಗಡಿಸಲಾಗಿದೆ. 

Advertisement

​ಪ್ರವಾಸದ ಪ್ರಮುಖ ವಿವರಗಳು:
​ಅಕ್ಟೋಬರ್ 3: ಕೇಂದ್ರ ತಂಡವು ಬೆಂಗಳೂರಿಗೆ ಆಗಮಿಸಿ
, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಲಿದೆ. ತದನಂತರ ನಿಗದಿತ ಜಿಲ್ಲೆಗಳಿಗೆ ಪಯಣಿಸಲಿದೆ. 

​ಅಕ್ಟೋಬರ್ 4 ರಿಂದ 6: ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳು ಸಿದ್ಧಪಡಿಸಿದ ಯೋಜನೆಯಂತೆ ಭೇಟಿ ನೀಡಿ ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಲಿವೆ. 

​ಅಕ್ಟೋಬರ್ 7: ಬೆಂಗಳೂರಿನಲ್ಲಿ ಸಮಾರೋಪ ಸಭೆ ಮುಗಿಸಿ ಕೇಂದ್ರ ತಂಡವು ದೆಹಲಿಗೆ ಹಿಂತಿರುಗಲಿದೆ.
​ಉಪ-ತಂಡಗಳು ಹಾಗೂ ಭೇಟಿ ನೀಡುವ ಜಿಲ್ಲೆಗಳ ವಿವರ:

1ನೇ ​ತಂಡದ ನೇತೃತ್ವ ವಹಿಸಿರುವ ಅಜಿತ್ ಕುಮಾರ್ ಸಾಹು ಅವರು ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. 
​ಇವರಿಗೆ ಇತರೆ ಸದಸ್ಯರಾದ ಲೆಫ್ಟಿನೆಂಟ್ ಕರ್ನಲ್ ಅಮರಿಂದರ್ ಸಿಂಗ್ (ನೀತಿ ಆಯೋಗ)
, ಡಾ. ಜೆ. ಹರ್ಷ (ಜಲಶಕ್ತಿ ಸಚಿವಾಲಯ) ಇವರು ಸಾಥ್ ನೀಡಲಿದ್ದಾರೆ. 

​2ನೇ ತಂಡದ ನೇತೃತ್ವ ವಹಿಸಿರುವ ಪಶುಸಂಗೋಪನೆ ಮತ್ತು ಕ್ಷೀರ ಅಭಿವೃದ್ಧಿ ಇಲಾಖೆ ಉಪ ಆಯುಕ್ತರಾದ ಡಾ. ಸುದಾಮ್ ಬಾಗ್ ಇವರು ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ, ಕೆ.ಆರ್.ಎಸ್ ಭೇಟಿ ಸೇರಿದಂತೆ ಇತರೆ ಕಡೆ ಪ್ರವಾಸ ಮಾಡಲಿದ್ದಾರೆ.  ಇವರಿಗೆ ​ಇತರ ಸದಸ್ಯರಾದ ಆಶಿಶ್ ಪಾಂಡೆ, ಪ್ರದೀಪ್ ಕುಮಾರ್ ಮತ್ತು ಕರಣ್ ಚೌಧರಿ ಸಾಥ್ ನೀಡಲಿದ್ದಾರೆ. 

​3ನೇ ತಂಡದ ನೇತೃತ್ವ ವಹಿಸಿರುವ ಪಟ್ನಾದ ನೆಲ್ಲು ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ. ಮನ್ ಸಿಂಗ್ ಇವರು ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. 
ಇವರಿಗೆ ​ಇತರ ಸದಸ್ಯರಾದ ಪಾರ್ಥ ಪಾಲ್ (ವ್ಯಯ ಇಲಾಖೆ) ಹಾಗೂ ರಾಕೇಶ್ ಕುಮಾರ್ (ಗ್ರಾಮೀಣಾಭಿವೃದ್ಧಿ ಇಲಾಖೆ) ಇವರು ಸಾಥ್ ನೀಡಲಿದ್ದಾರೆ. 

​ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಬರ ಪರಿಸ್ಥಿತಿಯ ಕುರಿತು ನಿಯೋಗಕ್ಕೆ ಮಾಹಿತಿ ನೀಡಿ, ಸ್ಥಳೀಯವಾಗಿ ನಿಮಿಷದಿಂದ ನಿಮಿಷದ ಪರಿಶೀಲನಾ ಪ್ರವಾಸ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ