ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ಬ್ರಹ್ಮಚಾರಿಗಳು ಮತ್ತು ಸಂನ್ಯಾಸಿಗಳಿಗೆ ನೀಡುತ್ತಿದ್ದ ಗೌರವಾದರಗಳು ಅತ್ಯಂತ ಸ್ಮರಣೀಯವಾದದ್ದು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಜಿ ಯಶೋಧಾ ಪ್ರಕಾಶ್ ತಿಳಿಸಿದರು.
ನಗರದ ಶಿವನಗರದ ತಮ್ಮ ಜಿ.ವಿ.ಎಸ್.ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಮಾಡುತ್ತ "ಮುನ್ನಡೆಸುವ ಮಹಾಶಕ್ತಿ" ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.
ಸತ್ಸಂಗದ ಆರಂಭದಲ್ಲಿ ಶ್ರೀರಾಮಕೃಷ್ಣರ ನಾಮಸ್ಮರಣೆ, ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಭಜನೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ನಡೆಯಿತು.
ಸತ್ಸಂಗ ಸಭೆಯಲ್ಲಿ ಕರಿಬಸವಮ್ಮ, ಈಶ್ವರಮ್ಮ, ಶಾಂತಾ ನಾಗರಾಜ್, ವಿನೋದಾ ಬಸವರಾಜ, ವಿಜಯಾ, ರತ್ನಮ್ಮ, ಶಾಂತಮ್ಮ , ವಿನೋದಾ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ಕೃಷ್ಣವೇಣಿ, ವೀರಮ್ಮ,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ, ಶಾರದಾಮ್ಮ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.


