Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

"ಮಹಾಭಾರತದ ಮೌಲ್ಯಗಳು ಬದುಕಿಗೆ ಸದಾ ಮಾರ್ಗದರ್ಶಿ": ಡಿ.ಶಬ್ರಿನಾ ಮಹಮದ್ ಅಲಿ ಅಭಿಮತ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಾರತದ ಮಹಾಕಾವ್ಯವಾದ ಮಹಾಭಾರತವು ಜೀವನ ಮೌಲ್ಯಗಳ ಕಣಜವಾಗಿದ್ದು ಮನುಷ್ಯ ಹೇಗೆ ಬದುಕಬೇಕು-ಹೇಗೆ ಬದುಕಬಾರದೆಂದು ತಿಳಿಸಿಕೊಡುತ್ತದೆ ಎಂದು  ಶಿಕ್ಷಕಿ ಹಾಗೂ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅಭಿಪ್ರಾಯಪಟ್ಟರು.

ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು "ಮಹಾಭಾರತದ ಮೌಲ್ಯಗಳು" ಎಂಬ ವಿಷಯವಾಗಿ ಮಾತನಾಡುತ್ತಿದ್ದರು.   

Advertisement

ಮಹಾಭಾರತವು ಹದಿನೆಂಟು ಪರ್ವಗಳನ್ನು ಒಳಗೊಂಡಿದ್ದು ಪ್ರತಿಯೊಂದು ಪರ್ವವು ನಿತ್ಯ ಜೀವನಕ್ಕೆ ಬೇಕಾದ ಮೌಲ್ಯಗಳ ಕುರಿತು  ಮಾರ್ಗದರ್ಶನ ನೀಡುತ್ತದೆ. ಇದು ವ್ಯಕ್ತಿಯು ಗರ್ಭಾದಿಂದ ಗೋರಿಯವರೆಗೆ ಹೇಗೆ ಬದುಕಬೇಕೆಂದು ತಿಳಿಸಿಕೊಡುತ್ತದೆ. ಪಾಂಡವರು,ಕೌರವರು,ಕೃಷ್ಣ, ಕುಂತಿ, ದ್ರೌಪದಿ, ಧೃತರಾಷ್ಟ್ರ, ಗಾಂಧಾರಿ,ಕರ್ಣ, ಉತ್ತರಕುಮಾರ, ಭಾನುಮತಿ, ಶಕುನಿಯ ಪಾತ್ರಗಳು ಪುತ್ರ ವ್ಯಾಮೋಹ, ಮಕ್ಕಳನ್ನು ಹೇಗೆ ಬೆಳೆಸಬೇಕು, ದಾಂಪತ್ಯದಲ್ಲಿ ನಂಬಿಕೆ,ಜೀವನದ ನಶ್ವರತೆ ಸೇರಿದಂತೆ ಅನೇಕ ಜೀವನ ಮೌಲ್ಯಗಳನ್ನು ತಿಳಿಸಿಕೊಡುತ್ತದೆ.ಆದ್ದರಿಂದ ಮಹಾಭಾರತದ ವಿವಿಧ ಪರ್ವಗಳು ತಿಳಿಸುವ  ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ತಿಪ್ಪಮ್ಮ ಉಮಾಶಂಕರ್, ನಾಗರತ್ನಮ್ಮ,ಬಿ.ಎಂ ಗೀತಾ ಸುಂದರೇಶ್ ಅವರಿಂದ ವಿಶೇಷ ಭಜನೆ,ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.  

   ಕಾರ್ಯಕ್ರಮದಲ್ಲಿ ಮಹಮದ್ ಅಲಿ,ವಿಹಾನ್ ಅಲಿ, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಜ್ಯೋತಿ ಪ್ರಸಾದ್, ವನಜಾಕ್ಷಿ, ವಿಜಯಾಗುರು, ಪುಷ್ಪಲತಾ ವಿಜಯ್, ತನುಜಾ, ದಾಕ್ಷಾಯಣಿ, ಸುಧಾಮಣಿ, ಸೌಮ್ಯ ಪ್ರಸಾದ್, ಜಯಮ್ಮ, ವಿಶಾಲಾಕ್ಷಿ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ರಾಘವೇಂದ್ರ,ಪ್ರೇಮಾ, ಯತೀಶ್ ಎಂ ಸಿದ್ದಾಪುರ, ಸುವರ್ಣ ಉಪಸ್ಥಿತರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ