ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಸಂಬದ್ಧ
—————-
ಇದೆಂತಹದು ಗೆಳೆಯ
ಶೂದ್ರ ಶಕ್ತಿಗೆ ಮಸೆಗಲ್ಲಾಗಿ
ಹತ್ತಲು ಇಳಿಯಲಾಗದ
ಅಂತರ ಅಂತಸ್ತ ಮನೆಯ
ಬೆಳಕ ಕಿಂಡಿಯಾಗಿ
ಉಳುಮೆಯ ನೊಗವಾಗಿ
ಮೊಳಕೆಯ ಬೀಜವಾಗಿ
ಕತ್ತಲಲಿ ಕರಗುವರ ಸೂರ್ಯನಾಗಿ
ಶತಮಾನಕ್ಕೂ ಮೇಲೇಳದ ವರ್ಗಕ್ಕೆ
ಊರುಗೋಲಾಗುತ್ತಿ ಎಂದಿದ್ದೆ
ನೆನಪಿನೊಳು ನುಸುಳಿದ್ದಾವುದು
ದಲಿತ ಮುಕ್ತಿ ಕಹಳೆಯೋ
ಮನು ಸ್ಮೃತಿಯ ಆದರ್ಶವೋ
ಕೇಸರಿ ಆಕರ್ಷಣೆಯೋ
ಪಂಚೇಂದ್ರಿಯ ನಿಗ್ರಹಿಸಿದ್ದೋ
ನಮ್ಮವರ ಗೋರಿಗಳಂತೆ
ಉದುಗಿಸಿಟ್ಟಿದ್ದೋ
ಅದೇ ಕೌಫಿನ ಕಥೆಗಳು
ಗುರುವಂತೆ ಆಚಾರವಂತೆ
ದೇವಮಾನವ ಭಕ್ತಿ ಹೂರಣ
ಸರಳು ಹಿಂದಿನವು
ಮರುಳು ವಿಭೂತಿಯಲ್ಲಿ
ಕಾವಿ ಪಲ್ಲಂಗದ ಕಾಲುಗಳು ಮೊದಲಲ್ಲದ ರಾತ್ರಿ ಹೂಗಳು
ಮಧುಬನ ಬಸಿರ ಧ್ಯಾನ
ಅನಾಥ ಮಕ್ಕಳ ಗಣಿ ಕಥನ
ನರೇಂದ್ರರ ಕಾವಿಯಲ್ಲ ಈಗಿನದು
ನುಂಗಲೊರಟ ಉರಗವಿದ್ದಂತೆ
ಇದ್ಯಾವ ಸಿದ್ಧತೆಯ ಹಾದಿ ನಿನ್ನದು
ಮನುಷ್ಯ ಜನ್ಮ ಉದ್ದಾರಕ್ಕೋ
ನಿನ್ನ ಜನ್ಮ ಸಾಕ್ಷಾತ್ಕಾರಕ್ಕೋ
ಅಥವಾ………….
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.