ಆಪರೇಷನ್ ಹಸ್ತ, ಬಾಯಿ ಮುಚ್ಚಿಕೊಂಡಿರಲು ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಜಗಳೂರು:
ಆಪರೇಷನ್ ಹಸ್ತದ ಕುರಿತು ಮಾಧ್ಯಮದವರ ಪ್ರಶ್ನೆಗೆ, ಎಐಸಿಸಿ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಬಾಯಿ ಮುಚ್ಚಿಕೊಂಡು ಕೂರಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಅದನ್ನು ಮಾಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ಆಪರೇಷನ್ ಹಸ್ತ, ಸಿಎಂ ಬದಲಾವಣೆ ಆಗಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಇಂತಹ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಮಧು ಬಂಗಾರಪ್ಪ ಬೇಸರ ವ್ಯಕ್ತಪಡಿಸಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಕೋರ್ಟ್ ತೀರ್ಪು ಕೊಟ್ಟಿದೆ. ಮತ್ತೇನ್ ಬೇಕು?. ಸುಪ್ರೀಂ ಕೋರ್ಟ್​ಗೆ ಹೋಗುವ ಕಾನೂನು ಇದೆ. ಆದರೆ ಸುಪ್ರೀಂ ಕೋರ್ಟ್​ಗೆ ಹೋಗ್ಬೇಡಿ ಎನ್ನಲು ಬರಲ್ಲ. ಇದು ಅನಾವಶ್ಯಕವಾಗಿ ಭುಗಿಲೆದ್ದ ವಿಚಾರ. 13 ವರ್ಷದ ಹಿಂದಿನ ವಿಚಾರವನ್ನು ಆಗ ಕೆದಕಿದ್ರೆ ಏನಾಗುತ್ತೆ ಹೇಳಿ?” ಎಂದು ಪ್ರಶ್ನಿಸಿದರು.

53 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಹಿಂದಿನ ಸರ್ಕಾರ 5000 ಹುದ್ದೆಗಳನ್ನು ತುಂಬಿದ್ದರು. ನಾನು ಬಂದ ಮೇಲೆ 13 ಸಾವಿರ ಹುದ್ದೆಗಳನ್ನು ತುಂಬಲು ಪ್ರಸ್ತಾವನೆ ಕಳಿಸಿದ್ದೇನೆ. ಈಗ ಶಿಕ್ಷಕರನ್ನು​ ತೆಗೆದುಕೊಳ್ಳಿ ಎಂದು ಬೇಡಿಕೆ ಇಟ್ಟಿದ್ದಾರೆ. ಅನುದಾನಿತ ಶಾಲೆಗೆ 9 ವರ್ಷದಿಂದ ಶಿಕ್ಷಕರನ್ನು ತೆಗೆದುಕೊಂಡಿರಲಿಲ್ಲ. ಆದರೆ ನಾನು ಕ್ರಮ ಕೈಗೊಂಡಿದ್ದೇನೆ. ಇದು ಬೆಳವಣಿಗೆ ತಾನೇ?.

ಒಂದೇ ಸಲ ಭರ್ತಿ ಮಾಡಲು ಆಗಲ್ಲ ಎಂದು ಸಚಿವರು ತಿಳಿಸಿದರು. ಕಲಬುರ್ಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೊಟ್ಟಿದ್ದಾರೆ.

ನಮ್ಮ ಸರ್ಕಾರ ಬಂದು ಒಂದು ವರ್ಷ ಒಂಬತ್ತು ತಿಂಗಳಾಗಿವೆ. ಕ್ರಮೇಣ ಶಿಕ್ಷಕರ ನೇಮಕಾತಿ ಹಂತ ಹಂತವಾಗಿ ಮಾಡುತ್ತೇವೆ ಎಂದರು.

Share This Article
error: Content is protected !!
";