ಕೃಷ್ಣ ಅವರ ನೆನಪಿನ ನವಿಲುಗರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಮಾಜಿ ಮುಖ್ಯಮಂತ್ರಿ ಸನ್ಮಾನ ಶ್ರೀ ಎಸ್ ಎಂ ಕೃಷ್ಣ ಅವರ ಅಗಲಿಕೆಯಿಂದ ರಾಜ್ಯದ ಜನತೆ ಕಂಬನಿ ಮಿಡಿದಿದ್ದಾರೆ. ಪ್ರಜಾನಿತಿಯ ರಾಜಕಾರಣದಲ್ಲಿ ಪ್ರಥಮವಾಗಿ ಮಂಡ್ಯ ಲೋಕಸಭೆಗೆ ಸಂಸದರಾದರು .

ಎರಡನೆ ಬಾರಿ ಕೃಷ್ಣ ಅವರು ಸಂಸದರಾದ ದಿನಗಳಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಕೃಷ್ಣ ಅವರಿಗೆ ಕೇಂದ್ರ ಆಡಳಿತದಲ್ಲಿ ಮಂತ್ರಿಯಾಗುವ ಅವಕಾಶ ಕಲ್ಪಿಸಿದರು ನಂತರದ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಶಾಸಕರಾಗಿ ಸಚಿವರಾಗಿ ಉಪಮುಖ್ಯಮಂತ್ರಿಗಳಾಗಿ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು.

  ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರ ಜ್ಞಾನದ ಕೊಡುಗೆ ಅಪಾರವಾದದ್ದು ಈ ಕಾರಣದಿಂದ ಬೆಂಗಳೂರು ವಿಶ್ವಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ನಗರವಾಗಿ ಬೆಳೆದು ನಿಂತಿದೆ ಎಂದು ನಾನು ಹೆಮ್ಮೆಯಿಂದ ತಿಳಿಸುತ್ತೇನೆ ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ಸದಾ ಋಣಿಯಾಗಿರುತ್ತದ್ದೆ .

ಮುತ್ಸದ್ದಿ ರಾಜಕಾರಣಿಯಾಗಿದ ಕೃಷ್ಣ ಅವರು ಅಜಾತಶತ್ರು ಗಳಾಗಿದ್ದರು. 2003ರ ದಿನಗಳಲ್ಲಿ ನಾನು ರಾಜಕೀಯ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸೇರಲು ಆ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರ ಆಡಳಿತದ ವ್ಯಕ್ತಿತ್ವ ಕಾರಣ ಎಂದು ನಾನು ಆ ದಿನಗಳ ಅವರ ಆಡಳಿತದ ಘನತೆಯನ್ನು ನೆನೆಯುತ್ತೇನೆ.

2004 ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೃಷ್ಣ ಅವರು ಪಾಂಚಜನ್ಯ ಯಾತ್ರೆ ಕೈಗೊಂಡರು ಆ ದಿನಗಳಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷರಾದ ಶ್ರೀ ಆರ್ ಮಂಜುನಾಥ್ ಅವರೊಂದಿಗಿದ ನಾನು ಕೃಷ್ಣ ಅವರ ರಾಜಕೀಯ ಚಿಂತನೆಗಳನ್ನು ಅರಿತಿದ್ದೇನೆ.

ಕೃಷ್ಣ ಅವರ ಮುಂದಾಲೋಚನೆಯ  ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ನಮ್ಮಂತ ಲಕ್ಷಾಂತರ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಕುಟುಂಬ ವರ್ಗಕ್ಕೆ ಭಗವಂತ ದೈರ್ಯ ತುಂಬಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕಾಂಗ್ರೆಸ್ ಮುಖಂಡ ರಘು ಗೌಡ ಪ್ರಾರ್ಥಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";