ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 32 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇಮಕಾತಿ ಮಾಡುವ ಕುರಿತಂತೆ ತಾತ್ಕಾಲಿಕ 1:1 ಆಯ್ಕೆಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದ್ದು, ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು .23 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸಿರುತ್ತಾರೆ.

ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರಂತೆ  ಚಿತ್ರದುರ್ಗ ಜಿಲ್ಲೆಗೆ ಅರ್ಹತೆ ಪಡೆದಿರುವ ಒಟ್ಟು 1158 ಅಭ್ಯರ್ಥಿಗಳ ಪೈಕಿ ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕಕ್ಕೆ ಈಗಾಗಲೇ ಅನುಮೋದನೆಯಾಗಿರುವ 32 ಹುದ್ದೆಗಳಿಗೆ ಪ್ರಾಧಿಕಾರ ನೀಡಿರುವ ಮೆರಿಟ್ ಪಟ್ಟಿಯಲ್ಲಿ 1:3 ಅನುಪಾತದಂತೆ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ, ದಾಖಲಾತಿ ಪರಿಶೀಲಿಸಿ 1:1 ಅನುಪಾತದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳಿಗೆ ಅವಕಾಶ ನೀಡಿ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಸಿಂಧುತ್ವ ಪ್ರಮಾಣ ಪತ್ರ ಮತ್ತು ಪೊಲೀಸ್ ವರದಿ, ಪಿಯುಸಿ/12ನೇ ತರಗತಿಯ ಅಂಕಪಟ್ಟಿಯ ನೈಜತೆ ಪರಿಶೀಲಿಸಿಕೊಂಡು ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಿರುತ್ತಾರೆ.

ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 32 ಗ್ರಾಮ ಆಡಳಿತ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗಾಗಿ ಅಯ್ಕೆಪಟ್ಟಿಯನ್ನು ಸರ್ಕಾರ ನಿಗಧಿಪಡಿಸಿದ ಮೀಸಲಾತಿ ರೋಸ್ಟರ್ ನಿಯಮದ ಪ್ರಕಾರ ಹಾಗೂ ಸರ್ಕಾರದ ಸುತ್ತೋಲೆಯಲ್ಲಿನ ನಿರ್ದೇಶನದಂತೆ 32 ಹುದ್ದೆಗಳಿಗೆ 1:3 ಅನುಪಾತದಲ್ಲಿ  96 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು, ಪ್ರವರ್ಗ2 ಮೀಸಲಾತಿಯ ಅಂಗವಿಕಲ ಅಭ್ಯರ್ಥಿಗಳಲ್ಲಿ ಕೇವಲ 2 ಅಭ್ಯರ್ಥಿಗಳು ಮಾತ್ರ ಲಭ್ಯವಿದ್ದು, ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಅಂಗವಿಕಲ ಅಭ್ಯರ್ಥಿ ಇಲ್ಲದ ಕಾರಣ ಒಟ್ಟು 92 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.

ಪೈಕಿ .ಜಾತಿಅಂಗವಿಕಲ ಮೀಸಲಾತಿಯ ಅಭ್ಯರ್ಥಿಗಳು ಇಲ್ಲದೇ ಇರುವುದರಿಂದ ಹುದ್ದೆಯನ್ನು ಬ್ಯಾಕ್ಲಾಗ್ ಎಂದು ಪರಿಗಣಿಸಿದೆ. ಮುಂದುವರೆದು ದಾಖಲಾತಿ ಪರಿಶೀಲನೆಗಾಗಿ 92 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಗೈರು ಹಾಜರಾಗಿದ್ದು, ಹಾಜರಾದ 86 ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ.

86 ಅಭ್ಯರ್ಥಿಗಳ ಪೈಕಿ CET No VA5788716  ಪ್ರಿಯದರ್ಶಿನಿ ಜಿ.ಎಂ, ಇವರು ಪರಿಶಿಷ್ಟ ಜಾತಿ (ಮಹಿಳಾ2) ಕೋಟಾದಡಿ ಆಯ್ಕೆಯಾಗಿದ್ದು, 2025 .10ರಂದು ಖುದ್ದು ಹಾಜರಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ರದ್ದುಗೊಳಿಸಿ ಮೂಲ ದಾಖಲಾತಿ ಮೂಲ ದಾಖಲಾತಿ ಹಿಂದಿರುಗಿಸುವಂತೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಇವರ ಆಯ್ಕೆಯನ್ನು ರದ್ದುಪಡಿಸಿದ್ದು, ಪರಿಶೀಲನೆಯಲ್ಲಿ ಪೂರಕ, ಸಮರ್ಪಕ ದಾಖಲಾತಿಗಳನ್ನು ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ 1:1 ಅನುಪಾತದಲ್ಲಿ 31 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ 54 ಅಭ್ಯರ್ಥಿಗಳ ಕಾಯ್ದಿರಿಸಿದ ಆಯ್ಕೆಪಟ್ಟಿಯೊಂದಿಗೆ ಗೈರುಹಾಜರಿ, ತಿರಸ್ಕø ಅಭ್ಯರ್ಥಿಗಳ ಪಟ್ಟಿಯನ್ನು  ಪ್ರಕಟಿಸಿದೆ.

  ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಇದೇ .23ರೊಳಗಾಗಿ ಆಕ್ಷೇಪಣೆಗಳನ್ನು ಪುಷ್ಠಿಕರಿಸುವ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗಳ  ಕಚೇರಿಗೆ ಮುದ್ದಾಂ  ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಆಕ್ಷೇಪಣೆಗಳು  ಏನು ಇರುವುದಿಲ್ಲವೆಂದು ಭಾವಿಸಿ   ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಯನ್ನೇ ಅಂತಿಮಗೊಳಿಸಲಾಗುವುದು ಎಂದು ತಿಳಿಯಪಡಿಸಿದೆ.

    ಆಯ್ಕೆಪಟ್ಟಿಯಲ್ಲಿ ಹೆಸರು ಸೇರ್ಪಡೆ ಇದ್ದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ನೇಮಕಾತಿಯ ಬಗ್ಗೆ ಯಾವುದೇ ಹಕ್ಕು ಸಾಧಿಸಲು ಬರುವುದಿಲ್ಲ. ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳ ದಾಖಲೆಗಳಲ್ಲಿ ಲೋಪದೋಷಗಳೇನಾದರೂ ಕಂಡುಬಂದಲ್ಲಿ, ಅಂತಹ ಅಭ್ಯರ್ಥಿಗಳನ್ನು ಸಹ ಆಯ್ಕೆ ಪ್ರಕ್ರಿಯೆಯಿಂದ ಕೈ ಬಿಡಲಾಗುವುದು.

ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಹೆಚ್ಚುವರಿ ಕಾಯ್ದಿರಿಸಿದ ಪಟ್ಟಿ ಮತ್ತು ಗೈರು ಹಾಜರಿ/ತಿರಸ್ಕø ಅಭ್ಯರ್ಥಿಗಳ ಪಟ್ಟಿಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಅಧಿಕೃತ ವೆಬ್ಸೈಟ್ https://chitradurga.nic.in   ನಲ್ಲಿ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";