ವೀರಶೈವ ಸಮುದಾಯ ಭವನ ನಿರ್ಮಾಣಕ್ಕೆ ಕೋಟಿ ನೆರವು: ಶಾಸಕ ರಘುಮೂರ್ತಿ

News Desk


ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಹಲವಾರು ದಶಕಗಳಿಂದ ಜಗಜ್ಯೋತಿಬಸವೇಶ್ವರರ ವಚನಾಮೃತಗಳನ್ನು ಆರಾಧಿಸುವ ಮೂಲಕ ವೀರಶೈವ ಸಮಾಜಕ್ಕೆ ಮಾದರಿಯಾಗಿದೆ. ಕೇವಲ ತಮ್ಮ ಬದುಕಿನ ಬಗ್ಗೆ ಚಿಂತಿಸದೆ ಸಮಾ
eದ ಎಲ್ಲಾ ವರ್ಗಗಳ ಹಿತವನ್ನು ಬಯಸುವ ಸಮಾಜ. ಜಗಜ್ಯೋತಿ ಬಸವೇಶ್ವರರ ಧಾರ್ಮಿಕ ಕ್ರಾಂತಿ ಎಲ್ಲರಿಗೂ ಮಾದರಿ. ವೀರಶೈವ ಸಮಾಜದ ಬಗ್ಗೆ ಹೆಮ್ಮೆಪಡಬೇಕೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

- Advertisement - 

ಅವರು, ಭಾನುವಾರ ನಗರದ ವೀರಶೈವಕಲ್ಯಾಣಮಂಟಪದಲ್ಲಿ ೨೦೨೪-೨೫ನೇಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.೮೫ರಷ್ಟು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ನಿವೃತ್ತನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ, ವೀರಶೈವ ಸಮಾಜ ಸೇವಸಂಘ, ತಾಲ್ಲೂಕು ವೀರಶೈವ ಸಂಘಟನೆಗಳ ಒಕ್ಕೂಟ, ವೀರಶೈವ ಮಹಿಳಾ ವೇದಿಕೆ, ವಿದ್ಯಾರ್ಥಿನಿಲಯ, ನಗರ ವೀರಶೈವ ಸಂಘ ಮುಂತಾದವರ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಸಮಾಜದ ಬಂಧುಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಹ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆಯುತ್ತಿರುವುದು ಸಂತೋಷ ವಿಷಯ. ಶಿಕ್ಷಣಕ್ಕೂ ಸಹ ಹೆಚ್ಚಿನ ಮಹತ್ವ ನೀಡಬೇಕಿದೆ, ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದ್ದು ಸಮಾಜದ ಬಂಧುಗಳು ಈ ಬಗ್ಗೆ ಚಿಂತಿಸಬೇಕೆಂದರು. ಯಾವ ಸಮಾಜದಲ್ಲಿ ಯುವಕರು, ಮಹಿಳೆಯರು ಸಂಘಟಿತರಾಗಿ ಆರ್ಥಿಕವಾಗಿ ಸಬಲರಾಗುತ್ತಾರೋ ಅಂತಹ ಸಮಾಜ ಗಟ್ಟಿಯಾಗಿ ನೆಲೆಕಾಣುತ್ತದೆ ಎಂದರು.

- Advertisement - 

ಇದೇ ಸಂದರ್ಭದಲ್ಲಿ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸಿ.ನಾಗರಾಜು ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ಹಾಗೂ ವಿದ್ಯಾಸಂಸ್ಥೆಗಳ ನಿರ್ಮಾಣಕ್ಕೆಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದನ್ನು ಪ್ರಸ್ತಾಪಿಸಿದ ಶಾಸಕರು ನಾನು ಈಗಾಗಲೇ ನನ್ನ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲಾ ಜಾತಿಯವರಿಗೆ ಆಧ್ಯತೆ ನೀಡಿದ್ದೇನೆ. ನಿಮ್ಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣವೂ ಸೇರಿದಂತೆ ಹಲವಾರು ವಲಯಗಳಿಗೆ ಆರ್ಥಿಕ ಶಕ್ತಿತುಂಬುವ ಕೆಲಸನಡೆಯುತ್ತಿದೆ. ನಿರೀಕ್ಷಿತಮಟ್ಟದಲ್ಲಿ ಅಭಿವೃದ್ದಿಕಾಮಗಾರಿಗಳು ಪ್ರಗತಿಯಲ್ಲಿವೆ. ಇತ್ತೀಚೆಗೆ ಪ್ರಕಟವಾದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿನಿ ನೇರಲಗುಂಟೆಯ ರಂಜಿತ ಪ್ರಥಮರ್‍ಯಾಂಕ್ ಪಡೆದು ಖ್ಯಾತಿತಂದಿದ್ಧಾರೆ. ನಿಮ್ಮ ಸಮುದಾಯದ ವಿದ್ಯಾರ್ಥಿಗಳಿಗೂ ರ್‍ಯಾಂಕ್‌ದಾಖಲಿಸುವ ಅವಕಾಶ ಕೂಡಿಬರಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಅಧ್ಯಕ್ಷ ಕೆ.ಸಿ.ನಾಗರಾಜು ಮಾತನಾಡಿ, ವೀರಶೈವ ಸಮಾಜದ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಬಹಳವರ್ಷಗಳಿಂದ ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡುವ ನಿರ್ಧಾರವನ್ನು ಸಮುದಾಯ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಎಲ್ಲರೂಅರ್ಥಿಕ ನೆರವು ನೀಡಿ ಕಂಚಿತಪ್ರತಿಮೆ ಪ್ರತಿಷ್ಠಾಪನೆಗೆ ನೆರವಾಗಬೇಕೆಂದರು. ಪ್ರತಿಭಾಪುರಸ್ಕಾರ ಪಡೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು, ನಿವೃತ್ತ ಸಮಾಜದ ಬಂಧುಗಳು ಸಹ ನೆಮ್ಮದಿಯ ಜೀವನವನ್ನು ಸಂತೋಷವಾಗಿ ನಡೆಸಬೇಕೆಂದರು.

- Advertisement - 

ದಿವ್ಯಸಾನಿಧ್ಯ ವಹಿಸಿದ್ದ ಕೇದಾರಶಾಖಾಪೀಠದ ಕೇದಾರಲಿಂಗಶಿವಶಾಂತವೀರ ಶಿವಾಚಾರ್ಯಸ್ವಾಮೀಜಿಗಳು ಮಾತನಾಡಿ, ಜಗಜ್ಯೋತಿಬಸವೇಶ್ವರರು ತಮ್ಮ ವಚನಗಳಲ್ಲಿ ಸಮಾಜವನ್ನು ತಿದ್ದುವ ಜೊತೆಗೆ ಧಾರ್ಮಿಕ ಕ್ರಾಂತಿಯನ್ನು ಮೂಡಿಸಿದ್ಧಾರೆ. ಇಂದು ನಾವು, ನೀವೆಲ್ಲರೂ ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕಬೇಕಿದೆ. ಇಂತಹ ಧಾರ್ಮಿಕ ಬೆಳಕನ್ನು ದಯಪಾಲಿಸಿದ ಜಗಜ್ಯೋತಿಬಸವೇಶ್ವರರ ಆದರ್ಶಗಳು ಎಲ್ಲರಿಗೂ ಶ್ರೀರಕ್ಷೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿ.ಗುರುಸಿದ್ದಮೂರ್ತಿ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಅವರ ಶೈಕ್ಷಣಿಕ ಬದುಕಿನಲ್ಲಿ ಉತ್ಸಾಹ ತುಂಬಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಎಲ್ಲಾ ಸಹಕಾರವನ್ನು ಸಮುದಾಯದ ಮುಖಂಡರುನೀಡಿದ್ಧಾರೆ. ನಿವೃತ್ತಿಹೊಂದಿದ ನೌಕರರನ್ನು ಸಹ ಆತ್ಮೀತವಾಗಿ ಸನ್ಮಾನಿಸಲಾಗಿದೆ. ಜಗಜ್ಯೋತಿಬಸವೇಶ್ವರರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವೆಂದರು. ಕಾರ್ಯಕ್ರಮ ಉದ್ದೇಶಿಸಿ ನಗರಸಭೆಯ ನೂತನ ಅಧ್ಯಕ್ಷೆ ಶಿಲ್ಪಮುರುಳಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ವೀರೇಶ್, ಜ್ಯೋತಿರಾಜ್, ಕೆ.ಎಂ.ಶಿವಸ್ವಾಮಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ವಾಣಿಜ್ಯೋದ್ಯಮಿ ಎಸ್.ರುದ್ರಮುನಿಯಪ್ಪ, ಎನ್.ಸತೀಶ್, ಎಚ್.ವಿ.ಪ್ರಸನ್ನಕುಮಾರ್, ವಂದನಬಸವರಾಜು, ಜಗದೀಶ್, ಡಿ.ಎಂ.ತಿಪ್ಪೇಸ್ವಾಮಿ, ಕಿರಣ್‌ಶಂಕರ್, ಸಿ.ಎಸ್.ಜಯಪ್ರಕಾಶ್, ಪದ್ಮನಾಗರಾಜು, ಮಂಜುಳಾರಾಜ್, ಡಾ.ಕೆ.ಎಂ.ಜಯಕುಮಾರ್, ಟಿ.ಪ್ರಭುದೇವ್, ಎಚ್.ವಿ.ನಾಗರಾಜು, ಬಿ.ಎಸ್.ಶಿವಪುತ್ರಪ್ಪ, ಡಿ.ಜೆ.ಕಿರಣ್‌ಶಂಕರ್, ನಗರಸಭಾ ಸದಸ್ಯರಾದ ಸಿ.ಎಂ.ವಿಶುಕುಮಾರ್, ಎಂ.ಸಾವಿತ್ರಮ್ಮ, ಕವಿತಾಬೋರಯ್ಯ, ನಾಮಿನಿಸದಸ್ಯ ನಟರಾಜ್, ಎಂ.ಆರ್.ರೇವಣ್ಣ, ಎಂ.ಬಿ.ವಿಜಯೇಂದ್ರ, ಕೆ.ಎಂ.ಕೋಟ್ರೇಶ್, ಡಾ.ಜಿ.ವಿ.ರಾಜಣ್ಣ, ಎಚ್.ಮಂಜುನಾಥ, ಜ್ಯೋತಿರಾಜ್ ಮುಂತಾದವರು ಭಾಗವಹಿಸಿದ್ದರು.

 

Share This Article
error: Content is protected !!
";