ಜೀವದ ಅಂಗು ತೊರೆದು ವಿದ್ಯಾರ್ಥಿನಿ ಜೀವ ಉಳಿಸಿದ ಶಿಕ್ಷಕ ರವಿಶಂಕರ್ ಗೆ ಕೋಟಿ ನಮನಗಳು-ರಘುಮೂರ್ತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದಲ್ಲಿ ಶನಿವಾರಂದು ಸರ್ಕಾರಿ ಶಾಲೆಯಲ್ಲಿ ನಾಗರಹಾವು ಕಡಿತಕ್ಕೊಳಗಾಗಿ ಒಂದನೇ ತರಗತಿಯ ವಿದ್ಯಾರ್ಥಿನಿ ಸೃಷ್ಠಿಗೌಡ ಮತ್ತು ಶಾಲಾ ಶಿಕ್ಷಕ ರವಿಶಂಕರ್ ಬಾಯಿಂದ ವಿಷ ತೆಗೆಯಲು ಯತ್ನಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಇಂದು ಬಸವೇಶ್ವರ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಘುಮೂರ್ತಿ ಅವರು, ವಿದ್ಯಾರ್ಥಿನಿ ಮತ್ತು ಶಿಕ್ಷಕ ಇಬ್ಬರ ಆರೋಗ್ಯವನ್ನು ವಿಚಾರಿಸಿದ್ದು ಆರೋಗ್ಯ ಸುಧಾರಣೆ ಆಗುತ್ತಿದ್ದು ಏನು ತೊಂದರೆ ಇಲ್ಲ, ಅಗತ್ಯವಾದ ಎಲ್ಲಾ ಸಹಕಾರವನ್ನು ಸರ್ಕಾರದಿಂದ ಮತ್ತು ವೈಯಕ್ತಿಕ ನೀಡಲಾಗುತ್ತದೆ. ಮಗುವಿನ ಆರೋಗ್ಯ ಸುಧಾರಣೆ ಆಗುತ್ತಿದ್ದು ಸಂಬಂಧಿಸಿದ ವೈದ್ಯರಿಗೆ ಯಾವುದೇ ಕೊರತೆ ಆಗದಂತೆ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು ಕುಟುಂಬ ಆತಂಕಪಡುವ ಅವಶ್ಯಕತೆ ಇಲ್ಲ, ಕುಟುಂಬದ ಜೊತೆ ನಾವಿದ್ದೇವೆ ಎಂದು ಕುಟುಂಬಕ್ಕೆ ಸಂತ್ವಾನ ಹೇಳಿದರು.

- Advertisement - 

ವಿದ್ಯಾರ್ಥಿನಿ ಹಾವು ಕಡಿದಿರುವ ಘಟನೆ ತುಂಬಾ ಸೂಕ್ಷ್ಮವಾದ ವಿಚಾರವಾಗಿದ್ದು ಇಂತಹ ಸಮಯದಲ್ಲಿ ಶಾಲೆಯ ಶಿಕ್ಷಕ ತಮ್ಮ ಜೀವದ ಅಂಗು ತೊರೆದು ವಿದ್ಯಾರ್ಥಿ ಜೀವ ರಕ್ಷಣೆ ಮಾಡಿರುವ ರವಿಶಂಕರ್ ಅವರಿಗೆ ಕೋಟಿ ನಮನಗಳು, ತಮ್ಮ ಜೀವ ಲೆಕ್ಕಿಸದೇ ಹಾವಿನ ವಿಷ ತೆಗೆದು ಸಮಯ ಪ್ರಜ್ಞೆ ಮೆರೆದಿದ್ದು ಅವರ ಕಾರ್ಯ ಎಲ್ಲಾರಿಗೂ ಮಾದರಿಯಾಗಲಿದೆ ಎಂದರು.

ಶಾಲೆಗಳಲ್ಲಿ ಶಿಕ್ಷಕರು ತಮ್ಮ ಶಾಲೆಯ ಅಕ್ಕ ಪಕ್ಕದಲ್ಲಿ ಸ್ವಚ್ಚತಗೆ ಒತ್ತು ನೀಡಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದೇನೆ.

- Advertisement - 

ಈ ಸಂದರ್ಭದಲ್ಲಿ ಡಿಡಿಪಿಐ ಮಂಜುನಾಥ್, ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಅಹೋಬಲ ಟಿವಿಎಸ್ ಮಾಲೀಕ ಅರುಣ್ ಕುಮಾರ್, ಶಿಕ್ಷಣ ಇಲಾಖೆ ಮಂಜುಬಾಬು ಮತ್ತು ಸ್ಥಳೀಯ ಮುಖಂಡರು ಇದ್ದರು.

 

 

 

Share This Article
error: Content is protected !!
";