ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಲೋಕಾರ್ಪಣೆ ಮಾಡಿದರು.
ಇದೇ ವೇಳೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಟಿ ರಮ್ಯಾ ಆಗಮಿಲಿಸಿ ಗಮನ ಸೆಳೆದರು. ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ
ಎದುರಿಗೆ ಸಿಕ್ಕ ನಟಿ ರಮ್ಯಾ ಬಳಿ ಡಿಕೆ ಶಿವಕುಮಾರ್, ಹಲೋ, ಹೌ ಆರ್ ಯೂ ಎಂದ ಡಿಸಿಎಂ ಡಿಕೆ ಶಿವಕುಮಾರ್. ಇದೇ ವೇಳೆ ರಮ್ಯಾ ಡಿಸಿಎಂ ಅವರನ್ನು ಪ್ರೀತಿಯಿಂದ ತಬ್ಬಿಕೊಂಡರೆ ಡಿಕೆ ಶಿವಕುಮಾರ್ ಅವರು ರಮ್ಯಾ ತಲೆ ಮುಟ್ಟಿ ಆಶೀರ್ವದಿಸಿದ ಪ್ರಸಂಗ ನಡೆಯಿತು.

