ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿಗಳು ಮಾಜಿ ಎಐಸಿಸಿ ಅಧ್ಯಕ್ಷರಾದ ದಿವಂಗತ ಶ್ರೀ ಎಸ್ ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ವಾಸಿಸುತ್ತಿದ್ದ ಅವರ ಮನೆಯನ್ನು ರಾಜ್ಯ ಸರ್ಕಾರ ವ್ಯಾಪಾರ ನೀತಿಯಲ್ಲಿ ಪಡೆದುಕೊಂಡಿದೆ. ಸುಮಾರು 4.18 ಕೋಟಿ ರೂಪಾಯಿ ಬೆಲೆ ನೀಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಶ್ರೀ ಎಸ್ ನಿಜಲಿಂಗಪ್ಪನವರ ಆಡಳಿತಾತ್ಮಕ ನೀತಿಯನ್ನು ಶಾಶ್ವತವಾಗಿ ಯುವ ಸಮಾಜಕ್ಕೆ ಪರಿಚಯಿಸಲು ನಿಜಲಿಂಗಪ್ಪನವರು ವಾಸಿಸುತ್ತಿದ್ದ ಮನೆಯನ್ನು ಮ್ಯೂಸಿಯಂ ಮಾಡಲು ಸರ್ಕಾರ ಮುಂದಾಗಿದ್ದುನಿಜಲಿಂಗಪ್ಪನವರ ವಂಶಸ್ಥರಿಂದ ಮನೆಯನ್ನು ವ್ಯಾಪಾರ ನೀತಿಯಲ್ಲಿ ಪಡೆದುಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯಸಭಾ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಕೆ ಸಿ ಚಂದ್ರಶೇಖರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮುರಳೀದರ್ ಹಾಲಪ್ಪ ನೀಡಿದ್ದಾರೆ.
4 ತಿಂಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಗೆ ಬಂದಿದ್ದ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಿಜಲಿಂಗಪ್ಪನವರ ನಿವಾಸಕ್ಕೆ ತೆರಳಿ ಮನೆಯನ್ನು ಸಂಪೂರ್ಣ ವೀಕ್ಷಿಸಿದರು.
ಈ ಸಮಯದಲ್ಲಿ ಚಿತ್ರದುರ್ಗದ ಹಿರಿಯ ಕಾಂಗ್ರೆಸ್ ಮುಖಂಡರುಗಳು ನಿಜಲಿಂಗಪ್ಪನವರು ಈ ಮನೆಯಲ್ಲಿ ಬಾಳಿ ಬದುಕಿದ ವಿವರವನ್ನು ಸಚಿವರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿದರ್ ಹಾಲಪ್ಪ, ಕಾರ್ಯಾಧ್ಯಕ್ಷ ಹಾಲೇಶ್, ಹಿರಿಯ ಉಪಾಧ್ಯಕ್ಷ ಡಿ ಟಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಂಪತ್, ಮೈಲಾರಪ್ಪ, ನಗರಾಧ್ಯಕ್ಷ ಲಕ್ಷ್ಮೀಕಾಂತ್ ಇವರೆಲ್ಲರ ಜೊತೆ ನಾನು ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಈ ಸಮಯದಲ್ಲಿ ಉಪಸ್ಥಿತರಿದ್ದರು.
ಲೇಖನ-ರಘು ಗೌಡ