ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಒಬ್ಬರೇ ಸಲ್ಲಿಸಿದ್ದರಿಂದ ತೆರವುಗೊಂಡ ಉಪಾಧ್ಯಕ್ಷರ ಸ್ಥಾನಕ್ಕೆ ತಾಲೂಕು ದಂಡಾಧಿಕಾರಿ ರೇಣುಕಾ ಇವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಸಾವಿತ್ರಮ್ಮ ಗುರುಸಿನ್ನಯ್ಯ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ತಹಶೀಲ್ದಾರ್ ಎಂ.ರೇಣುಕಮ್ಮ ಅವರು ಸಾಕಮ್ಮ ಅವರ ಆಯ್ಕೆ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಕಮ್ಮ ಕೆ ಓಬಣ್ಣ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನೇತ್ರಮ್ಮ ಜಿ.ಓಬಣ್ಣ, ಗ್ರಾಮ ಪಂಚಯಿತಿ ಅಭಿವೃದ್ಧಿ ಅಧಿಕಾರಿ ಜಿ.ಬಿ.ನಿಂಗಪ್ಪ, ಸದಸ್ಯರುಗಳಾದ ತಿಪ್ಪಮ್ಮ, ನಾಗರಾಜ್, ಸಾಕಮ್ಮ ಬೋರಣ್ಣ, ಚನ್ನಬಸಮ್ಮ, ಬಸಣ್ಣ, ಎಚ್ ಪಾಪಣ್ಣ, ದಾಸಯ್ಯ,
ಜಿ ಮಲ್ಲಪ್ಪ, ಜಿ ಗೌಡ್ ಸಣ್ಣಬಯ್ಯ, ಶಾಂತಮ್ಮ, ತಿಪ್ಪೇಸ್ವಾಮಿ, ಗಂಗಮ್ಮ, ರುದ್ರೇಶ್, ಬೆಸೆ ಪಾಪಣ್ಣ, ನೀಲಮ್ಮ, ಡಿಕೆ ಓಬಣ್ಣ, ಭಾಗ್ಯಮ್ಮ, ಸೋಮನಗೌಡ್ರು, ದುರ್ಗಮ್ಮ, ದುರ್ಗಪ್ಪ, ತಿಪ್ಪೇಸ್ವಾಮಿ, ಶಿವು ಅನುಸೂಯ, ಆಂಜಿನಪ್ಪ, ಮಾಜಿ ಅಧ್ಯಕ್ಷ ಶರಣೇಶ್, ಯುವ ಮುಖಂಡ ಎ.ರಾಜಣ್ಣ ಇದ್ದರು ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.