ತಳಸಮುದಾಯಗಳು ಸಂಘಟಿತರಾದರೆ ಮಾತ್ರ ವಿಕಸನ ಸಾಧ್ಯ: ಸಚಿವ ಸತೀಶ್ ಜಾರಕಿಹೊಳಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಪಂಗಡದಲ್ಲಿರುವ ವಾಲ್ಮೀಕಿ ನಾಯಕ ಸಮುದಾಯವೂ ಸೇರಿದಂತೆ ಎಲ್ಲ ತಳಸಮುದಾಯಗಳು ಸಂಘಟಿತರಾದರೆ ಮಾತ್ರ ಸಾಮಾಜಿಕ
,ರಾಜಕೀಯ, ಆರ್ಥಿಕ ವಿಕಸನ ಸಾಧ್ಯ. ಸಂಘಟನೆ ಕಾರ್ಯ ಎಂಬುದು ನಿರಂತರ ಪ್ರಕ್ರಿಯೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಗಾಂಧಿನಗರದ ಸ್ಯಾಂಕ್ಟಮ್ ಹೋಟೇಲಿನ ಸಭಾಂಗಣದಲ್ಲಿ ಅಗಸ್ಟ್ 20 ರ ಮಂಗಳವಾರ ಸಂಜೆ ಆಯೋಜಿಸಿದ್ದ ” ಪರಿಶಿಷ್ಟ ಪಂಗಡಗಳ ನೌಕರರು ಹಾಗೂ ಜನಪ್ರತಿನಿಧಿಗಳ ಸಮಾಲೋಚನೆ ಸಭೆ” ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

- Advertisement - 

ಶೋಷಿತ ಸಮಾಜದಲ್ಲಿ ಶಿಕ್ಷಣ ಪಡೆದು ನೌಕರಿ ಮಾಡುತ್ತಿರುವ ಜನರ ಮೇಲೆ ಹೆಚ್ಚು ಜವಾಬ್ದಾರಿಗಳಿವೆ.ಪರಿಶಿಷ್ಟ ಪಂಗಡದ ನೌಕರರು ತಮ್ಮ ವೃತ್ತಿ ಸಂಬಂಧಿತ ಮುಂಬಡ್ತಿ, ವರ್ಗಾವಣೆ, ಸ್ಥಳ ನಿಯುಕ್ತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಎದುರಿಸುತ್ತಿರುವ ಸಮಸ್ಯೆ , ಸವಾಲುಗಳನ್ನು ಸಂಘಟಿತರಾದಾಗ ‌ಮಾತ್ರ ಪರಿಹಾರ ಕಂಡುಕೊಳ್ಳಲು  ಮಾರ್ಗಗಳು ದೊರೆಯುತ್ತವೆ. ಕಾನೂನು ತಜ್ಞ ಎಲ್.ಜಿ.ಹಾವನೂರ ಹಾಗೂ ಅವರಿಗಿಂತ ಹಿಂದಿನಿಂದಲೂ ಸಮಾಜದ ಸಂಘಟನೆಗೆ ಅನೇಕರು ಶ್ತಮಿಸಿದ್ದಾರೆ.ಇದೊಂದು ನಿರಂತರ ಪ್ರಕ್ರಿಯೆ, ಪ್ರತಿಯೊಬ್ಬ ಪ್ರಜ್ಞಾವಂತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಮಹಾಸ್ವಾಮಿಗಳು ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ನಾವೆಲ್ಲ ಅಳವಡಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದರು.

- Advertisement - 

ಶಾಸಕರಾದ ಅನ್ನಪೂರ್ಣ ತುಕಾರಾಮ, ಕರೆಮ್ಮನಾಯಕ, ಅನೀಲ್ ಚಿಕ್ಕಮಾದು, ಟಿ.ರಘುಮೂರ್ತಿ, ಜೆ.ಎನ್. ಗಣೇಶ್ , ಡಾ.ಎನ್.ಟಿ.ಶ್ರೀನಿವಾಸ ,ಚನ್ನಗಿರಿಯ ಮುಖಂಡ ಹೊದಿಗೆರೆ ರಮೇಶ ಮತ್ತಿತರರು ಮಾತನಾಡಿದರು.

ಕರ್ನಾಟಕ ರಾಜ್ಯ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ವರಮೂರ್ತಿ ವೈ.ಪಿ.,ಲೋಕೇಶ ನಾಯಕ , ಪಂಪಾಪತಿ ಮತ್ತಿತರರು ನೌಕರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಈ ಕುರಿತು ಸಚಿವರಿಗೆ ಮನವಿ ಅರ್ಪಿಸಿದರು.

ಸಭೆಯಲ್ಲಿ ರಾಜ್ಯದ ಆನೇಕ ಜಿಲ್ಲೆಗಳಿಂದ ಸಮುದಾಯದ ಅಧಿಕಾರಿ ನೌಕರರು, ಸಮಾಜದ ಮುಖಂಡರುಗಳು, ನಿವೃತ್ತ ಅಧಿಕಾರಿಗಳು ಉಪಸ್ಥಿತರಿದ್ದರು.

ಅನ್ನಪೂರ್ಣ ಪ್ರಾರ್ಥಿಸಿದರು, ಮಂಜುನಾಥ ಡೊಳ್ಳಿನ ಸ್ವಾಗತಿಸಿದರು,ಸಂಘದ ಗೌರವಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗವಿಸಿದ್ದಪ್ಪ ಮುತ್ತಾಳ ನಿರೂಪಿಸಿದರು.

 

 

Share This Article
error: Content is protected !!
";