ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮುಂಗಾರಿಗೆ ಕೃಷಿ ಸಿದ್ಧತೆಯನ್ನು ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಭಾರತ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ನಡೆ ರೈತ ಕಡೆ ಎಂಬ ಧ್ಯೇಯೋದ್ದೇಶದೊಂದಿಗೆ ಮೇ 29 ರಿಂದ ಜೂನ್ 12,2025 ರವರೆಗೆ
ದೇಶಾದ್ಯಾಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ 5 ನೇ ದಿನದ ಅಂಗವಾಗಿ ಕನಸವಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಟಿ.ಕೆ. ಬೆಹರಾ, ನಿರ್ದೇಶಕರು ಮತ್ತು ಡಾ. ಶಂಕರ್, ವಿಶೇಷ ಅಧಿಕಾರಿ, ವಿಕಸಿತ ಕೃಷಿ ಸಂಕಲ್ಪ ಅಭಿಯಾನ, ಡಾ. ಸೆಂಥಿಲ್ ಕುಮಾರ್, ಮುಖ್ಯಸ್ಥರು, ಸಮಾಜ ವಿಜ್ಞಾನ ವಿಭಾಗ, ಐ.ಐ.ಹೆಚ್.ಆರ್. ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಟಿ.ಕೆ. ಬೆಹರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಮತೋಲನ ಪೋಷಕಾಂಶಗಳ ನಿರ್ವಹಣೆ,
ಲಘು ಪೋಷಕಾಂಶಗಳ ಮಹತ್ವ ಮತ್ತು ಬಳಕೆ, ನೈಸರ್ಗಿಕ ಕೃಷಿ, ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆ, ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವುದು, ಮಣ್ಣಿನ ಫಲವತ್ತತೆ ಕಾಪಾಡಲು ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ, ಸೂಕ್ಷ್ಮ ಪೋಷಕಾಂಶ ಮಿಶ್ರಣಗಳಾದ ತರಕಾರಿ ಸ್ಪೆಷಲ್, ಮಾವು ಸ್ಪೆಷಲ್, ದ್ರಾಕ್ಷಿ ಸ್ಪೆಷಲ್, ಬಾಳೆ ಸ್ಪೆಷಲ್ ಬಳಕೆ, ಜೈವಿಕ ನಿಯಂತ್ರಕಗಳಾದ ಸೂಡೋಮೊನಾಸ್, ಟ್ರೈಕೋಡರ್ಮಾ, ರಂಜಕ ಕರಗಿಸುವ ಬ್ಯಾಕ್ಟಿರಿಯಾ, ಅಜಟೋ ಬ್ಯಾಕ್ಟರ್, ಅಜೋಸ್ಪೆರಿಲ್ಲಮ್ ಇವುಗಳ ಬಳಕೆ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಪ್ರೋತ್ಸಾಹ ລ໖, ಸಕ್ರಿಯವಾಗಿ ಭಾಗವಹಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಡಾ. ವೀರನಾಗಪ್ಪ ಪಿ., ವಿಜ್ಞಾನಿ (ಮಣ್ಣು ವಿಜ್ಞಾನ), ಡಾ. ಗೋಪಾಲ್ ವೈ.ಎಮ್., ವಿಜ್ಞಾನಿ (ಕೃಷಿ ವಿಸ್ತರಣೆ) ಮತ್ತು ಐ.ಐ.ಹೆಚ್.ಆರ್. ಸಂಸ್ಥೆಯ ಡಾ. ಕೆ. ಹಿಮಬಿಂದು ಮತ್ತು ಡಾ. ಕೆ. ಪದ್ಮನಿ, ಹರೀಶ ಕುಮಾರ್, ಕೃಷಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ತಾಂತ್ರಿಕ ಮಾಹಿತಿ ನೀಡಿ, ರೈತರ ಸಮಸ್ಯೆಗಳಿಗೆ ಸಲಹೆ ನೀಡಿದರು. ಮುಂದುವರೆದು ವಿಜ್ಞಾನಿಗಳ ತಂಡ ರೈತರ ತಾಕುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸಲಹೆ ನೀಡಿದರು.
ವಿವಿಧ ವಿಜ್ಞಾನಿಗಳನ್ನೊಳಗೊಂಡ ಮೂರು ತಂಡಗಳು ಪ್ರತ್ಯೇಕವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರೇಪುರ, ದೊಡ್ಡಬೆಳವಂಗಲ, ದೊಡ್ಡ ಹೆಜ್ಜಾಜಿ, ಹಾದ್ರಿಪುರ, ಚಿಕ್ಕ ಹೆಜ್ಜಾಜಿ,ರಾಮೇಶ್ವರ, ಕನಸವಾಡಿ, ಕನ್ನಮಂಗಲ, ಕೆಂಜಿಗಾನಹಳ್ಳಿ, ಹೊನ್ನಾವರ, ಇನ್ನೂರು ಮತ್ತು ನೆಲಮಂಗಲ ತಾಲ್ಲೂಕಿನ ಯಂಟಿಗಾನಹಳ್ಳಿ, ಬಾವಿಕೆರೆ, ಲಿಂಗನಹಳ್ಳಿ, ಕೆಂಚನಹಳ್ಳಿ, ಯಲಚಗೆರೆ ಇತ್ಯಾದಿ ಗ್ರಾಮಗಳಲ್ಲಿ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಹಮ್ಮಿಕೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.