ರಾಜಕೀಯ ಮಾಡುವ ಸಮಯವಲ್ಲ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇದು ಖಂಡಿತ ರಾಜಕೀಯ ಮಾಡುವ ಸಮಯವಲ್ಲ!! ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ಬದುಕಿದ್ದ ಜನರ ಮುಖದಲ್ಲಿ ಸಾರ್ಥಕತೆಯ ಸಂಭ್ರಮವನ್ನು ನೋಡುವ ದಿನ!! ಎಂದು ಬಿಜೆಪಿ ತಿಳಿಸಿದೆ.

- Advertisement - 

ಕೇವಲ 2 ಕಿ.ಮೀ ಸೇತುವೆಗಾಗಿ ಅದೆಷ್ಟೋ ಜನ ನಿದ್ದೆಯಿಲ್ಲದ, ಹೊಟ್ಟೆಗೆ ಕೂಳಿಲ್ಲದ ದಿನಗಳನ್ನು ಕಳೆದಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಔಷಧಿಗೆ, ಮಳೆಗಾಲದಲ್ಲಿ ಒದ್ದೆಯಾದ ಬೆಂಕಿ ಪಟ್ಟಣಕ್ಕೆ ಮಮ್ಮಲ ಮರುಗಿದ್ದರು.

- Advertisement - 

ಬೆಂಗಳೂರಿನಲ್ಲಿ ಬಂದ ಒಂದು ಸಣ್ಣ ಮಳೆಗೆ 10 ತಾಸು ಮನೆ ಮುಂದೆ ಒಂದೆರೆಡು ಅಡಿ ನೀರು ನಿಂತರೆ ಜಲ ದಿಗ್ಬಂಧನ ಎನ್ನುವ ಈಗಿನ ಸ್ಥಿತಿಯಲ್ಲಿ ಒಂದಿಡಿ ಬದುಕನ್ನೆ ಶರಾವತಿ ನದಿಯ ಜಲ ದಿಗ್ಬಂಧನದಲ್ಲಿ ಕಳೆದವರ ಸ್ಥಿತಿ ಹೇಗಿರಬೇಡ..!!
ಆ ದ್ವೀಪದ ಜನರ ಮನೆಯಲ್ಲಿ ರಾತ್ರಿ ಹಣತೆಗಳು ಬೆಳಗುತ್ತಿದ್ದವು. ಆದರೆ ಅವರ ಎದೆಯಲ್ಲಿ ಚಿಗುರೊಡೆಯುತ್ತಿದ್ದ ಸೇತುವೆ ಎಂಬ ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದವರು ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು!!

ಇಂದು ರಾಷ್ಟ್ರಕ್ಕೆ ಸಮರ್ಪಣೆಯಾಗುತ್ತಿರುವ ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ನಿರ್ಮಾಣದ ಹಿಂದೆ ದಶಕಗಳ ಹೋರಾಟದ ಜೊತೆ ಜೊತೆಗೆ  ಬಿ.ಎಸ್.ಯಡಿಯೂರಪ್ಪ ಅವರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಅವಿಶ್ರಾಂತ ಶ್ರಮವಿದೆ ಎಂದು ಬಿಜೆಪಿ ತಿಳಿಸಿದೆ.

- Advertisement - 

ಯಡಿಯೂರಪ್ಪ ಅವರ ಕನಸಿನ ಕೂಸಾಗಿದ್ದ ಈ ಸೇತುವೆಗೆ ತಾವು 2008 ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಅಂದು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ.

ಮುಂದೆ 2014 ರಲ್ಲಿ ಯಡಿಯೂರಪ್ಪ ಅವರು ಸಂಸದರಾದಾಗ ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಈ ಕನಸಿನ ಸೇತುವೆಗೆ ಮತ್ತೆ ಜೀವ ಬಂತು. ಆದರೆ ಸಿಗಂದೂರಿನ ಬಳಿ ಯಾವುದೆ ದೊಡ್ಡ ನಗರ ಪ್ರದೇಶಗಳು ಇಲ್ಲದ ಕಾರಣ ಹಾಗೂ ಈ ರಾಷ್ಟ್ರೀಯ ಹೆದ್ದಾರಿಗಳು ಇರದ ಕಾರಣ ನದಿಗೆ ಅಡ್ಡಲಾಗಿ ಬೃಹತ್‌ ಸೇತುವೆ ನಿರ್ಮಾಣ ಕಷ್ಟಸಾಧ್ಯ ಎಂಬುದು ಮನವರಿಕೆಯಾಯಿತು.

ಬಳಿಕ ಬೈಂದೂರು ಹಾಗೂ ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿ ಸೇತುವೆ ನಿರ್ಮಾಣ ಮಾಡಬಹುದು ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಒಪ್ಪಿಸಿದರು, ಆದರೆ ಸೇತುವೆ ನಿರ್ಮಾಣ ಕತೆ ಇಲ್ಲಿಗೆ ಮುಗಿಯಲಿಲ್ಲ. ಬೈಂದೂರು ಹಾಗೂ ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಸಿಗಂದೂರು ಬರುವುದಿಲ್ಲ ಎಂಬ ಕಾರಣಕ್ಕೆ ಸೇತುವೆ ನಿರ್ಮಾಣ ಹೇಗೆ ಎಂಬ ಚಿಂತೆ ಕಾಡಿತು ಎಂದು ಬಿಜೆಪಿ ತಿಳಿಸಿದೆ.

ಆದರೆ ಯಡಿಯೂರಪ್ಪನವರು ಸಿಗಂದೂರು ಹಾಗೂ ಮರಕುಟಕ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಸೇತುವೆ ನಿರ್ಮಿಸಲೆಬೇಕೆಂದು ಹಠ ಹಿಡಿದ ಪರಿಣಾಮ ಕೊನೆಗೂ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆಯಿತು.  68ಕಿ.ಮೀ ರಸ್ತೆಯನ್ನು ಸೇತುವೆಗಾಗಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸುವಂತೆ ಮಾಡಿದ್ದು ಯಡಿಯೂರಪ್ಪನವರಿಗೆ ಸೇತುವೆ ಮೇಲೆ ಇದ್ದ ಪ್ರೀತಿ ಅವರ ಛಲ ಹಾಗೂ ಕಾರ್ಯಬದ್ಧತೆಗೆ ಸಾಕ್ಷಿ!! ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ಏನಿದು ಸೇತುವೆ-
2019ರಲ್ಲಿ ಶಂಕುಸ್ಥಾಪನೆಯಾಗಿದ್ದ ಸೇತುವೆ ಸೋಮವಾರ ಲೋಕಾರ್ಪಣೆಯಾಗಿದೆ. 16 ಮೀಟರ್‌ ಅಗಲ, 2.23 ಕಿ.ಮೀ ಉದ್ದದ ಈ ಕೇಬಲ್‌ ಸೇತುವೆಗೆ ಒಟ್ಟು 473 ಕೋಟಿ ವೆಚ್ಚವಾಗಿದೆ. ಈ ಐತಿಹಾಸಿಕ ಘಳಿಗೆಯನ್ನು ಶರಾವತಿ ಹಿನ್ನೀರಿನ ಜನ, ಇಷ್ಟು ವರ್ಷಗಳ ಕಾಲ ದ್ವೀಪವಾಸಿಗಳಾಗಿದ್ದ ತುಮರಿ-ಬ್ಯಾಕೋಡಿನ ಜನ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

ಸಿದ್ದರಾಮಯ್ಯ ಅವರ ಹೃದಯದಲ್ಲಿ ನಿಜಕ್ಕೂ ಸಮಾಜವಾದಿ ಪ್ರಜ್ಞೆ ಇದ್ದಿದ್ದರೆ ಸೇತುವೆ ಉದ್ಘಾಟನಾ ದಿನಾಂಕವನ್ನು ಮುಂದೂಡಿ ಎಂದು ಕ್ಯಾತೆ ತೆಗೆಯುತ್ತಿರಲ್ಲಿಲ್ಲ, ಆದರೆ ಅವರ ಹೃದಯದಲ್ಲಿ ಮಜಾವಾದಿ ಇರುವ ಕಾರಣ ಇಂತಹ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಒಂದು ಕಲ್ಲನ್ನು ಸಹ ನೀಡದೆ ಈಗ ಸೇತುವೆ ಉದ್ಘಾಟನೆಗೆ ಬಂದು ಏನು ಭಾಷಣ ಮಾಡುವುದು, ಕೇಂದ್ರ ಸರ್ಕಾರವನ್ನು ಹೇಗೆ ಟೀಕಿಸುವುದು ಎಂಬ ಗೊಂದಲಕ್ಕೆ ಸಿದ್ದರಾಮಯ್ಯ ಬಿದ್ದಿರಬಹುದು ನಾಯಕರು ವ್ಯಂಗ್ಯವಾಡಿದ್ದಾರೆ.

ನಿವೃತ್ತಿ ಕಾಲಕ್ಕೆ ಬಂದಿದ್ದರೂ ರಾಜಕಾರಣವನ್ನು ಬದಿಗಿಟ್ಟು ವಿಶಾಲವಾದ ಮನಸ್ಥಿತಿಯನ್ನು ಸಿಎಂ ಸಿದ್ದರಾಮಯ್ಯ ಅವರು ಬೆಳೆಸಿಕೊಳ್ಳದಿರುವುದು ನಿಜಕ್ಕೂ ದುರ್ದೈವ. ಆ ಸಿಗಂದೂರು ಚೌಡೇಶ್ವರಿ ದೇವಿ ಸಿದ್ದರಾಮಯ್ಯ ಅವರಿಗೆ ಸದ್ಬುದ್ಧಿ ನೀಡಲಿ ಎಂದು ಬಿಜೆಪಿ ಪ್ರಾರ್ಥಿಸಿದೆ.

 

Share This Article
error: Content is protected !!
";