ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೇಶ ನಮಗೆನು ಕೊಟ್ಟಿದೆ ದೇಶಕ್ಕೆ ನಾವೇನು ಸೇವೆ ಸಲ್ಲಿಸಿದ್ದೀವಿ ಎಂಬುದರ ಬಗ್ಗೆ ತಿಳಿದು ನಾವು ಪಡೆದಿದ್ದನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಬದುಕು ಸಾರ್ಥಕವಾಗಲಿದ್ದು, ವಿದ್ಯಾವಂತ ಸಮುದಾಯದ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಸ್ವಾರ್ಥ ಬಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸಬೇಕಿದೆ ಎಂದು ಶಾಸಕ. ದೀರಜ್ ಮುನಿರಾಜು ಹೇಳಿದರು.
ನಗರದ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು, ಎಚ್.ಇ.ಎಚ್.ಎಸ್ ಪ್ಯಾರಾ ಮೆಡಿಕಲ್ ಕಾಲೇಜು ವಾರ್ಷಿಕೋತ್ಸವದ ಸೂರ್ಯ ಸಂಭ್ರಮ-2025 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಕಡಿಮೆ ಅವ ಜೀವಿಸಿದ್ದರೂ ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದರು. ನಮ್ಮ ಸಂಸ್ಕøತಿ ಪರಂಪರೆಗಳನ್ನು ಜಗತ್ತಿಗೇ ಪರಿಚಯಿಸಿದ್ದರು. ಹುಟ್ಟಿದ ಮನುಷ್ಯ ಸಾಯಲೇಬೇಕೆಂಬುದು ಪ್ರಕೃತಿಯ ನಿಯಮ ಇರುವಾಗ ನಾವು ಸಮಾಜಕ್ಕೆ ಏನನ್ನು ನೀಡುತ್ತೇವೆ ಎನ್ನುವುದು ಮುಖ್ಯವಾಗಿದೆ. ಪಿಯುಸಿ ನಂತರ ವೃತ್ತಿಪರ ಕೋರ್ಸ್‍ಗಳಿಗೆ ಸಾಕಷ್ಟು ಆಯ್ಕೆ ಗಳಿದ್ದು, ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಉದ್ಯೋಗವಕಾಶಗಳಿಗೆ ತಕ್ಕಂತ ಕೌಶಲ್ಯ ರೂಢಿಸಿ ಕೊಳ್ಳಬೇಕಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ನಾವು ತಪ್ಪು ಮಾಡಿದಾಗ ದೇವರು ಶಿಕ್ಷಸುತಾನೆ ಎನ್ನುವ ಎಚ್ಚರ ಇರಬೇಕು. ನಾವು ಮಾಡುವ ಪ್ರತಿ ಕಾರ್ಯದಲ್ಲಿ ಶ್ರದ್ದೆ ಇರಬೇಕು. ತಾಯಿ, ತಂದೆ, ಗುರುಹಿರಿಯರನ್ನು ಗೌರವಿಸಬೇಕು. ಪೋಷಕರು ಮಕ್ಕಳಿಗೆ ಆದ್ಯಾತ್ಮ, ಸಂಸ್ಕಾರಗಳನ್ನು ತಿಳಿ ಹೇಳಬೇಕು ಎಂದು ಕಿವಿ ಮಾತು ಹೇಳಿದರು.
ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇವತ್ತಿನ ವ್ಯವಸ್ಥೆ ಮತ್ತು ಸಮಾಜದಲ್ಲಿ ಪ್ರತಿಯೊಂದಕ್ಕೂ ತರಬೇತಿ ಹಾಗೂ ಮಾರ್ಗದರ್ಶನ ಇರುತ್ತದೆ. ತಮಗೆ ಯಾವುದು ಆಸಕ್ತಿ ಇದೆಯೋ ಅದನ್ನು ಆಯ್ಕೆ ಮಾಡಿಕೊಂಡರೆ ಉತ್ತಮ. ಬಲವಂತದಿಂದ ಮಾಡಿಕೊಂಡ ವಿಷಯಗಳು ಮುಂದೆ ಸಂಕಷ್ಟ ತಂದೊಡ್ಡುತ್ತವೆ. ಈ ದಿಸೆಯಲ್ಲಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಡಾ.ಮಾಲಾ ವಿಜಯಕುಮಾರ್, ಸುಜ್ಞಾನ ದೀಪಿಕಾ ಸಂಸ್ಥೆಯ ನಿರ್ದೇಶಕ ಎಂ ಎಸ್ ಮಂಜುನಾಥ್, ಪ್ರಾಂಶುಪಾಲ ಎಂ ಸಿ ಮಂಜುನಾಥ್, ಗೌ ರಾ ರಾಮಮೂರ್ತಿ, ಹೆಚ್‍ಇ ಎಚ್‍ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ .ರಾ.ರಾಮಮೂರ್ತಿ, ವಿದ್ಯಾ ಹಾಗೂ ವಿಧ್ಯಾರ್ಥಿಗಳು ಹಾಜರಿದ್ದರು.