ಚಂದ್ರವಳ್ಳಿ ನ್ಯೂಸ್, ಹರಿಹರ:
ವಕ್ಫ್ ಮಂಡಳಿಯ ಬಹಳಷ್ಟು ಆಸ್ತಿ ರಾಜಕಾರಣಿ, ಮುಖಂಡರ ಕೈವಶದಲ್ಲಿ ಸಿಲುಕಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಗಳಾಗಿ ವೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಎಂದು ಕಿಡಿ ಕಾರಿದರು.
ಅಕ್ರಮವಾಗಿ ಹಿಂದೂಗಳ ಭೂಮಿ ಕಬಳಿಸಲು ಹೊರಟಿರುವ, ರಾಜ್ಯ ವಕ್ಪ್ ಲ್ಯಾಂಡ್ ಜಿಹಾದ್ ವಿರುದ್ದ ರಾಜ್ಯ ಬಿಜೆಪಿ ವತಿಯಿಂದ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ, ನಮ್ಮ ಭೂಮಿ ನಮ್ಮ ಹಕ್ಕು ಬಿಜೆಪಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,54 ಸಾವಿರ ಎಕರೆ ಭೂಮಿ ವಕ್ಪ್ ಭೋರ್ಡಿ ಗೆ ಸೇರಿದ್ದಿದೆ.ಅದರಲ್ಲಿ 24 ಸಾವಿರ ಎಕರೆ ಭೂಮಿಯಲ್ಲಿ ದೊಡ್ಡ- ದೊಡ್ಡ ರಾಜಕಾರಣಿಗಳು, ಮುಸ್ಲಿಂ ಸಮಾಜದ ಮುಖಂಡರೆನ್ನಿಸಿ ಕೊoಡವರು ಕಾಂಪ್ಲೆಕ್ಸ್, ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡು ತಮ್ಮದಾಗಿಸಿಕೊಂಡಿದ್ದಾರೆ.
ವಕ್ಪ್ ಬೋರ್ಡ್ ಹುಟ್ಟಿದ್ದು ಭಾರತ ಸ್ವಾತಂತ್ರ್ಯ ನಂತರ. ಆದರೆ, 11ನೇ ಶತಮಾನದ ಇತಿಹಾಸ ಪ್ರಸಿದ್ದ ರಾಜ್ಯದ ಮಠ,ಮಂದಿರಗಳು ,ದೇವಸ್ಥಾನಗಳು,ಹಿಂದೂಗಳಿಗೆ ಸೇರಿದ ಕೃಷಿ ಭೂಮಿಯ ಪಹಣಿ ಯಲ್ಲಿ ಇಂದು ವಕ್ಪ್ ಬೋರ್ಡ್ ಹೆಸರು ಬರುತ್ತಿದೆ ಎಂದರೆ, ಇದು ಎಂಥಹ ವಿಪರ್ಯಾಸ. ಈ ಹಿಂದೆ ವಕ್ಪ್ ಬೋರ್ಡಿಗೆ ನಮ್ಮವರೆ ಅಧ್ಯಕ್ಷರಾಗಿದ್ದರು.ಅವರು ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ
ರಾಜ್ಯಾಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೇಸ್ ಸರ್ಕಾರ ವಕ್ಪ್ ಬೋರ್ಡ್ ಹೆಸರಿನಲ್ಲಿ, ರಾಜ್ಯದ ಅನ್ನದಾತರನ್ನು ಒಕ್ಕಲೆಬ್ಬಿಸಿದ್ದಲ್ಲದೆ ದಲಿತರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದು, ಬೆಳಗಾವಿ ಅಧಿವೇಶನ ದೊಳಗಾಗಿ ಭೂಮಿಗೆ ಸಂಭoದಿಸಿದoತೆ 1974 ರ ಗೆಜೆಟ್ ರದ್ದು ಪಡಿಸಬೇಕು.ಇಲ್ಲದಿದ್ದಲ್ಲಿ ವಿಧಾನ ಸಭೆಯ ಒಳಗೂ ಮತ್ತು ಹೊರಗೂ ನ್ಯಾಯಕ್ಕಾಗಿ ಆಗ್ರಹಿಸಿ ಬಿಜೆಪಿ ಉಗ್ರ ಹೋರಾಟ ನಡೆಸುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಮೀರ ಅಹ್ಮದ್‌ಖಾನ್ ಅವರು ರಾಜ್ಯದ ಜಿಲ್ಲೆ-ಜಿಲ್ಲೆಗೆ ತೆರಳಿ ವಕ್ಪ್ ಬೋರ್ಡ ಸಭೆ ನಡೆಸಿ, ತೆಗೆದುಕೊಂಡಿರುವ ನಿರ್ಣಯದಂತೆ ರಾಜ್ಯ ಸರ್ಕಾರವಿಂದು ರಾಜ್ಯದ ಅನ್ನದಾತ ರೈತರನ್ನು ಒಕ್ಕಲೆಬ್ಬಿಸಿದ್ದಲ್ಲದೆ, ಹಿಂದೂ ಜನಾಂಗದ ಮಠ ಮಂದಿರಗಳನ್ನು, ದಲಿತರ ಆಸ್ತಿಗಳ ಪಹಣಿಯಲ್ಲಿ ವಕ್ಪ್ ಬೊರ್ಡ ಹೆಸರು ಬರುವಂತೆ ಮಾಡಿ ರಾಜ್ಯಾದ್ಯಂತ ರೈತರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದೆ.
ಭಾರತ ಸ್ವಾತಂತ್ರ್ಯ ನಂತರ ದೇಶದಲ್ಲಿ ನಾಯಕರೆನ್ನಿಸಿಕೊಂಡ ವರು ದೇಶವನ್ನು ಇಬ್ಬಾಗಮಾಡಿ ಭಾರತ-ಫಾಕಿಸ್ತಾನವೆಂದು ಬೇರ್ಪಡಿಸಿದರು.ನಂತರ 1971 ರಲ್ಲಿ ಬಾಂಗ್ಲಾ ದೇಶ ಮಾಡಿದರು. ಅಂದಿನ ಕಾಲದಲ್ಲಿ ಹುಟ್ಟಿದ್ದೆ ಈ ವಕ್ಪ್ ಕಮಿಟಿ ಹೀಗಾಗಿ ಭಾರತ ದಲ್ಲಿ ಹಿಂದೂಗಳ ಭಾವನೆಗಳಿಗೆ, ಆಸ್ತಿ-ಪಾಸ್ತಿಗಳಿಗೆ ಧಕ್ಕೆ ಉಂಟಾಗುತ್ತಾ ಸಾಗಿದೆ.ಅದಕ್ಕೆ ಪ್ರಥಮ ಪ್ರಧಾನಿ ಜವಾಹರಲಾಲ್ ನೇಹರು ನಂತರ ಇಂದಿರಾ ಗಾಂದಿ ಕೊಟ್ಟಕೊಡುಗೆಯೇ ವಕ್ಪ್ ಬೋರ್ಡ್ ನೆಹರು ಮನೆತನ ದೇಶದಲ್ಲಿ ಇಂಥಹ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂದು ವಿವರಿಸಿದರು.
ಯು ಟರ್ನ ಹೊಡೆಯುತ್ತಿರುವ ಸಿ.ಎಂ ಸಿದ್ರಾಮುಲ್ಲಾಖಾನ್ : ವಕ್ಪ್ ಬೋರ್ಡ್ ಕೆಲಸವನ್ನು ಸರ್ಕಾರ ಹೇಳಿದಂತೆ ನಾನು ಮಾಡಿದ್ದೇನೆ ಎಂದು ಬಿ.ಜಡ್ ಜಮಿರ್‌ಅಹ್ಮದ್‌ಖಾನ್ ರವರೆ ಹೇಳುತ್ತಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಎಕರೆ ಆಸ್ತಿ ವಕ್ಪ್ ಮಂಡಳಿಗೆ ಸೇರಿದ್ದಿದೆ ಎನ್ನುತ್ತಾರೆ ಅಲ್ಲದೆ ರೈತರ ಭೂಮಿಯ ಪಹಣಿ 11ನೇ ಕಾಲಂನಲ್ಲಿ ಆಗಿರುವ ದೋಷವನ್ನು ಸರಿಪಡಿಸುತ್ತೇವೆ.ರೈತರು ಭಯಪಡಬೇಡಿ ಎನ್ನುತ್ತಾರೆ ಸಿ.ಎಂ ಸಿದ್ರಾಮುಲ್ಲಾಖಾನ್ ಇದು ಎಷ್ಠರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರು.
ಭಾನುವಳ್ಳಿ ಗ್ರಾಮದ ರುದ್ರ ಭೂಮಿ-ಖಭರಸ್ಥಾನವಾಗಿದೆ ಇದುವೆ ಸಿ.ಎಂ ಸಿದ್ದರಾಮಯ್ಯನವರು ಹೇಳುವ ಉತ್ತರ. ದಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಹಾಗೂ ಸಿಂದಗಿಯ ವಿರಕ್ತ ಮಠ, ಚಳ್ಳಕೆರೆಯಲ್ಲಿ ಚರ್ಮ ಹದ ಮಾಡುವ ದಲಿತರ ಶೆಡ್ ಹಾಗೂ ಅದರ ಅಕ್ಕಪಕ್ಕದ ದಲಿತರ ಮನೆಗಳು,ದಾವಣಗೆರೆ ಜಿಲ್ಲೆ ಯಲ್ಲಿ ಹಿಂದೂಗಳ ಸಾವಿರಾರು ಎಕರೆ ಭೂಮಿ ಇಂದು ವಕ್ಪ್ ಭೋರ್ಡ್ ಹೆಸರಿಗೆ ವರ್ಗಾವಣೆಯಾಗಿರುವುದೆ ಇದಕ್ಕೆ ಸಾಕ್ಷಿ ಎಂದು ಚಲವಾದಿ ನಾರಾಯಣಸ್ವಾಮಿ ಖಾರವಾಗಿ ಹೇಳಿದರು.
ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ ಮಾತನಾಡಿ, ವಕ್ಪ್ ಕಮಿಟಿ ರಾತ್ರೋ ರಾತ್ರಿ ತೆಗೆದುಕೊಂಡಿರುವ ನಿರ್ಣಯದ ಪ್ರಕಾರ ಇಂದೂ ರಾಜ್ಯದ ಅನೇಕ ಹಿಂದೂ ರೈತರ ಜಮಿನು, ಮಠ-ಮಂದಿರಗಳು ವಕ್ಪ್ ಹೆಸರಿಗೆ ವಗಾವಣೆ ಆಗಿವೆ. ಇಂದು ನನ್ನಾಕಿ ಹೆಸರು ನಾಗರತ್ನಾ ಹಿಂದೂ ಆಗಿದ್ದು, ನಾಳೆ ಅವಳ ಹೆಸರು ನಸರಿನ್ ಎಂದು ಮುಸ್ಲಿಂ ಆಗುವುದೇನೋ ಎಂಬ ಭಯ ನನ್ನು ಕಾಡುತ್ತಿದೆ ಎಂದು ರೈತರನ್ನು ನೇರೆದಿದ್ದ ಜನರನ್ನು ಪಾಟೀಲ ನಗೆಗಡಲಲ್ಲಿ ತೇಲಿಸಿದರು.
ಜನಜಾಗೃತಿ ಸಮಾವೇಶದಲ್ಲಿ ಕೋಲಾರ ಮಾಜಿ ಸಂಸದ ಮುನಿ ಸ್ವಾಮಿ, ಮಾಜಿ ಸಚಿವ ಸುನಿಲ್‌ಕುಮಾರ್, ಹೆಚ್.ಪಿ ರಾಜೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಮಾಜಿ ಮುಖ್ಯ ಸಚೇತಕ ಎ.ಎಚ್.ಶಿವಯೋಗಿ ಸ್ವಾಮಿ,ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ, ಮಾಜಿ ಅಧ್ಯಕ್ಷ ಹನಗವಾಡಿ ಎಸ್.ಎಂ. ವೀರೇಶ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಅಣ್ಣಪ್ಪ ಐರಣಿ ಮುಂತಾದವರು ಮಾತನಾಡಿದರು.
ಈ ಸಮಯದಲ್ಲಿ ಕಡ್ಲೆಬಾಳು ಧನಂಜಯ, ಅನಿಲಕುಮಾರ ನಾಯ್ಕ, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ ಎಂ.ಪಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ, ವೀರೇಶ ಆದಾಪುರ, ಚಂದ್ರಶೇಖರ ಪೂಜಾರ, ಮಾಡಾಳು ಮಲ್ಲಿಕಾರ್ಜುನ, ಭಾನುವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಎಂ.ಕೆ ಪಾಟೀಲ, ಜಿಗಳಿ ಹನುಮಗೌಡ, ಭಾನುವಳ್ಳಿ ಮಂಜುನಾಥ, ನ್ಯಾಯವಾದಿ ನಾಗರಾಜ, ಮನೋಜ ಪಕ್ಷದ ಮುಖಂಡರು ಸುತ್ತಮುತ್ತಲ ಗ್ರಾಮಗಳ ರೈತರು ಸೇರಿದಂತೆ ನೂರಾರು ಸಾರ್ವಜನಿಕರು ಭಾಗಿಯಾಗಿದ್ದರು.