ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇದುಪರ್ವಕಾಲವೆಂದು ಬಾವಿಸುವೆ. ಕಾರಣ, ಅನೇಕ ಲೇಖಕರು, ಸಂಶೋಧನೆ ನಡೆಸಿ ಸಮಾಜವನ್ನು ಬದಲಾಯಿಸುವುದಲ್ಲದೆ, ಸಾಹಿತ್ಯ ಕ್ಷೇತ್ರಕ್ಕೂ ಮೆರಗು ನೀಡುವಂತಹ ಕೃತಿಗಳನ್ನು ನೀಡುತ್ತಾ ಬಂದಿದ್ಧಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ಸಾಧಕರು ನೀಡಿದ ಕೊಡುಗೆ ಇಂದಿಗೂ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅದೇ ರೀತಿ ತಾಲ್ಲೂಕಿನ ದೇವರಮರಿಕುಂಟೆಯ ಗ್ರಾಮೀಣ ಪರಿಷತ್ ಸಂಸ್ಥಾಪಕರು, ಜನರ ನಾಡಿಮಿಡಿತಬಲ್ಲವರು, ಕನ್ನಡ ಸಾಹಿತ್ಯ ಕ್ಷೇತ್ರದ ಬಗ್ಗೆ ಅಪಾರವಾದ ಜ್ಞಾನ ಹೊಂದಿರುವ ಬಿ.ತಿಪ್ಪಣ್ಣ ಮರಿಕುಂಟೆ ’ನಿಷಾದರ ಪ್ರಾಚೀನತೆ ಹಾಗೂ ವಾಲ್ಮೀಕಿ’ ಮಹಾನ್ ಕೃತಿಯನ್ನು ರಚಿಸಿ ಇಂದು ಬಿಡುಗಡೆಯಾಗಿದೆ. ಈ ಕೃತಿಯಲ್ಲಿ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಉಲ್ಲೇಖಿಸಿದೆ ವೇದ-ಉಪನಿಷತು ಮೊದಲೇ ಬುಡಕಟ್ಟು ಸಮುದಾಯದ ಇತ್ತು ಎಂಬುವುದನ್ನು ನಿರೂಪಿಸಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಮಹಾಸ್ವಾಮಿಗಳು ತಿಳಿಸಿದರು.
ಅವರು, ಭಾನುವಾರ ಛೇಂರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ನೃತ್ಯನಿಕೇತ, ದೇವರಮರಿಕುಂಟೆ ಗ್ರಾಮೀಣಸಾಹಿತ್ಯಪರಿಷತ್ ಸಂಯುಕ್ತಾಶ್ರಯದಲ್ಲಿ ’ನಿಷಾದರ ಪ್ರಾಚೀನತೆ ಹಾಗೂ ವಾಲ್ಮೀಕಿ’ ಕೃತಿಬಿಡುಗಡೆ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು. ಬಿ.ತಿಪ್ಪಣ್ಣಮರಿಕುಂಟೆ ಕಳೆದ ಹಲವಾರು ವರ್ಷಗಳಿಂದ ಮಠದೊಡನೆ ನಿಕಟ ಸಂಪರ್ಕ ಹೊಂದಿದ್ದಾರೆ. ಸಮಾಜದ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ವಿಶೇಷ ಚಿಂತನೆ ನಡೆಸುವ ವ್ಯಕ್ತಿಯಾಗಿದ್ಧಾರೆ. ಸರಳತೆಯ ಜೀವನದಲ್ಲಿ ಅಸದಾರಣಾ ಸಾಧನೆಯನ್ನು ಮಾಡುವ ವ್ಯಕ್ತಿ ಅವರು ಎಂದರು.
ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಹರ್ತಿಕೋಟೆವೀರೇಂದ್ರಸಿಂಹ ಕೃತಿಯ ಬಗ್ಗೆ ಮಾತನಾಡಿ, ಲೇಖಕ ಬಿ.ತಿಪ್ಪಣ್ಣಮರಿಕುಂಟೆ ಕೃತಿರಚನೆ ಸಂದರ್ಭದಲ್ಲಿ ಪ್ರತಿಯೊಂದು ಹಂತದಲ್ಲೂ ಹೆಚ್ಚು ಸಂಶೋಧನೆ ನಡೆಸಿ ಕೃತಿ ರಚಿಸಿದ್ಧಾರೆ. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಈ ಕೃತಿ ವಿಶೇಷ ಸ್ಥಾನಮಾನ ಪಡೆಯಲಿದೆ ಎಂಬ ವಿಶ್ವಾಸ ನನ್ನದು ಎಂದರು. ನಾಟಕ ಅಕಾಡೆಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ(ಪಿಟಿಎಸ್), ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಶಿವಲಿಂಗಪ್ಪ, ಮಕ್ಕಳ ತಜ್ಞ, ತಿಪ್ಪಣ್ಣಮರಿಕುಂಟೆ ಸಹಪಾಠಿ ಡಾ.ಚಂದ್ರನಾಯ್ಕ, ಕನ್ನಡ ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ, ತಿಪ್ಪಣ್ಣಮರಿಕುಂಟೆಯವರ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಈ ಕೃತಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಶುಭಹಾರೈಸಿದರು.
ನಿಷದಾರ ಪ್ರಾಚೀನತೆ ಹಾಗೂ ವಾಲ್ಮೀಕಿ ಕೃತಿ ರಚಿಸಿದ ಹಿರಿಯ ಲೇಖಕ ತಿಪ್ಪಣ್ಣಮರಿಕುಂಟೆಯನ್ನು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಬಿಜೆಪಿ ಮುಖಂಡ ಬಾಳೆಮಂಡಿರಾಮದಾಸ್, ತಾಲ್ಲೂಕು ಕನ್ನಡ ಸಾಹಿತ್ಯಪರಿಷತ್ ಜಿ.ಟಿ.ವೀರಭದ್ರಸ್ವಾಮಿ, ನೃತ್ಯನಿಕೇತನ ಸಂಸ್ಥಾಪಕ ಯು.ಎಸ್.ವಿಷ್ಣುಮೂರ್ತಿರಾವ್, ಸಂಜೀವಿನಿಕ್ಲಿನಿಕ್ ಎಂ.ಎನ್.ಮೃತ್ಯುಂಜಯ, ನಿಸರ್ಗಗೋವಿಂದರಾಜು, ಎಲ್‌ಐಸಿತಿಪ್ಪೇಸ್ವಾಮಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪ್ರಾರಂಭದ ಹಂತದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಂಡು ಪಕ್ಷ ಹಾಗೂ ಸಾಹಿತ್ಯಕ್ಕೆ ಸಮಾನವಾದ ಮಾನ್ಯತೆ ನೀಡುವ ಬಿ.ತಿಪ್ಪಣ್ಣಮರಿಕುಂಟೆ ಈ ಕೃತಿ ರಚನೆ ಮೂಲಕ ತಮ್ಮಲ್ಲಿ ಅಡಗಿರುವ ಸಾಹಿತ್ಯದ ಜ್ಞಾನವನ್ನು ಎಲ್ಲರಿಗೂ ಉಣಬಡಿಸಿದ್ದಾರೆ. ಪ್ರಸ್ತುತ ಈ ಕೃತಿಯಲ್ಲಿ ಬದಲಾವಣೆ ಕಾಣುವಂತಹ ಅನೇಕ ಅಂಶಗಳ ಬಗ್ಗೆ ಗಮನಸೆಳೆಯಲಾಗಿದೆ.
ಲೇಖಕ ಬಿ.ತಿಪ್ಪಣ್ಣಮರಿಕುಂಟೆಯವರ ಚಿಂತಾನ ಶಕ್ತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸದಾಕಾಲ ಹೆಚ್ಚು ಮಾತನಾಡದೆ ಸರಳವಾದ ನಡೆನುಡಿ ಹೊಂದಿರುವ ಇವರು ಮಹಾನ್ ಕೃತಿ ರಚಿಸಿದ್ಧಾರೆಂದರೆ ಬೇರೆಯವರು ಚಕಿತರಾಗಬಹುದು ಆದರೆ ತಾಲ್ಲೂಕು ಸಾಹಿತ್ಯ ಕ್ಷೇತ್ರದ ಪುಣ್ಯನೆಲೆ ಎಂದು ಬಾವಿಸುವೆ. ತರಾಸು, ಬೆಳಗೆರೆ ಕೃಷ್ಣಶಾಸ್ತ್ರಿ, ಜಾನಕಮ್ಮ, ಸಿರಿಯಜ್ಜಿ ಮುಂತಾದವರ ಕೊಡುಗೆ ಅಪಾರವಾದ್ದದು. ಅವರ ಹಾದಿಯಲ್ಲೇ ತಿಪ್ಪಣ್ಣಮರಿಕುಂಟೆ ದೃಢಹೆಜ್ಜೆ ಇಟ್ಟಿರುವುದು ಸಂತಸ ವಿಷಯವೆಂದರು.
ಆಧುನಿಕ ತಾಂತ್ರಿಕತೆಯಲ್ಲಿರುವ ನನಗೆ ಹಳೇಕಾಲದ ಯಾವುದೇ ರೀತಿಯವ್ಯವಸ್ಥೆ ಹಾಗೂ ಜೀವನ ಶೈಲಿಯ ಬಗ್ಗೆ ಮಾಹಿತಿ ಇಲ್ಲ. ನಮ್ಮ ಇಂದಿನ ಈ ಬದಲಾವಣೆಗೆ ಯಾರು ಮೂಲಕಾರಣರು ಎಂಬ ಬಗ್ಗೆ ಚಿಂತನೆ ಮಾಡುವುದಿಲ್ಲ. ಆದರೆ, ತಿಪ್ಪಣ್ಣಮರಿಕುಂಟೆಯವರ ಈ ಕೃತಿಯಲ್ಲಿ ವೇದಕಾಲಕ್ಕಿಂತ ಮುನ್ನವೇ ಬೇಡ ಸಮುದಾಯ ಅಸ್ಥಿತ್ವ ಇತ್ತು ಎಂಬುವುದನ್ನು ನಿರೂಪಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ತಿಪ್ಪಣ್ಣಮರಿಕುಂಟೆ, ಪತ್ನಿ ಸುಮಿತ್ರಮ್ಮ ಹಾಗೂ ಕುಟುಂಬದವರನ್ನು ಸನ್ಮಾನಿಸಿ ಅಭಿನಂದಿಸಿದರು. ಪ್ರಾರಂಭದಲ್ಲಿ ಪತ್ರಕರ್ತ ಕೊರ್‍ಲಕುಂಟೆತಿಪ್ಪೇಸ್ವಾಮಿ ಎಲ್ಲರನ್ನೂ ಸ್ವಾಗತಿಸಿದರು. ಯು.ಎಸ್.ವಿಷ್ಣುಮೂರ್ತಿರಾವ್ ಕಾರ್ಯಕ್ರಮ ನಿರೂಪಿಸಿದರು.