ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾಚಾರದಲ್ಲೇ ಮುಳುಗಿರುವ ಅಭಿವೃದ್ಧಿ ಶೂನ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಯಾವ ಸಾಧನೆಗೆ ಎರಡು ವರ್ಷದ ಸಂಭ್ರಮ ? ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹೊಣೆಗೇಡಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ ಅವರು ಅದ್ಯಾವ ಮುಖ ಇಟ್ಕೊಂಡು ಈ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸಾಲದಲ್ಲಿ ಕರ್ನಾಟಕವನ್ನು ನಂಬರ್1 ಮಾಡಿರುವುದಕ್ಕೆ ಸಾಧನಾ ಸಮಾವೇಶವೇ ? ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿರುವುದಕ್ಕೆ ಸಾಧನಾ ಸಮಾವೇಶವೇ ? ಸುಳ್ಳು ಗ್ಯಾರಂಟಿಗಳನ್ನು ಘೋಷಿಸಿ ಜನರಿಗೆ ಯಾಮಾರಿಸಿರುವುದಕ್ಕೆ ಸಾಧನಾ ಸಮಾವೇಶವೇ ? ಎಂದು ಹೆಚ್ ಡಿಕೆ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿರುವುದಕ್ಕೆ ಸಾಧನಾ ಸಮಾವೇಶವೇ? ರೈತರ ಆತ್ಮಹತ್ಯೆ ತಡೆಯಲು ವಿಫಲವಾಗಿರುವುದಕ್ಕೆ ಸಾಧನಾ ಸಮಾವೇಶವೇ?
ಬಾಣಂತಿಯರು & ನವಜಾತ ಶಿಶುಗಳ ಸರಣಿ ಸಾವಿಗೆ ಕಾರಣವಾಗಿದ್ದಕ್ಕೆ ಸಾಧನಾ ಸಮಾವೇಶವೇ? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಲೂಟಿ ಮಾಡಿದ್ದಕ್ಕೆ ಸಾಧನಾ ಸಮಾವೇಶವೇ ? ಬಹುಕೋಟಿ ಮುಡಾ ಹಗರಣ ನಡೆಸಿರುವುದಕ್ಕೆ ಸಾಧನಾ ಸಮಾವೇಶವೇ ? ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಬ್ರ್ಯಾಂಡ್‌ಬೆಂಗಳೂರು ಹೆಸರಲ್ಲಿ ಬ್ಯಾಡ್‌ಬೆಂಗಳೂರು ಮಾಡಿದಕ್ಕೆ ಸಾಧನಾ ಸಮಾವೇಶವೇ ? KPSC ಕೆಎಎಸ್‌ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದೆ ಲಕ್ಷಾಂತರ ಕನ್ನಡಿಗರ ಭವಿಷ್ಯಕ್ಕೆ ಕಲ್ಲು ಹಾಕಿದ್ದಕ್ಕೆ ಸಾಧನಾ ಸಮಾವೇಶವೇ ? ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಬ್ಯಾಂಕ್‌ದರೋಡೆ, ಹಲ್ಲೆ ಪ್ರಕರಣಗಳ ಹೆಚ್ಚಳವಾಗಿದ್ದು, ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿರುವುದಕ್ಕೆ ಸಾಧನಾ ಸಮಾವೇಶವೇ?
ಜನರ ತೆರಿಗೆ ದುಡ್ಡಿನಲ್ಲಿ ಕಾಂಗ್ರೆಸ್ಸಿಗರ ಸುಳ್ಳಿನ ಸಾಧನೆಯ ಜಾತ್ರೆ ನಡೆಯುತ್ತಿದೆ. ಅದಕ್ಷ, ಭ್ರಷ್ಟ ಕಾಂಗ್ರೆಸ್‌ಸರ್ಕಾರದ ಎರಡು ವರ್ಷದ ಸಂಭ್ರಮ ನಾಚಿಕೆಗೇಡು! ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಿಸಿದ್ದಾರೆ.