ವಕ್ಫ್ ಬೋರ್ಡ್ ವಕ್ರದೃಷ್ಟಿ ಬೀದರ್ ನಿಂದ ಮಂಗಳೂರಿನವರೆಗೂ ಬಿದ್ದಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:               ವಕ್ಫ್ ಬೋರ್ಡ್ ವಕ್ರದೃಷ್ಟಿ ಬೀದರ್ ನಿಂದ ಮಂಗಳೂರಿನವರೆಗೂ ಬಿದ್ದಿದ್ದು, ವಕ್ಫ್ ಖಾತೆ ಸಚಿವ ಜಮೀರ್ ಅಹಮದ್‌ ಆಧುನಿಕ ಟಿಪ್ಪು ಆಗಲು ಹೊರಟಿದ್ದಾರೆ! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೂಸು ವಕ್ಫ್ ಬೋರ್ಡ್ ರಾಜ್ಯದಲ್ಲಿ ಬರೋಬ್ಬರಿ 1 ಲಕ್ಷದ 10 ಸಾವಿರ ಎಕರೆ ಪ್ರದೇಶವನ್ನು ತನ್ನದೆಂದು ಗುರುತಿಸಿದೆಯಂತೆ! ವಿಧಾನ ಪರಿಷತ್ ನಲ್ಲಿ ಸಚಿವ ಜಮೀರ್ ಉತ್ತರಿಸಿದ ಪ್ರತಿಯಲ್ಲಿ ಈ ಸ್ಫೋಟಕ ಮಾಹಿತಿ ಬಯಲಾಗಿದೆ.

ರೈತರು, ಶೋಷಿತರು ಹಾಗೂ ಮಠಮಾನ್ಯಗಳ ಆಸ್ತಿಗಳನ್ನೆಲ್ಲಾ ಅಕ್ರಮವಾಗಿ ಕಬಳಿಸಿ, ತನ್ನದೆಂದು ವಕ್ಫ್ ಬೋರ್ಡ್ ಪ್ರತಿಪಾದಿಸುತ್ತಿದ್ದರೂ ಭ್ರಷ್ಟ @siddaramaiah ನವರ ಸರ್ಕಾರ ಕಣ್ಮುಚ್ಚಿ ಕುಳಿತು, ನಾಡಿನ ಜನತೆಗೆ ದ್ರೋಹ ಬಗೆಯುತ್ತಿದೆ.

: ಗ್ಯಾರಂಟಿಗಳ ಕುರಿತು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ನಾಯಕರೇ ಟೀಕೆ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯನವರಿಗೆ ತಮ್ಮ ಪಕ್ಷದ ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಆಗುತ್ತಿಲ್ಲ. ಪ್ರಧಾನಿಗಳ ಕುರಿತು ಹಗುರವಾಗಿ ಮಾತನಾಡುವುದಕ್ಕೆ ತಮಗೆ ನಾಚಿಕೆ ಆಗುವುದಿಲ್ಲವೇ? ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಪುಡಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಧಮ್ ಇಲ್ವಾ ಮುಖ್ಯಮಂತ್ರಿಗಳೆ? ಗ್ಯಾರಂಟಿ ಜಾರಿಯಿಂದ ಗುಂಡಿ ಮುಚ್ಚುವುದಕ್ಕೂ ಹಣವಿಲ್ಲವೆಂದು ಮಲ್ಲಿಕಾರ್ಜುನ್ ಖರ್ಗೆ ಅವರು ಒಪ್ಪಿಕೊಂಡಿದ್ದಾರೆ.

ಗುಂಡಿಗಳಿಲ್ಲದ ಒಂದೇ ಒಂದು ರಸ್ತೆಯನ್ನು ಬೆಂಗಳೂರಿನಲ್ಲಿ ತೋರಿಸಿ ಕೊಟ್ರೆ ನೊಬೆಲ್ ಪ್ರಶಸ್ತಿ ಕೊಡ್ತಿವಿ.

ವಿರೋಧ ಪಕ್ಷದ ನಾಯಕ ಆರ್.ಅಶೋಕ ವ್ಯಂಗ್ಯ ಮಾಡಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";