ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷರಾಗಿ ತಿಪ್ಪಾಪುರ ಮಾರಪ್ಪ ಆಯ್ಕೆ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿಯ ನೂತನ ಪ್ರಭಾರ ಅಧ್ಯಕ್ಷರಾಗಿ ಮಾರಪ್ಪನವರುಅಧಿಕಾರ ಸ್ವೀಕರಿಸಿದರು.

- Advertisement - 

 ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ 17 ಸದಸ್ಯರ ಬಲ ಹೊಂದಿದ್ದು, ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಮಾರಪ್ಪನವರನ್ನು ನೂತನ ಪ್ರಭಾರ ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಲಾಗಿದೆ.

- Advertisement - 

 ನೂತನ ಅಧ್ಯಕ್ಷರಿಗೆ  ಸದಸ್ಯರು ಮತ್ತು ಸ್ಥಳೀಯ ಮುಖಂಡರು  ಮಾಲಾರ್ಪಣೆ ಮಾಡಿ ಸಿಹಿ ಹಚ್ಚುವ ಮೂಲಕ ಸಂಭ್ರಮಿಸಿದರು.

 ನೂತನ ಅಧ್ಯಕ್ಷ ಮಾರಪ್ಪ ಮಾತನಾಡಿ  ನಮ್ಮ ಪಂಚಾಯತಿಯ ಸರ್ವ ಸದಸ್ಯರು  ಯಾವುದೇ ಪಕ್ಷ ಬೇದವಿಲ್ಲದೆ  ಅವಿರೋಧವಾಗಿ ನನ್ನನ್ನು ಪ್ರಭಾರ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ನನಗೆ ವಹಿಸಿರುವ ಜವಾಬ್ದಾರಿಯನ್ನು ಯಾವುದೇ ಪಕ್ಷಭೇದ ಮಾಡದೆ  ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ  ನಿಷ್ಠೆಯಿಂದ ಶ್ರಮಿಸುತ್ತೇನೆ ಎಂದರು.

- Advertisement - 

 ಈ ಹಿಂದೆ ನಾನು ಗ್ರಾಮ ಪಂಚಾಯತಿ ಸದಸ್ಯನಾಗಿ, ಪಂಚಾಯತಿಯ ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದು  ಹಳೆಯ ಅನುಭವಗಳು ಪ್ರಸ್ತುತ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು   ಮತ್ತಷ್ಟು ಶಕ್ತಿ ತುಂಬಲಿವೆ, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಸಾಕಷ್ಟು ಕಾರ್ಖಾನೆಗಳಿದ್ದು , ಸ್ಥಳೀಯ ಕಾರ್ಖಾನೆಗಳಿಂದ  ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು  ಪ್ರಮುಖವಾಗಿ ಪರಿಸರ ಮಾಲಿನ್ಯ, ಜಲ ಮೂಲಗಳ ಮಾಲಿನ್ಯ  ನಿರಂತರ ಕಾಡುತ್ತಿರುವ ಸಮಸ್ಯೆಯಾಗಿದೆ , ಈ ಕುರಿತು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ  ನಾವು ನಿರಂತರ ಹೋರಾಟ ನಡೆಸುತ್ತಿದ್ದೇವೆ,   

ಪ್ರಸ್ತುತ ಪರಿಸ್ಥಿತಿಯಲ್ಲಿ  ನಮ್ಮ ದೊಡ್ಡತುಮಕೂರು ಪಂಚಾಯತಿ ಹಾಗೂ ಮಜರಾಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಿಗೆ  ಅರಳು ಮಲ್ಲಿಗೆ ಪಂಚಾಯಿತಿ ವ್ಯಾಪ್ತಿಯಿಂದ  ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಚಾಲ್ತಿಯಲ್ಲಿದ್ದು, ಸ್ಥಳೀಯ  ಸಮಸ್ಯೆಗಳಿಗೆ   ಪರಿಹಾರ ಕಲ್ಪಿಸುವುದೇ  ಮೊದಲ ಆದ್ಯತೆ ಆಗಿದೆ ಎಂದರು.

 ನೂತನ ಅಧ್ಯಕ್ಷರಿಗೆ ಸ್ಥಳೀಯ ಮುಖಂಡರಾದ ತಿ.ರಂಗರಾಜು, ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್, ಸ್ಥಳೀಯ ಮುಖಂಡರಾದ ಬಿ ಎಚ್ ಕೆಂಪಣ್ಣ, ಕಾಂಗ್ರೆಸ್ ಮುಖಂಡರಾದ ಆದಿತ್ಯ ನಾಗೇಶ್ , ಮುಖಂಡರಾದ ಸಂದೇಶ್ ಸೇರಿದಂತೆ  ಹಲವು ಗಣ್ಯರು ಶುಭಕೋರಿದ್ದಾರೆ.

Share This Article
error: Content is protected !!
";