ಭೀಕರ ಅಪಘಾತ ಮೂವರು ವಿದ್ಯಾರ್ಥಿಗಳ ದಾರುಣ ಸಾವು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದ ಏರ್‌ಪೋರ್ಟ್‌ರಸ್ತೆಯಲ್ಲಿ ತಡರಾತ್ರಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ರೋಹಿತ್ (22)
, ಸುಚಿತ್ (22) ಹಾಗೂ ಹರ್ಷಾ (22) ಎಂದು ಗುರುತಿಸಲಾಗಿದೆ.

ಜಿಕೆವಿಕೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈ ಮೂವರು ರಾತ್ರಿ ಲಾಂಗ್ ಡ್ರೈವ್‌ಗೆಂದು ಬೈಕ್‌ನಲ್ಲಿ ಬಂದಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಗುದ್ದಿದ ರಭಸಕ್ಕೆ ಹಾರಿ ಬಿದ್ದ ಮೂವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಅಪಘಾತಕ್ಕೆ ಹೆದ್ದಾರಿಯಲ್ಲೆ ಮೃತದೇಹಗಳು ನಜ್ಜು ಗುಜ್ಜಾಗಿದ್ದವು. ಮಧ್ಯರಾತ್ರಿ 01 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ.

ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿ ಆಗಿದ್ದಾನೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು,ಮೃತದೇಹಗಳನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ವತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು  ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದು ರೀತಿಯ ಶಂಕೆ- ಎರಡು ಬೈಕ್ ಗಳಲ್ಲಿ ಒಟ್ಟು ಐವರು ವಿದ್ಯಾರ್ಥಿಗಳು ಏರ್ ಪೋರ್ಟ್ ರಸ್ತೆಯ ಕಡೆಗೆ ಹೋಗಿ ಹುಟ್ಟು ಆಚರಿಸಿಕೊಂಡು ಬರುವಾಗ ಅಪಘಾವ ಸಂಭವಿಸಿದೆ.
ಮೃತಪಟ್ಟವರಲ್ಲಿ ಒಬ್ಬರಾದ ಸುಜಿತ್ ಅವರ ಹುಟ್ಟುಹಬ್ಬವನ್ನು ಊರಿಂದಾಚೆಗೆ ಆಚರಿಸಲು ನಿರ್ಧರಿಸಿ ಐವರು ಸಹಪಾಠಿಗಳು
,ಎರಡು ಬೈಕ್ ಗಳಲ್ಲಿ ತೆರಳಿದ್ದರು ಎನ್ನಲಾಗಿದೆ.

ಒಂದು ಬೈಕಿನಲ್ಲಿ ಸುಜಿತ್, ರೋಹಿತ್ ಹಾಗೂ ಹರ್ಷ ಇದ್ದರೆ,ಮತ್ತೊಂದು ಬೈಕಿನಲ್ಲಿ ಇನ್ನಿಬ್ಬರು ವಿದ್ಯಾರ್ಥಿಗಳಿದ್ದರು.
ಜನ್ಮದಿನದ ಪಾರ್ಟಿ ಆಚರಿಸಿ ವಾಪಸ್ ಬರುವಾಗ ಚಿಕ್ಕಜಾಲ ಬಳಿಯ ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ.

ಕಾರು ವೇಗವಾಗಿ ಸಾಗಿ ಬಂದು ಅಪಘಾತ ಎಸಗಿ ಕ್ಷಣಾರ್ಧದಲ್ಲಿ ನಾಪತ್ತೆಯಾಗಿದೆ. ಅಪಘಾತ ಸಂಭವಿಸಿದ ಶಾಕ್ ನಿಂದಾಗಿ ಜೊತೆಗಿದ್ದ ಸ್ನೇಹಿತರು ಆ ಕಾರಿನ ನಂಬರ್ ಹಾಗೂ ಇನ್ನಿತರ ಮಾಹಿತಿ ಸಂಗ್ರಹಿಸಿಲ್ಲ ಎನ್ನಲಾಗಿದೆ. ಪೊಲೀಸರು ಅವರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  

- Advertisement -  - Advertisement -  - Advertisement - 
Share This Article
error: Content is protected !!
";