ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದ ಆಸಕ್ತ ಕನಿಷ್ಠ ಪಿ.ಯು.ಸಿ ಉತ್ತೀರ್ಣ ಹೊಂದಿದ ನಿರುದ್ಯೋಗಿ ಯುವಕ/ ಯುವತಿಯರಿಗೆ ವಸತಿ ಸಹಿತವಾಗಿ, ಸಂವಿಧಾನ ಜಾಗೃತಿ, ಅಸ್ಪೃಶ್ಯತೆ ಆಚರಣೆ,
ನಿವಾರಣೆಗೆ ಸಾಮಾಜಿಕ ನ್ಯಾಯದ ನಾಯಕತ್ವದ ಹಾಗೂ ಸಮುದಾಯ ನಾಯಕತ್ವ ತರಬೇತಿ ಮತ್ತು ಸಮುದಾಯಕ್ಕೆ ಇರುವ ವಿವಿಧ ಸೌಲಭ್ಯಗಳ ಜಾಗೃತಿ ನೀಡಲು ರಾಜ್ಯದ ನಾಲ್ಕು ಭಾಗಗಳಲ್ಲಿ ರಾಷ್ಟ್ರೀಯ ಕಾನೂನು ಶಾಲೆ, ಭಾರತ ವಿಶ್ವವಿದ್ಯಾನಿಲಯ (National Law School of India University) ಬೆಂಗಳೂರು, ಇವರ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಆಸಕ್ತ ಭೋವಿ ಜನಾಂಗದ ಯುವ ಅಭ್ಯರ್ಥಿಗಳು https://forms.gle/Amodtguivw1TKD2s9 ಲಿಂಕ್ ಮೂಲಕ ಡಿಸೆಂಬರ್ 31 ರ ಸಂಜೆ 5.00 ಗಂಟೆಯೊಳಗಾಗಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.