ಅಮೇರಿಕಾದಲ್ಲೂ ಕನ್ನಡ ಕಲರವ-ಮಾಜಿ ಸಚಿವ ಎಚ್.ಆಂಜನೇಯ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಭಾಷೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ವಿವಿಧ ದೇಶಗಳಲ್ಲೂ ಕನ್ನಡ ಕಲರವಕ್ಕೆ ವಿಶ್ವ ಅಕ್ಕ ಸಮ್ಮೇಳನ ಸಾಕ್ಷಿಕರಿಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.

 ಅಮೇರಿಕದ ವರ್ಜಿನಿಯಾದ ರಿಚ್ಮಂಡ್​ ನಗರದಲ್ಲಿ ನಡೆಯುತ್ತಿರುವ 12ನೇ  ವಿಶ್ವ ಅಕ್ಕ ಕನ್ನಡ ಸಮ್ಮೇಳನದ 2ನೇ ದಿನದ ಶನಿವಾರದ ಕಾರ್ಯಕ್ರಮದಲ್ಲಿ‌ ಆದಿವಾಸಿ ಕನ್ನಡಿಗರ ಜೊತೆ ಮಾತನಾಡಿದರು.  ಕನ್ನಡ ನಾಡು, ನುಡಿ ವಿಶ್ವದ ಎಲ್ಲೆಡೆ ಪಸರಿಸಿದೆ. ಅದರಲ್ಲೂ ಅಮೆರಿಕಾದಲ್ಲಿ ಅನಿವಾಸಿ ಭಾರತೀಯರು ಹಾಗೂ ಅಕ್ಕ ಒಕ್ಕೂಟದವರಲ್ಲಿನ ಮಾತೃಭಾಷೆ ಪ್ರೇಮ ವಿಸ್ಮಯವಾಗಿದೆ ಎಂದರು.

 ನಾವು ಎಲ್ಲಿಯೇ ಇರಲಿ ಮೊದಲು ಮಾತೃಭಾಷೆಗೆ ಗೌರವ ಕೊಡಬೇಕು, ಪ್ರೀತಿಸಬೇಕು. ಮಾತೃಭಾಷೆ ಮರೆತರೇ ಮನುಷ್ಯನಲ್ಲಿ ಕಲ್ಪನ ಶಕ್ತಿಯೇ ನಾಶಗೊಳ್ಳುತ್ತದೆ ಎಂಬ ಎಚ್ಚರ ಇರಬೇಕೆಂದರು.  ಇಂಗ್ಲಿಷ್ ಸೇರಿ ಅನ್ಯ ಭಾಷೆಗಳಲ್ಲಿ ಎಷ್ಟೇ ಪಾಂಡಿತ್ಯ ಹೊಂದಿದ್ದರೂ ಕನಸು ಕಾಣುವುದು ಮತ್ತು ಚಿಂತನೆ ಹುಟ್ಟುವುದು ನಮ್ಮ ತಾಯಿಭಾಷೆಯಲ್ಲಿ ಎಂಬ ವಾಸ್ತವ ಸತ್ಯದ ಅರಿವು ಇರಬೇಕು. ಆಗ ಭಾಷಾಭಿಮಾನ ಮೂಡುತ್ತದೆ ಎಂದು ತಿಳಿಸಿದರು.

 ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಅಕ್ಕ ಸಮ್ಮೇಳನ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ಕನ್ನಡ ನಾಡು-ನುಡಿ ಕುರಿತು ವಿವಿಧ ಗೋಷ್ಠಿಗಳು, ಚಿಂತನ -ಮಂಥನಗಳು, ಜಾನಪದ- ಗೀತ ಗಾಯನ ಕಾರ್ಯಕ್ರಮಗಳು, ಕನ್ನಡದ ನಟ-ನಟಿಯರು, ಮನೋರಂಜನ ಕಾರ್ಯಕ್ರಮಗಳು, ವಿವಿಧ ಕ್ರೀಡಾಕೂಟಗಳು, ಕರ್ನಾಟಕದ ವಿವಿಧ ರುಚಿಕರ ತಿನಿಸುಗಳು ಹಾಗೂ ವಾಣಿಜ್ಯ ವ್ಯಾಪಾರದಂತಹ ಮೇಳಗಳು  ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿವೆ ಎಂದು ತಿಳಿಸಿದರು.

 ಅಮೇರಿಕ ಬಹಳಷ್ಟು ಸುಂದರ ನಗರವಾಗಿ ನಿರ್ಮಾಣಗೊಂಡಿದೆ. ಇಲ್ಲಿನ ವಿಶಾಲ ರಸ್ತೆ, ಬೃಹತ್ ಕಟ್ಟಡಗಳು, ವಿಮಾನ ನಿಲ್ದಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ದೂರದೃಷ್ಟಿ ಚಿಂತನೆಯಡಿ ನಿರ್ಮಾಣಗೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ನಾನು ಸಮಾಜಕಲ್ಯಾಣ ಸಚಿವನಾಗಿದ್ದ ಸಂದರ್ಭ ಸಮ್ಮೇಳನದಲ್ಲಿ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಇಲ್ಲಿನ ಕನ್ನಡಿಗರು ಕೋರಿಕೊಂಡಿದ್ದರು.

ಆದರೆ ಅಂದು ಹೋರಾಟಗಾರರು, ಸಾಂಸ್ಕ್ರತಿಕ ನಾಯಕರು, ಕಲಾವಿದರನ್ನು ಕರ್ನಾಟಕ ಸರ್ಕಾರದಿಂದ ಕಳುಹಿಸಿಕೊಟ್ಟಿದ್ದೇವು. ಮತ್ತೊಮ್ಮೆ ನಿಮ್ಮಗಳ ಪ್ರೀತಿಯ ಕರೆಗೆ ಹೂಗುಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದೊಂದು ನನ್ನ ನೆನಪಿನಲ್ಲಿ ಸ್ಮರಣೀಯವಾಗಿ ಉಳಿಯಲಿದೆ ಎಂದರು.  ನಾವು ಎಲ್ಲಿಯೇ ಇರಲಿ ಮೊದಲು ಮಾನವರಾಗಬೇಕು. ವಿಶ್ವಮಾನವ ಚಿಂತನೆ ಅಳವಡಿಸಿಕೊಳ್ಳುಬೇಕು. ಇದಕ್ಕೆ ಇಲ್ಲಿ ನೆಲೆಸಿರುವ ಕನ್ನಡಿಗರ ಹೃದಯ ವೈಶಾಲ್ಯವೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಇಲ್ಲಿ ಅನಿವಾಸಿಯ ಭಾರತೀಯರು ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ. ಜೊತೆಗೆ ಈ ನೆಲದ ಕಾನೂನನ್ನು ಗೌರವಿಸುವ ಮೂಲಕ ಇಲ್ಲಿನ ಮೂಲ‌ ನಿವಾಸಿಗಳಾಗಿದ್ದಾರೆ. ಆದರೆ, ಅವರ ಉಸಿರು ಕನ್ನಡ ಆಗಿದೆ. ಅವರ ಪ್ರತಿ‌ ನಡೆ-ನುಡಿಯಲ್ಲಿ ಭಾರತೀಯ ಸಂಸ್ಕೃತಿ ಮೈಳೈಸುತ್ತಿದೆ ಎಂದರು.  ವಿವಿಧ ಚಿಂತಕರು, ಸಾಹಿತಿಗಳು, ನಟರ ಜೊತೆ ಸಮ್ಮೇಳನದ ಅಚ್ಚುಕಟ್ಟು, ವಿಶೇಷತೆ ಕುರಿತು ಸಂತಸ ಹಂಚಿಕೊಂಡರು. ಪತ್ನಿ ವಿಜಯಾ ಇತರರಿದ್ದರು.

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon