ತರಳಬಾಳು ಹುಣ್ಣಿಮೆಗೆ ಭರದ ಸಿದ್ಧತೆ, ಭಕ್ತರಿಂದ 1.26 ಕೋಟ ದೇಣಿಗೆ ವಾಗ್ದಾನ

News Desk

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ತುಂಗಾಭದ್ರೆಯ ನೀರಿನಿಂದ ಹಸಿರಾಗಿರುವ ಭರಮಸಾಗರದಲ್ಲಿ ಫೆ.
4ರಿಂದ 9 ದಿನ ಅದ್ದೂರಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಲು ಭರದ ಸಿದ್ಧತೆಗಳು ಆರಂಭಗೊಂಡಿವೆ.

ಸಿರಿಗೆರೆಯ ಸದ್ಧರ್ಮ ನ್ಕಾಯಪೀಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ಮುಖಂಡರು ಭಾಗಿಯಾಗಿದ್ದರು.

2024ರಲ್ಲಿಯೇ ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿತ್ತು. ಆಗ ಬರ ಆವರಿಸಿಕೊಂಡಿದ್ದರಿಂದ ಮುಂದೂಡಲಾಗಿತ್ತು.

ಈಗ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ಕಾಲ ಒದಗಿಬಂದಿದೆಎಂದು ಸಾನ್ನಿಧ್ಯ ವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ತಿಳಿಸಿದರು.

ತರಳಬಾಳು ಹುಣ್ಣಿಮೆ ಸಂಘರ್ಷಗಳ ಮಹೋತ್ಪವವಲ್ಲ. ಇದು ಸಮನ್ವತೆಯ ಸಂದೇಶ ಸಾರುವ ಉತ್ಪವ. ಎಲ್ಲರೂಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಆಚರಿಸಬೇಕು. ಇದು ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದು ಸಲಹೆ ನೀಡಿದರು.

ಹುಣ್ಣಿಮೆ ಆಚರಣೆಯಲ್ಲಿ ಎಲ್ಲಾ ಸಮುದಾಯಗಳ ಭಕ್ತರೂ ಸೇರಬೇಕು. ಭರಮಸಾಗರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸಮಿತಿ ರಚಿಸಿ ಅವರನ್ನು ತೊಡಗಿಸಿಕೊಳ್ಳಬೇಕು ಎಂಬುದು ಅಪೇಕ್ಷೆಯಾಗಿದೆ. ಎಂದು ಶ್ರೀಗಳು ಹೇಳಿದರು.

ಹುಣ್ಣಿಮೆ ಮಹೋತ್ತವದ ವೇದಿಕೆ ಕಾರ್ಯಕ್ರಮಗಳಲ್ಲಿ ಹೊಸತನ ತರುವ ಆಲೋಚನೆ ಇದೆ. ಈ ಬಾರಿ ಒಂದೊಂದು ದಿನ ನಿರ್ದಿಷ್ಟ ವಿಚಾರಗಳ ಮಂಥನ ನಡೆಯುತ್ತದೆ. ಸಂಸ್ಕೃತಿ ಮತ್ತು ಸಮಾಜ, ಮಹಿಳೆ, ಧರ್ಮ, ರಾಜಕಾರಣ, ಶರಣ ಸಾಹಿತ್ಯ, ಆರೋಗ್ಯ, ಕೃಷಿ ಮತ್ತು ಜಲ ಸಂರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಚಿಂತನಾ ಸಭೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಭಕ್ತರಿಂದ
1.26 ಕೋಟ ದೇಣಿಗೆ ವಾಗ್ದಾನ-

9 ದಿನಗಳ ವೈಭವದ ತರಳಬಾಳು ಹುಣ್ಣಿಮೆ ಮಹೋತ್ತವ ಆಚರಣೆಗೆ ನೆರವಾಗಲು ಭಕ್ತರು 1.26 ಕೋಟಿ ದೇಣಿಗೆ ನೀಡುವುದಾಗಿ ವಾಗ್ದಾನ ನೀಡಿದರು. ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳ ಭಕ್ತರೂ ನೆರವಿಗೆ ಮುಂದಾಗಿದ್ದಾರೆ. ಕೋಗುಂಡೆ ದ್ಯಾಮಣ್ಣ, ಕೋಗುಂಡೆ ಮಂಜುನಾಥ್‌ ಹಾಗೂ ಚೌಲಿಹಳ್ಳಿ ಶಶಿ ಪಾಟೀಲ್‌10 ಲಕ್ಷ ನೀಡುವ ವಾಗ್ದಾನ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಎಚ್‌. ಆಂಜನೇಯ, ಶಾಸಕರಾದ ಎಂ. ಚಂದ್ರಪ್ಪ, ಬಿ. ದೇವೇಂದ್ರಪ್ಪ, ಮುಖಂಡರಾದ ಕೋಗುಂಡೆ ಮಂಜುನಾಥ್‌, ಜಿ.ಕೆ. ನಟರಾಜ್‌, ಡಿ.ವಿ.ಎಸ್‌. ಪ್ರವೀಣ್‌ಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.

 

 

- Advertisement -  - Advertisement - 
Share This Article
error: Content is protected !!
";