ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025-26 ನೇ ಆರ್ಥಿಕ ಸಾಲಿನ 10 ತಿಂಗಳು ಕಳೆದು ಕೇವಲ 2 ತಿಂಗಳು ಬಾಕಿ ಇದೆ. ಆದರೆ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಹಾಗೂ ದಿವಾಳಿ ಸರ್ಕಾರವನ್ನ ಮುನ್ನಡೆಸುತ್ತಿರುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಸಾಕ್ಷಿ ನೋಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಬಜೆಟ್ ನಲ್ಲಿ ಒದಗಿಸಿದ್ದ ಒಟ್ಟು ಅನುದಾನ: 3,39,227.31 ಕೋಟಿ
ಬಿಡುಗಡೆ ಮಾಡಿದ ಅನುದಾನ: 2,44,465 ಕೋಟಿ
ಖರ್ಚು ಮಾಡದ ಅನುದಾನ: 1,31,272.02 ಕೋಟಿ
ಬಿಡುಗಡೆಯಾಗದ ಅನುದಾನ: 94,761.42 ಕೋಟಿ
ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ ಪಾಪರ್ ಸರ್ಕಾರಕ್ಕೆ ಘೋಷಣೆ ಮಾಡಿದ ಅನುದಾದವನ್ನ ಬಿಡುಗಡೆ ಮಾಡುವ ಯೋಗ್ಯತೆ ಇಲ್ಲ. ಬಿಡುಗಡೆ ಮಾಡಿದ ಅನುದಾನವನ್ನ ಖರ್ಚು ಮಾಡುವ ಸಾಮರ್ಥ್ಯವೂ ಇಲ್ಲ.
ಈಗ ಯಾವ ಮುಖ ಇಟ್ಟುಕೊಂಡು ಇನ್ನೊಂದು ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದೀರಿ ಸ್ವಾಮಿ? ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನ ಉಳಿಸಿ ಎಂದು ಆರ್.ಅಶೋಕ್ ತಾಕೀತು ಮಾಡಿದ್ದಾರೆ.

