ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಎಸ್ಎಂಎಫ್ಜಿ ಇಂಡಿಯಾ ಕ್ರೆಡಿಟ್ ವತಿಯಿಂದ 8ನೇ ಆವೃತ್ತಿಯ ಪಶು ವಿಕಾಸ್ ದಿನದ ಅಂಗವಾಗಿ 14 ಸಾವಿರ ಜನರ ಮತ್ತು 1.4 ಲಕ್ಷ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೆರವೇರಿಸಲಾಯಿತು.
ದೇಶದ 16 ರಾಜ್ಯಗಳಲ್ಲಿ ಇರುವ 510 ಎಸ್ಎಂಎಫ್ಜಿ ಗ್ರಾಮಶಕ್ತಿ ಶಾಖೆಗಳ ಮೂಲಕ ನಡೆಸಿದ ಈ ಬೃಹತ್ ಅಭಿಯಾನದಲ್ಲಿ ಸ್ಥಳೀಯ ಪಶುವೈದ್ಯರಿಂದ ಉಚಿತ ಜಾನುವಾರು ತಪಾಸಣೆ, ಜಾನುವಾರುಗಳಿಗೆ ಉಚಿತ ಔಷಧ ಮತ್ತು ಲಸಿಕೆಗಳ ವಿತರಣೆ, ಹಾಲು ನೀಡುವ ಹಸು, ಎಮ್ಮೆ, ಮೇಕೆ ಮುಂತಾದ ರಾಸುಗಳಿಗೆ ಹಾಲಿನ ಪ್ರಮಾಣ ಹೆಚ್ಚಿಸುವ ಸಲಹಾ ಸೇವೆಗಳನ್ನು ಒದಗಿಸಲಾಯಿತು 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದರ ಪ್ರಯೋಜನ ಪಡೆದಿವೆ ಎಂದು ಎಸ್ಎಂಎಫ್ಜಿ ಇಂಡಿಯಾ ಕ್ರೆಡಿಟ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿ ನಾರಾಯಣನ್ ಹೇಳಿದ್ದಾರೆ.
ರಾಜ್ಯದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿ ವಿವಿಧ ಜಿಲ್ಲೆಗಳ 71 ಕಡೆಗಳಲ್ಲಿ 12,500 ಜಾನುವಾರುಗಳಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು, 3,700ಕ್ಕೂ ಹೆಚ್ಚು ಕುಟುಂಬಗಳಿಗೆ ಇದರ ಪ್ರಯೋಜನ ಲಭ್ಯವಾಗಿದೆ ಎಂದು ವಿವರಿಸಿದ್ದಾರೆ.
‘ಸರ್ವೋತ್ತಮ ಸೇವೆ: ಪಶು, ಪರಿವಾರ ಮತ್ತು ಪ್ರಗತಿ‘ ಎಂಬ ವಿಷಯದ ಸುತ್ತ ಆಧಾರಿತವಾದ ಈ ಉಪಕ್ರಮವು, ಜಾನುವಾರುಗಳ ಆರೋಗ್ಯ, ಕೌಟುಂಬಿಕ ಯೋಗಕ್ಷೇಮ ಮತ್ತು ಸುಸ್ಥಿರ ಪ್ರಗತಿಯನ್ನು ಬಲಪಡಿಸುವ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಸಂಸ್ಥೆ ಹೊಂದಿರುವ ಅಚಲ ಬದ್ಧತೆಯನ್ನು ಬಲಪಡಿಸಿತು.
ಎಸ್ಎಂಎಫ್ಜಿ ಇಂಡಿಯಾ ಕ್ರೆಡಿಟ್ ಕಂಪನಿಯು 2025ರಲ್ಲಿ ಆಯೋಜಿಸಿದ್ದ ಪಶು ವಿಕಾಸ ದಿನ ಕಾರ್ಯಕ್ರಮವು ಭಾರತದ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಿದ ‘ಅತಿದೊಡ್ಡ ಜಾನುವಾರು ಕಲ್ಯಾಣ ಕಾರ್ಯಕ್ರಮ‘ವಾಗಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿತ್ತು ಎಂದು ಪ್ರಕಟಣೆ ಹೇಳಿದೆ.

