ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದಾವಣಗೆರೆ ವಿಶ್ವವಿದ್ಯಾನಿಲಯದ ೨೦೨೪-೨೫ ನೇ ಸಾಲಿನ ಬಿ.ಇಡಿ. ಎರಡನೆ ಹಾಗೂ ನಾಲ್ಕನೆ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಷ್ಟ್ರೀಯ ಹೆದ್ದಾರಿ-೧೩ ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.ನೂರರಷ್ಟು ಫಲಿತಾಂಶ ಬಂದಿದೆ.
೨ ನೇ ಸೆಮಿಸ್ಟ್‌ರ್‌ನಲ್ಲಿ ಮೇಘನಾ ಎಂ. ೫೩೧(ಶೇ.೮೮.೫ ಪರ್ಸೆಂಟ್) ಮೊದಲನೆ ಸ್ಥಾನ. ಶರತ್ ಆರ್.೫೨೫(ಶೇ.೮೭.೫) ಎರಡನೆ ಸ್ಥಾನ. ನಾಗರಾಜ್ ೫೨೦(೮೬.೬) ಮೂರನೆ ಸ್ಥಾನ.
ನಾಲ್ಕನೆ ಸೆಮಿಸ್ಟರ್‌ನಲ್ಲಿ ಹೆಚ್.ರವಿಕುಮಾರ್. ೫೪೧(ಶೇ.೯೧.೧೬ ಪರ್ಸೆಂಟ್) ಮೊದಲನೆ ಸ್ಥಾನ. ಕಾವ್ಯ ಎಸ್. ೫೪೦(ಶೇ.೯೦) ಎರಡನೆ ಸ್ಥಾನ. ಜ್ಯೋತಿ ಆರ್.ಮತ್ತು ವೀರೇಶ್ ಬಿ. ೫೩೮(ಶೇ.೮೯.೬೬) ಮೂರನೆ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ನಿರ್ದೇಶಕರಾದ ಎಂ.ಚೇತನ್, ಬಿ.ಇಡಿ. ಕಾಲೇಜು ಪ್ರಾಂಶುಪಾಲರಾದ ಎಂ.ಆರ್.ಜಯಲಕ್ಷ್ಮಿ ಉಪನ್ಯಾಸಕರುಗಳು ಮತ್ತು ಕಾಲೇಜಿನ ಸಿಬ್ಬಂದಿಯವರು ಹೆಚ್ಚಿನ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದಿಸಿದ್ದಾರೆ.

