ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು 2025 ನೇ ಸಾಲಿನ ಎರಡನೇ ಸೆಮಿಸ್ಟರ್ ಬಿಇಡಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಸುಲಾಖಿ ಸೌಮ್ಯ ಶೇ 94.67, ಹೇಮಾವತಿ ಕೆ ಎನ್ ಶೇ 94., ಹರ್ಷಿತಾ ಟಿ ಎ ಶೇ 93.83, ಮಂಜುನಾಥ್ ಶೇ 93.50, ವಾದಾಸಾಬ್ ಶೇ 93.50, ನಿತಿನ್ ಬಿ ಎಸ್ ಶೇ 93.17.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು

ಟಿಎಪಿಸಿಎಂಎಸ್ ನಿರ್ದೇಶಕರಾದ ವಿಶ್ವಾಸ್ ಹನುಮಂತೇಗೌಡ, ಬಿ. ಎಡ್. ಪ್ರಾಂಶುಪಾಲ ಪ್ರೊ ಜಿ. ಕೃಷ್ಣಮೂರ್ತಿ,ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ. ಮಂಜುನಾಥ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

