ಕೆರೆಯಲ್ಲಿ‌ಮುಳುಗಿ ದಾರುಣ ಸಾವು ಕಂಡ “108 ಆಂಬ್ಯುಲೆನ್ಸ್”!?

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ತಾಲೂಕಿನ ಆಯನೂರು ಬಳಿ ಇರುವ ಇಟ್ಟಿಗೆಹಳ್ಳಿ ಗ್ರಾಮದ ಮಲ್ನಾಡ್ ಯೋಗೇಶ್ ಅವರಿಗೆ ಸೇರಿದ, 108 ಆಂಬ್ಯುಲೆನ್ಸ್ ಎಂಬ ಹೋರಿಯು ಇಂದು ಆಯನೂರು ಬಳಿಯ ಗೌಡನಕೆರೆಯಲ್ಲಿ ಬಿದ್ದು ಸಾವನಪ್ಪಿದ ದಾರುಣ ಘಟನೆ ಇಂದು ನಡೆದಿದೆ.

ಇಟ್ಟಿಗೆಹಳ್ಳಿ 108 ಆಂಬ್ಯುಲೆನ್ಸ್ ಎಂದರೆ ಸಾಕು, ಜನರ ಮನಸ್ಸಿಗೆ ಬರುವುದು ಈ ಹೋರಿ ಮಾತ್ರ, ಯಾಕೆಂದರೆ ದೀಪಾವಳಿಯ ಹಬ್ಬದ ನಂತರ ಸುತ್ತಮುತ್ತ ಎಲ್ಲೇ ಹೋರಿ ಬೆದರಿಸುವ ಸ್ಪರ್ಧೆ ಇದ್ದರೆ ಸಾಕು, ಈ ಹೋರಿ ಅಲ್ಲಿ ಪ್ರತ್ಯಕ್ಷವಾಗುವುದು ವಾಡಿಕೆ. 

ಹೀಗೆ ಅನೇಕ ಸ್ಪರ್ಧೆಗಳಲ್ಲಿ ತನ್ನದೇ ಛಾಪು ಮೂಡಿಸಿ ನೂರಾರು ಪ್ರಶಸ್ತಿಯನ್ನು ತನ್ನದಾಗಿಸಿದ 108 ಆಂಬ್ಯುಲೆನ್ಸ್ ಇಂದು ದಾರುಣ ಅಂತ್ಯ ಕಂಡಿದೆ. 

 ಇದರಿಂದ ಸಾವಿರಾರು ಅಭಿಮಾನಿಗಳು ಹೋರಿಯನ್ನು ನೋಡಲು ಇಟ್ಟಿಗೆಹಳ್ಳಿ ಗ್ರಾಮಕ್ಕೆ ಧಾವಿಸುತ್ತಿದ್ದಾರೆ, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಹರಡಿದೆ. ಅಭಿಮಾನಿಗಳ ಮೌನರೋಧನ ಮುಗಿಲು ಮುಟ್ಟಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";