ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ರೂ.170/-ರಂತೆ ಡಿಬಿಟಿ ಮುಖಾಂತರ ಹಣ ಪಾವತಿಸಲಾಗುತ್ತಿರುತ್ತದೆ. ಫೆಬ್ರವರಿ–2025ರ ಮಾಹೆಯಿಂದ ಪ್ರತಿ ಸದಸ್ಯರಿಗೆ ರೂ.170/-ರ ಡಿಬಿಟಿ ಹಣ ಬದಲಾಗಿ 05 ಕೆ.ಜಿ.ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಗಿರುತ್ತದೆ.
ಪ್ರಯುಕ್ತ ಏಪ್ರಿಲ್–2025ರ ಮಾಹೆಯ ಆಹಾರಧಾನ್ಯ ಬಿಡುಗಡೆಯಾಗಿದ್ದು, ಏಪ್ರಿಲ್–2025ರ ಮಾಹೆಯಲ್ಲಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ಹಾಗೂ ಅಂತ್ಯೋದಯ ಎಎವೈ ಪಡಿತರ ಚೀಟಿದಾರರಿಗೆ 01 ರಿಂದ 03 ಸದಸ್ಯರಿಗೆ 35 ಕೆ.ಜಿ.ಅಕ್ಕಿ,
04 ಸದಸ್ಯರಿಗೆ 40 ಕೆ.ಜಿ.ಅಕ್ಕಿ, 05 ಸದಸ್ಯರಿಗೆ 50 ಕೆ.ಜಿ.ಅಕ್ಕಿ, 06 ಸದಸ್ಯರಿಗೆ 60 ಕೆ.ಜಿ.ಅಕ್ಕಿ, 07 ಸದಸ್ಯರಿಗೆ 70 ಕೆ.ಜಿ.ಅಕ್ಕಿ, 08 ಸದಸ್ಯರಿಗೆ 80 ಕೆ.ಜಿ.ಅಕ್ಕಿ, 09 ಸದಸ್ಯರಿಗೆ 90 ಕೆ.ಜಿ.ಅಕ್ಕಿ ಹಾಗೂ 10 ಸದಸ್ಯರಿಗೆ 100 ಕೆ.ಜಿ ಅಕ್ಕಿ,
ಮುಂದುವರೆದು 10ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.