ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತುಮಕೂರಿನಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಡಿಜೆ ಸಂಸ್ಥೆಯ ಮಕ್ಕಳು ೧೨ ಚಿನ್ನದ ಪದಕ, ಐದು ಬೆಳ್ಳಿ, ನಾಲ್ಕು ಕಂಚಿನ ಪದಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಪದಕಗಳನ್ನು ಗಳಿಸಿರುವ ಡಿಜೆ ಸಂಸ್ಥೆಯ ಮಕ್ಕಳಿಗೆ ಟೇಕ್ವಾಂಡೋ ತರಬೇತುದಾರರಾದ ರುದ್ರೇಶ್, ಸವಿತಾ ಇವರುಗಳು ಅಭಿನಂದಿಸಿದ್ದಾರೆ.
ಒನಕೆ ಓಬವ್ವ ಕ್ರೀಡಾಂಗಣ ಹಾಗೂ ಜೆ.ಸಿ.ಆರ್.ಗಣಪತಿ ದೇವಸ್ಥಾನದ ಹತ್ತಿರ ಟೇಕ್ವಾಂಡೋ ತರಬೇತಿ ನೀಡಲಾಗುವುದು. ಆಟೋ ವ್ಯವಸ್ಥೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ : ೮೮೯೨೧೧೦೬೩೭ ಸಂಪರ್ಕಿಸಬಹುದಾಗಿದೆ.