ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭೀಮನ ಬಂಡೆ ಸಮೀಪದ ಯಾಜ್ಞವಲ್ಕ್ಯ ಕಾಲೇಜಿನಲ್ಲಿ ಭಾರತೀಯ ಭಾಷಾ ಪರಿವಾರ ರಾಷ್ಟ್ರೀಯ ಸಮ್ಮೇಳವನ್ನು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಉದ್ಘಾಟಿಸಿದರು.
ಭಾರತೀಯ ಭಾಷೆಗಳನ್ನು ಬ್ರಿಟಿಷ್ ಆಡಳಿತ ವಿಂಗಡನೆ ಮಾಡಿದೆ, ವೇದ ಉಪನಿಷತ್ ಗಳಲ್ಲಿ ನಮ್ಮ ಸಂಸ್ಕೃತಿಗಳನ್ನು ಬಿಂಬಿಸಲಾಗಿದೆ.
ಭಾಷೆಯಿಂದ ಭಾವೈಕ್ಯತೆ ಪಸರಿಸುತ್ತದೆ, ಜಾಗತೀಕರಣದಿಂದ ಮಾತೃಭಾಷೆಯು ಬದಲಾಗುತ್ತದೆ. ಪ್ರಾಕೃತಿಕ ಭಾಷೆಯನ್ನು ಗುರುತಿಸುವುದು ಮತ್ತು ಬಳಸುವುದು 12ನೇ ಶತಮಾನದಿಂದ ಕಡಿಮೆಯಾಗುತ್ತಿದೆ.
55 ಕೋಟಿ ಜನಸಂಖ್ಯೆ ಅತಿ ಹೆಚ್ಚು ಬಳಸುವ ಹಿಂದಿ ಭಾಷೆಗೆ 12 ಜ್ಞಾನಪೀಠ ಪ್ರಶಸ್ತಿ ಲಭಿಸಿದರೆ, ದ್ವಿತೀಯವಾಗಿ 4.5 ಕೋಟಿ ಜನ ಬಳಸುವ ಬಳಸುವ ಕನ್ನಡ ಭಾಷೆಗೆ 9 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಶ್ಲಾಘನೀಯ.
10 ಕೋಟಿ ಜನ ಬಳಸುವ ಬೆಂಗಾಳಿ ಭಾಷೆಗೆ 6 ಜ್ಞಾನಪೀಠ ಪ್ರಶಸ್ತಿಗಳು, ಮರಾಠಿ ಭಾಷೆಗೆ 6, ಮಲಯಾಳಂ ಭಾಷೆಗೆ 6, ತೆಲುಗು ಭಾಷೆಗೆ 3 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದೆ. ನಮ್ಮ ಭಾಷೆಯ ಬಳಕೆ, ಪ್ರಾಚೀನತೆ, ಪರಂಪರೆ, ಹಾಗೂ ಸಮಗ್ರ ಚಿಂತನೆಗೆ ಈ ವಿಚಾರ ಸಂಕಿರಣಗಳು ಉಪಯುಕ್ತವಾಗಿವೆ ಇಂದು ತಿಳಿಸಿದರು.
ವಿಚಾರ ಸಂಕಿರಣಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆಯುತ್ತವೆ. ಪದವಿಪೂರ್ವ ಕಾಲೇಜಿನ ಹಂತದಲ್ಲಿ ಇದು ತುಂಬಾ ವಿರಳ ಆದರೆ ಯಾಜ್ಞವಲ್ಕ್ಯ ಸಂಸ್ಥೆಯು ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ನಡೆಸುತ್ತಿರುವುದು ಎಲ್ಲಾ ಸಂಶೋಧಕ ವಿದ್ವಾಂಸರುಗಳಿಗೆ ಸಹಾಯವಾಗುತ್ತದೆ.
ಭಾಷೆಯು ಒಂದು ಸಾಧನ, ಭಾಷೆಯು ಒಂದು ಸಂಕುಚಿತಗೊಳ್ಳದೆ ವಿಶಾಲತೆಯನ್ನು ಹೊಂದಿರಬೇಕು. ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಶ್ರೀಮಂತಿಕೆ ಇದೆ ಯಾವುದೇ ಬ್ರಿಟಿಷರ ದಾಳಿಗೆ, ದಬ್ಬಾಳಿಕೆಗೆ ತುತ್ತಾಗದೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಇನ್ನು ಸಹ ಉಳಿಸಿಕೊಳ್ಳಲಾಗಿದೆ ಎಂದು ಎಸ್ ಜೆ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಮಾಜಶಾಸ್ತ್ರದ ಉಪನ್ಯಾಸಕರಾದ ಡಾ. ಈಶ್ವರಪ್ಪನವರು ತಿಳಿಸಿದರು.
ತುಮಕೂರು ವಿದ್ಯಾ ವಾಹಿನಿ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಪ್ರೇಮಾ ಅನಂತ್ ರವರು ಕಾಳಿದಾಸನ ಮೊದಲ ಶ್ಲೋಕದಲ್ಲಿ ಮಾತು ಮತ್ತು ಅರ್ಥಗಳ ಸಿದ್ದಿಗೆ ಪಾರ್ವತಿ ಪರಮೇಶ್ವರರನ್ನು ಉಲ್ಲೇಖಿಸಿರುವುದನ್ನು ವ್ಯಕ್ತಪಡಿಸಿದರು. ನಾಲಿಗೆ ಕುಲವನ್ನು ಹೇಳುತ್ತದೆ ಮಾತು ವ್ಯಕ್ತಿತ್ವವನ್ನು ಹೇಳುತ್ತದೆ, ಭಾಷೆಯಲ್ಲಿ ಮಾತೃಭಾಷೆ ವ್ಯವಹಾರಿಕ ಭಾಷೆ ಮತ್ತು ಗ್ರಾಂಥಿಕ ಭಾಷೆಗಳು ಇದ್ದಾವೆ. ಹಿಂದಿ, ಇಂಗ್ಲಿಷ್, ಮರಾಠಿ, ದ್ರಾವಿಡ, ಆರ್ಯನ್, ಹಾಗೂ ಎಲ್ಲಾ ಇತರೆ ಭಾಷೆಗಳು ಸೇರಿ ಭಾಷಾ ಪರಿವಾರವಾಗಿದೆ.
ಭಾಷೆಯು ಒಂದು ವಿಶಾಲವಾದ ಪ್ರಪಂಚ ಇದನ್ನು ಸಂಕುಚಿತವಾಗಿ ಇಡಬಾರದು. ಆಶಾ ಶಿಕ್ಷಕರಿಗೆ ವಿವಿಧ ಭಾಷೆಗಳ ಜ್ಞಾನವಿರಬೇಕು. ಭಾಷೆಯು ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿ ಇರಬೇಕೇ ಹೊರತು ವಿಂಗಡಿಸುವಂತೆ ಆಗಬಾರದು, ಭಾಷೆಯಲ್ಲಿ ಭಿನ್ನಾಭಿಪ್ರಾಯ ಇರಬಾರದು. ಲೇಖನಗಳು ವಿಚಾರ ಸಂಕಿರಣಗಳು ಅಷ್ಟೇ ಅಲ್ಲ ಮನೆಯಲ್ಲೂ ಸಹ ಪ್ರಾದೇಶಿಕ ಭಾಷೆಯನ್ನು ಬಳಸಿ ಉಳಿಸಬೇಕು.
ಮಾತು, ಬರವಣಿಗೆ, ಓದು ಇವೆಲ್ಲವೂ ಒಂದು ಭಾಷೆಯ ವೈಶಿಷ್ಟ್ಯ. ಕನ್ನಡ ಭಾಷೆಯ ಬಳಕೆಯಲ್ಲಿ ಇಂದು ಮಹಾಪ್ರಾಣಾಕ್ಷರಗಳನ್ನು ಕಾಗುಣಿತಾಕ್ಷರಗಳನ್ನು ಬಳಸದೆ ಅವುಗಳ ಶುದ್ಧತೆಗೆ ಇಂದು ಧಕ್ಕೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು ತಮ್ಮ ಗುರುಗಳಾದ ಶ್ರೀ ಕೃಷ್ಣ ಶಾಸ್ತ್ರಿಗಳನ್ನು ಈ ಸಮಾರಂಭದಲ್ಲಿ ನೆನಪಿಸಿಕೊಂಡರು.
ವಸಾಹತುಶಾಹಿ, ಬಂಡವಾಳಶಾಹಿಗಳ ಬಗ್ಗೆ ತಿಳಿಸುತ್ತಾ ಭಾಷೆಯ ಪ್ರೌಢಿಮೆ, ಶುದ್ಧ ಮಾತುಗಾರಿಕೆ ಒಳ್ಳೆಯ ಸಾಧನೆಗೆ ದಾರಿ, ನೆಹರು ಋಷಿಮುನಿಗಳು ದಾಸ ಶರಣರು ಸಾಹಿತಿಗಳು ಇವರೆಲ್ಲರೂ ಭಾಷೆಯ ಬಳಕೆಯಿಂದ ಸಾಧನೆ ಮಾಡಿದವರು. ಎಲ್ಲಾ ಭಾಷೆಗಳ ಮೂಲ ಮತ್ತು ತಾಯಿ ಸಂಸ್ಕೃತ ಭಾಷೆಯಾಗಿದೆ ಆದರೆ ಇದು ಹಾಡು ಭಾಷೆಗೆ ಇಂದು ಬಳಕೆಯಾಗುತ್ತಿಲ್ಲ, ಭಾಷೆಯ ಮಜಲುಗಳು ಮಹಲುಗಳನ್ನು ತಿಳಿಯುವುದು ಉತ್ತಮ ಎಂದು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಸ್ಥಾಪಕ ಸುರೇಶ್ ಅವರು ತಿಳಿಸಿದರು.
ಉಪನ್ಯಾಸಕ ವೇಣುಕುಮಾರ್ ಪ್ರಾಸ್ತಾವಿಕ ನುಡಿ ನುಡಿದರು. ಹರ್ಷ ನಿರೂಪಿಸಿದರು. ಶಾಲೆಯ ಪ್ರಾಂಶುಪಾಲ ಶ್ರೀಶಾನ್ ಸ್ವಾಗತಿಸಿದರು. ಶಿವಾನಂದ ವಂದಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ. ಜ್ಯೋತಿ ಶಂಕರ್, ಭಾರತೀಯ ವಿಜ್ಞಾನ ಸಂಸ್ಥೆಯ ಉಪ ನೋಂದಣ ಅಧಿಕಾರಿ ವೀರಣ್ಣ ಕಮ್ಮಾರ್, ನಿವೃತ್ತ ಪ್ರಾಂಶುಪಾಲ ಹಾಗೂ ಶಾಸನಶಾಸ್ತ್ರಜ್ಞ ಡಾ. ರಾಜಶೇಖರಪ್ಪ, ಸಂಪನ್ಮೂಲ ವ್ಯಕ್ತಿ ಬಾಲಾಜಿ ಹಾಗೂ ಹಲವಾರು ಸಂಶೋಧನಾ ವಿದ್ವಾಂಸರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

