ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 13.39 ಲಕ್ಷ ಲಾಭ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ, ಬೆಂ.ಗ್ರಾ.ಜಿಲ್ಲೆ:
ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ
13,39,111 ರೂಗಳು ಲಾಭ ಬಂದಿದೆ, ಹಾಗೂ 4.8 ಪೈಸೆ ರೈತರಿಗೆ ಬೋನಸ್ ರೂಪದಲ್ಲಿ ಕೊಡುತ್ತಿದ್ದಾರೆ, ತಾಲೂಕಿನಲ್ಲಿ ಮೊದಲ ಡೈರಿಯಾಗಿದೆ ಎಂದು ಉಪ ವ್ಯವಸ್ಥಾಪಕ ಎಲ್. ಜಿ.ನಾಗರಾಜ್ ಹೇಳಿದರು.

 ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಅಧ್ಯಕ್ಷರಾದ ನಾರಾಯಣಸ್ವಾಮಿ ಸಮ್ಮುಖದಲ್ಲಿ ನಡೆಯಿತು.

- Advertisement - 

 ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಎಲ್. ಜಿ.ನಾಗರಾಜ್ ಮಾತನಾಡಿ, ಭಾರತ ದೇಶ ಹಳ್ಳಿಗಳ ದೇಶ 70 ರಿಂದ 80 ರಷ್ಟು ಹಳ್ಳಿಗಳು ಇವೆ, ಹಳ್ಳಿಗಳಲ್ಲಿ ಮುಖ್ಯ ಕಸುಬು ಹೈನುಗಾರಿಕೆ ಆಗಿದೆ, ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡು ರೈತರು ಬದುಕುತ್ತಿದ್ದಾರೆ ಏಕೆಂದರೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಇಲ್ಲ ಮಾರ್ಕೆಟಿಂಗ್ ಇಲ್ಲ

ಆದ್ದರಿಂದಲೇ ರೈತರು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗುತ್ತಿದ್ದಾರೆ, ರೈತರು ಒಳ್ಳೆಯ ರಾಸುಗಳನ್ನು ಕಟ್ಟಿಕೊಂಡು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಸಂಘ ಇನ್ನಷ್ಟು ಬೆಳೆಯುತ್ತದೆ, ಇನ್ನು ವಿಶೇಷವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 224 ಡೇರಿಗಳ ಪೈಕಿ ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘ ಮೊದಲನೇ ಸ್ಥಾನದಲ್ಲಿದ್ದು 13 ಲಕ್ಷದ 39 ಸಾವಿರ ಲಾಭ ಬಂದಿದೆ ಅದರಲ್ಲಿ ರೈತರಿಗೆ ಬೋನಸ್ಸಾಗಿ 4.8  ಪೈಸೆಯನ್ನು ನೀಡಲಾಗುತ್ತದೆ  ಆದ್ದರಿಂದಲೇ ತಾಲೂಕಿನಲ್ಲಿ ಮೊದಲ ಸ್ಥಾನ ಪಡೆದು ಒಳ್ಳೆಯ ಡೈರಿ ಹಾಗಿದ್ದು ಸಂಘವನ್ನು ಉನ್ನತ ಮಟ್ಟಕ್ಕೆ ಏರಿಸಬೇಕಾಗಿದೆ ಎಂದು ಹೇಳಿದರು.

- Advertisement - 

  ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜ್ ಮಾತನಾಡಿ, ತೂಬಗೆರೆ ಹಾಲಿನ ಡೈರಿಗೆ ಒಳ್ಳೆಯ ಕಾರ್ಯದರ್ಶಿ ಸಿಕ್ಕಿದ್ದು ರೈತರಿಗೆ ಒಳ್ಳೊಳ್ಳೆಯ ಸೌಲಭ್ಯಗಳು ಕೊಟ್ಟು ಸಂಘವನ್ನು ಮುಂದೆ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು  ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅಂಗಡಿಗಳನ್ನು ಕಟ್ಟಿದರೆ ನಾನು ಒಂದು ಲಕ್ಷ ರೂಗಳನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ಅರವಿಂದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ವಿ. ವೆಂಕಟೇಶ್, ವಿಸ್ತರಣಾಧಿಕಾರಿ ವಿನಯ್ ಕುಮಾರ್, ಸಂಘದ ಮಾಜಿ ಅಧ್ಯಕ್ಷ ಗಂಗರಾಜು, ವಿ ಎಸ್ ಎಸ್ ಎನ್ ಸಂಘದ ಅಧ್ಯಕ್ಷ ನರಸೇಗೌಡ ಹಾಗೂ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಹಾಜರಿದ್ದರು.

 

 

 

Share This Article
error: Content is protected !!
";