13.6 ಕೆಜಿ ಅಕ್ರಮ ಗಾಂಜಾ ವಶ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರದ ನಿವಾಸಿ ಮೆಹಬೂಬ್ ಸುಬಾನ್ ಬಿನ್ ಅಯಾತ್ ಸಾಬ್ ಇವರ ವಾಸದ ಮನೆಯ ಮಲಗುವ ಕೋಣೆಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಮತ್ತು ನ್ಯೂಸ್ ಪೇಪರ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟ ಒಟ್ಟು 13.670 ಕೆ.ಜಿ. ಒಣ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಕೊಂಡಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಬುಧವಾರ ಬೆಳಗಿನ ಜಾವ 05:30 ಸುಮಾರಿನಲ್ಲಿ, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ ಅವರ ನಿರ್ದೇಶನದಂತೆ, ಜಿಲ್ಲಾ ವಿಚಕ್ಷಣಾ ದಳ ಅಬಕಾರಿ ನಿರೀಕ್ಷಕಿ ವನಿತಾ., ಅಬಕಾರಿ ಪೊಲೀಸರಾದ ರಮೇಶ್ ನಾಯ್ .ಕೆ , ಬಸವರಾಜ.ಜೆ, ವಾಹನ ಚಾಲಕ ನಾಗರಾಜ ತೋಳಮಟ್ಟಿ ಅವರ ತಂಡ ದಾಳಿ ನಡೆಸಿ ಅಂದಾಜು ರೂ.6 ಲಕ್ಷ ಮೌಲ್ಯದ ಅಕ್ರಮ ಗಾಂಜಾ ಜಪ್ತು ಮಾಡಿದೆ.

ಎನ್.ಡಿ.ಪಿ.ಎಸ್. ಕಾಯ್ದೆ 1985 ರನ್ವಯ 20(ಬಿ) ।।(ಬಿ) 25 ಉಲ್ಲಂಘನೆ ಮತ್ತು ಕಲಂ 8(ಸಿ) ರಿತ್ಯಾ ಪ್ರಕರಣ ದಾಖಲಿಸಲಾಗಿದ್ದು, 1 ಆರೋಪಿ ಮೆಹಬೂಬ್ ಸುಬಾನ್ ಬಿನ್ ಅಯಾತ್ ಸಾಬ್ ಮತ್ತು 2 ಆರೋಪಿ ಮನೆಯ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯದಲ್ಲಿ ಅಬಕಾರಿ ಪೊಲೀಸರು ತೊಡಗಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";