ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಾಯುಕ್ತ ದಾಳಿ ವೇಳೆ ವಸತಿ ಸಚಿವ ಜಮೀರ್ ಅವರ, ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮನೆಯಲ್ಲಿ 14.38 ಕೋಟಿಗೂ ಹೆಚ್ಚು ಅಕ್ರಮ ಸಂಪತ್ತು ಪತ್ತೆ ಆಗಿದೆ ಎಂದು ಜೆಡಿಎಸ್ ತಿಳಿಸಿದೆ.
4 ಐಷಾರಾಮಿ ಮನೆಗಳು, 37 ಎಕರೆ ಜಮೀನು, 3 ಕೋಟಿ ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, ಸೂಪರ್ ಬೈಕ್ʼಗಳು ಸೇರಿವೆ.
ಆಪ್ತ ಕಾರ್ಯದರ್ಶಿಯೇ ಇಷ್ಟು ಅಕ್ರಮ ಸಂಪತ್ತು ಗಳಿಸಿದ್ದಾನೆ ಎಂದರೇ, ಇನ್ನೂ ಇವರ ಬಾಸ್ಇನ್ನೆಷ್ಟು ಅಕ್ರಮವಾಗಿ ಲೂಟಿ ಹೊಡೆದಿರಬಹುದು? ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

