ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
140 ಕೋಟಿ ರೂ. ಬಾಕಿ ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ ಸ್ಕ್ಯಾನಿಂಗ್ ಬಂದ್ ಆಗಿದ್ದು ಇದರಿಂದ ಬಡ ರೋಗಿಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಬಾಕಿ ಬಿಲ್ ಪಾವತಿಸದ ಕಾಂಗ್ರೆಸ್ ಸರ್ಕಾರ;
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್ ಬಂದ್! ಆಗಿದೆ. ಖಾಸಗಿ ಕಂಪನಿಗಳಿಗೆ 140 ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರ; ಉಚಿತ ಸೇವೆ ಸ್ಥಗಿತ – ಬೀದಿಗೆ ಬಿದ್ದ ಬಡ ರೋಗಿಗಳ ಆರೋಗ್ಯ! ನಿಖಿಲ್ ಹರಿಹಾಯ್ದಿದ್ದಾರೆ.
ಸರ್ಕಾರಿ ಆಸ್ಪತ್ರೆ ರೋಗಿಗಳು ಹಾಗೂ ಬಿಪಿಎಲ್ ಕಾರ್ಡ್ ಹೊಂದಿದವರ ನೋವಿಗೆ ಸ್ಪಂದಿಸದ ಸರ್ಕಾರಕ್ಕೆ ನಿಖಿಲ್ ಧಿಕ್ಕಾರ! ಎಂದಿದ್ದಾರೆ.

