ಚಿಕ್ಕಮಗಳೂರಿನ 18 ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಲೆಗ್​ ಬಾಲ್​ ಕ್ರಿಕೆಟ್​ ಕೂಡಾ ಜನಪ್ರಿಯತೆ ಪಡೆಯುತ್ತಿದ್ದು ಈ ಕ್ರೀಡೆಯಲ್ಲಿ ಚಿಕ್ಕಮಗಳೂರಿನ 18 ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಜ್ಜಾಗಿ ನಿಂತಿದ್ದಾರೆ.

ಲೆಗ್ ಬಾಲ್ ಕ್ರಿಕೆಟ್ ದಕ್ಷಿಣ ಏಷ್ಯಾ ದೇಶಗಳಾದ ಭಾರತ, ನೇಪಾಳ, ಭೂತನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಪ್ರತಿ ತಂಡದಲ್ಲಿ 11 ಜನರು ಆಟಗಾರರಿರುತ್ತಾರೆ. ವಿಕೆಟ್​ ಇರುತ್ತದೆ. ಬೌಲರ್​ ಫುಟ್ಬಾಲ್​ ಅನ್ನು ಅಂಡರ್​ ಆರ್ಮ್​ ಮೂಲಕ ಎಸೆಯುತ್ತಾರೆ.

- Advertisement - 

ಎದುರಾಳಿ ಬ್ಯಾಟ್​ ಬದಲಾಗಿ ತನ್ನ ಕಾಲಿನಿಂದಲೇ ಬಾಲ್​ ಹೊಡೆಯಬೇಕು. ಈ ರೀತಿ ಬಲವಾಗಿ ಹೊಡೆದಾಗ ಆ ಬಾಲ್​ ಬೌಂಡರಿ ಲೈನ್‌ಗೆ ಹೋದರೆ ಫೋರ್, ಬೌಂಡರಿನಿಂದ ಆಚೆ ಬಿದ್ದರೆ ಸಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಕಾಲಿನಲ್ಲಿ ಆಡುವ ಈ ಗೇಮ್ ದೈಹಿಕ ಶಕ್ತಿಯನ್ನು ಹೆಚ್ಚು ಬೇಡುತ್ತದೆ.

ಭಾರತದಲ್ಲಿ 2011ರಿಂದಲೇ ಲೆಗ್​ ಕ್ರಿಕೆಟ್​ ಫೆಡರೇಷನ್​ ಇದ್ದು, ಮಹಿಳಾ ಮತ್ತು ಪುರುಷರ ತಂಡಗಳಿವೆ. ಈ ಕ್ರೀಡೆಯಲ್ಲಿ ಇದೀಗ ಕರ್ನಾಟಕವನ್ನು ಚಿಕ್ಕಮಗಳೂರಿನ ಬಾಲಕರು ಪ್ರತಿನಿಧಿಸುತ್ತಿದ್ದಾರೆ.

- Advertisement - 

ಈ ಸಲ ರಾಷ್ಟ್ರ ಮಟ್ಟದ ಲೆಗ್​ ಬಾಲ್​ ಕ್ರಿಕೆಟ್​ ಟೂರ್ನಿ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆಯಲಿದೆ. ಕರ್ನಾಟಕದ ಜೂನಿಯರ್ ಹಾಗೂ ಸಬ್ ಜೂನಿಯರ್​ ತಂಡದಲ್ಲಿ ಕಡೂರು ತಾಲೂಕಿನ ಬೀರೂರು ಪಟ್ಟಣದ ದೇವರಹಳ್ಳಿಯಲ್ಲಿರುವ ಶ್ರೀ ಗುರು ಕ್ರೈಸ್ತ ಶರಣ ಶಾಲೆಯ ವಿದ್ಯಾರ್ಥಿಗಳಿದ್ದಾರೆ.

ಜೂನಿಯರ್ ವಿಭಾಗ:
12 ವರ್ಷದ ಬಾಲಕರ ತಂಡದಲ್ಲಿ ಹೇಮಂತ ಮಾರುತಿ, ಬೆಂಜೊಯ್, ಜ್ಞಾನೇಶ್,ತೇಜಸ್ ದ್ರುವ. (ನಾಯಕ) ತೇಜಸ್ ಎಚ್.ಎಲ್, ಚಿರಂಜೀವಿ ಷಣ್ಮುಖ ಸ್ಥಾನ ಪಡೆದಿದ್ದಾರೆ.

ಸಬ್​ ಜೂನಿಯರ್​ ವಿಭಾಗ:
14 ವರ್ಷದ ಬಾಲಕರ ತಂಡದಲ್ಲಿ ಭರತೇಶ್ (ನಾಯಕ), ಪ್ರೇಮಸಾಗರ್ಅಬೆಲ್ ಮಥಿಯಾಸ್, ಶಶಾಂಕ್, ಶ್ರೀಸ್ ಹೃತಿಕ್ ತೇಜಾ, ಜೀವನ್, ಜಶ್ವಂತ್ ಗಗನ್, ತರುಣ್ ಇದ್ದಾರೆ.

ಈ ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕುರಿತು ಕೋಚ್ ಗುರು ಪ್ರತಿಕ್ರಿಯಿಸಿ, “ನಾಸಿಕ್​ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಲೆಗ್​​ ಬಾಲ್​ ಟೂರ್ನಿಗೆ ನಮ್ಮ ಮಕ್ಕಳು ಆಯ್ಕೆಯಾಗಿರುವುದು ಸಂತಸ ತಂದಿದೆ. ಜೂನಿಯರ್​ ಮತ್ತು ಸಬ್​ ಜೂನಿಯರ್​ ವಿಭಾಗದಲ್ಲಿ ನಮ್ಮ ಶಾಲೆಯ 18 ಮಕ್ಕಳು ಆಯ್ಕೆಯಾಗಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ” ಎಂದು ಹಾರೈಸಿದರು.

ಪ್ರಾಂಶುಪಾಲರಾದ ಸಿಸ್ಟರ್​ ತಾರಾ ಮಾತನಾಡಿ, “ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಇದು ಶಾಲೆಗೂ ಕೀರ್ತಿ ತರುವ ವಿಚಾರ” ಎಂದು ಸಂತಸ ವ್ಯಕ್ತಪಡಿಸಿದರು.

 

Share This Article
error: Content is protected !!
";