ಸಾರಿಗೆ ಸಂಸ್ಥೆಗೆ 2 ರಾಷ್ಟ್ರೀಯ ಅಪೆಕ್ಸ್ ಇಂಡಿಯಾ ಪ್ರಶಸ್ತಿ ಲಭ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೈಗೊಂಡಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಗಳಿಗಾಗಿ ಚಿನ್ನದ ವರ್ಗದಲ್ಲಿ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಶ್ರೇಷ್ಠತೆ ಪ್ರಶಸ್ತಿ ಮತ್ತು

2600 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ, ತ್ವರಿತ, ತಂತ್ರಜ್ಞಾನ ಅವಲಂಬಿತ ಪ್ರಕ್ರಿಯೆಗೆ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಧಾರಣಾ ಶ್ರೇಷ್ಠತೆ ಪ್ರಶಸ್ತಿ ಲಭಿಸಿದೆ.

- Advertisement - 

ಈ ಪ್ರಶಸ್ತಿಗಳನ್ನು ರಾಜಸ್ಥಾನದ ಉದಯಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್ ಸಿ ಬಾಸಿನ್, ಮಾಜಿ ಪ್ರಧಾನ ವ್ಯವಸ್ಥಾಪಕರು SAIL  ಮತ್ತು ರಾಯಲ್ ಹೌಸ್ ಆಪ್ ಮೇವಾರ್ ರಾಜಕುಮಾರಿ ಜಾನ್ಹವಿ ಕುಮಾರಿ ರವರು ಜಿ.ಎನ್. ಲಿಂಗರಾಜು,

ಮುಖ್ಯ ಭದ್ರತಾ & ಜಾಗೃತಾಧಿಕಾರಿ ಮತ್ತು ಜೆ ಅಂಥೋಣಿ ಜಾರ್ಜ್, ಮುಖ್ಯ ಸಂಚಾರ ವ್ಯವಸ್ಥಾಪಕರು ರವರಿಗೆ ಪ್ರದಾನ ಮಾಡಿದರು.

- Advertisement - 

 

Share This Article
error: Content is protected !!
";