1,000 ಪೇರು ಗಿಡಗಳಿಂದ 20 ಲಕ್ಷ ಲಾಭದ ನಿರೀಕ್ಷೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1.5
ಎಕರೆ ಜಮೀನು | 1,000 ಪೇರು ಗಿಡಗಳು| ವರ್ಷದ ಅವಧಿ 20 ಲಕ್ಷ ಲಾಭದ ನಿರೀಕ್ಷೆಯಲ್ಲಿ ಬಾಬಾನಗರದ ರೈತ ಬಾಹುಬಲಿ! ಇದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೀರಾವರಿ ಯೋಜನೆಗಳ ಯಶಸ್ವಿ ಅನುಷ್ಠಾನದ ಫಲವಾಗಿ ವಿಜಯಪುರ ಜಿಲ್ಲೆಯ ರೈತರು ಪ್ರಗತಿಪರರಾಗುತ್ತಿರುವುದು ಸಂತಸ ತರಿಸಿದೆ.

ತಿಕೋಟಾ ತಾಲ್ಲೂಕು ಬಾಬಾನಗರ ದ ರೈತ ಬಾಹುಬಲಿ ಭೀಮನಗೌಡ ಆಯತವಾಡ ಅವರ 1.5 ಎಕರೆ ಜಮೀನಿನಲ್ಲಿ ರೆಡ್ ಡೈಮಂಡ್ ಎಂಬ ವಿಶಿಷ್ಟ ತಳಿಯ ಪೇರು ಬೆಳೆದಿದ್ದಾರೆ.

- Advertisement - 

1,000 ಸಸಿ ನೆಟ್ಟು, 12 ಟನ್ ಪೇರು (ಚೇಪೆ-ಸೀಬೆ ಹಣ್ಣು) ಮೊದಲ ಬೆಳೆಯಿಂದಲೇ 10 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನು 6 ತಿಂಗಳ ನಂತರ 2ನೇ ಕೊಯ್ಲು ಬರಲಿದ್ದು 20 ಲಕ್ಷಕ್ಕೂ ಅಧಿಕ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಅವರ ಈ ಸಾಹಸ-ಸಾಧನೆ ಸಂತಸ ತರಿಸಿದ್ದು, ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಚಿವರು ರೈತರಿಗೆ ಸಲ್ಲಿಸಿದ್ದಾರೆ.

ಬಾಹುಬಲಿಯವರ ಯಶೋಗಾಥೆ ಇನ್ನಿತರೆ ರೈತರಿಗೆ ಪ್ರೇರಣೆಯಾಗಲಿ-ಬಸವನಾಡಿನಲ್ಲಿ ಕೃಷಿ ಮತ್ತು ತೋಟಗಾರಿಕೆ, ಹೈನುಗಾರಿಕೆ ಮತ್ತಷ್ಟು ಎತ್ತರಕ್ಕೆ ಏರಲಿ ಎಂಬ ಹಾರೈಕೆ ನನ್ನದು ಎಂದು ಸಚಿವರು ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";