ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 2023 ಮತ್ತು 2024ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ 03 ರಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರು ಮಲ್ಲೇಶ್ವರಂನ ಸಿ.ವಿ.ರಾಮನ್ ರಸ್ತೆಯ ಐಐಎಸ್ಸಿ ಆವರಣದಲ್ಲಿರುವ ಜೆ. ಎನ್. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು. ಉಪ ಮುಖ್ಯಮಂತ್ರಿಡಿ.ಕೆ. ಸಿವಕುಮಾರ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಲಿರುವರು.
ಸಮಾರಂಭಕ್ಕೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಹಾಗೂ ಕಾರ್ಮಿ, ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ಆಶಯ ನುಡಿಗಳನ್ನಾಡಲಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು:
ಸುಶೀಲೇಂದ್ರ ಟಿ. ನಾಯಕ್, ಎಸ್. ದೊರೈರಾಜ್ ಆಲ್‍ಫ್ರೆಡ್ ಟೆನಿಸನ್, ಕೆ.ಎಂ. ಮನು ಅಯ್ಯಪ್ಪ, ಡಾ. ವಿಲಾಸ್ ನಾಂದೋಡ್ಕರ್, ಸಿದ್ದಯ್ಯ ಹಿರೇಮಠ,  ಮನೋಜ ಪಾಟೀಲ, ಮಧು ಜವಳಿ, ಎ.ಎಲ್. ತಾರಾನಾಥ್, ಆರ್. ಜಯಪ್ರಕಾಶ್, ಇಬ್ರಾಹಿಂ ಅಡ್ಕಸ್ಥಳ, ನೆಹಾಲ್ ಕಿದ್ವಾಯಿ, ಭಾವನಾ ನಾಗಯ್ಯ, ಹನುಮಾನ್ ಸಿಂಗ್ ಜಮಾದಾರ್, ಶಿವಮೂರ್ತಿ ಜಿ. ಗುರುಮಠ, ಸಿರಾಜ್ ಬಿಸರಳ್ಳಿ, ಉಷಾರಾಣಿ ಎನ್., ಎಂ. ವಾಸುದೇವ ಹೊಳ್ಳ, ಮಾಲತಿ ಭಟ್,  ಸಿ.ಹೆಂಜಾರಪ್ಪ ಹರಿಯಬ್ಬೆ, ಶಿವಕುಮಾರ್ ಬೆಳ್ಳಿತಟ್ಟೆ, ಶಶಿಕಾಂತ್ ಎಸ್. ಶೆಂಬೆಳ್ಳಿ, ಆನಂದ ಪರಮೇಶ್ವರ ಬೈದನಮನೆ, ದಿನೇಶ್ ಎಂ.ಆರ್., ಕೆ. ಮಲ್ಲಿಕಾರ್ಜುನ ಸಾಣಾಪೂರ, ಪುಂಡಲೀಕ ಭೀ, ಬಾಳೋಜಿ, ಅನ್ನು ಮಂಗಳೂರು (ಹೆಚ್. ಪುಂಡಲೀಕ ಪೈ), ರೋಹಿಣಿ ಸ್ವಾಮಿ, ಮುನೀರ್ ಅಹ್ಮದ್ ಆಜಾದ್ ಹಾಗೂ ಡಾ. ಕೆ. ಜೈಮುನಿ.

2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು:
ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಸುಭಾಷ್ ಹೂಗಾರ, ಯು.ಕೆ. ಕುಮಾರನಾಥ್, ಆರ್.ಕೆ. ಜೋಶಿ, ಆರುಂಡಿ ಶ್ರೀನಿವಾಸಮೂರ್ತಿ, ಭಾನು ಪ್ರಕಾಶ್ ಚಂದ್ರ,  ರಮೇಶ್ ಜಹಗೀರದಾರ, ಬಿ. ದಿನೇಶ್ ಗೌಡಗೆರೆ, ಹೆಚ್.ಎಸ್. ಹರೀಶ್, ಅಶ್ವಿನಿ ಎಂ. ಶ್ರೀಪಾದ, ಬನ್ಸಿ ಕಾಳಪ್ಪ, ಜಿ. ಜಯಂತ್, ಡಿ.ಎನ್. ಶಾಂಭವಿ ನಾಗರಾಜ್, ಸೋಮಶೇಖರ ಕಿಲಾರಿ, ಶ್ರೀ ಅನೀಸ್ ನಿಸಾರ್ ಹಮೀದ್, ಶ್ರೀ ಹೃಷಿಕೇಶ ಬಹದ್ದೂರ ದೇಸಾಯಿ, ಟಿ. ಗುರುರಾಜ್, ಸಿದ್ದಪ್ಪ ಗೋಪಾಲ ಕಾಳೋಜಿ,  ಪ್ರಕಾಶ ಎಸ್. ಶೇಟ್, ರವೀಶ್ ಹೆಚ್.ಎಸ್., ಮಹೇಶ ವಿ. ಶಟಗಾರ, ನಿರುಪಮಾ ಕೆ.ಎಸ್., ಡಿ.ಸಿ. ಮಹೇಶ್, ಶರಣಯ್ಯ ಬಿ. ಒಡೆಯರ್, ರಿಜ್ವಾನ್ ಎಂ.ಕೆ., ಮನುಜಾ ವೀರಪ್ಪ, ವಿಖಾರ್ ಅಹ್ಮದ್ ಸಯೀದ್, ಹಾಬಿ ರಮೇಶ್ ಜೆ., ನಾರಾಯಣ ಸ್ವಾಮಿ, ಹಾಗೂ ಎಂ.ವಿ. ಸಂದೀಪ್ ಸಾಗರ್.

2023 ನೇ ಸಾಲಿನ ದತ್ತಿ ಪ್ರಶಸಿ ಪುರಸ್ಕೃತರು:
ಅಭಿಮಾನಿ ದತ್ತಿ ಪ್ರಶಸ್ತಿಗೆ ಕನ್ನಡಮ್ಮ ಪತ್ರಿಕೆಯ ಕೆವೈಸಿ ಆಪ್ ಡೇಟ್ ಮಾಡಲು ಮುಗಿಬಿದ್ದ ಜನ, ಬೆಳ್ಳಂಬೆಳಿಗ್ಗೆ ಕ್ಯೂ  ವರದಿಗಾಗಿ ರವಿ ಕುಮಾರ ಚನ್ನಬಸಪ್ಪ ಕಗ್ಗಣ್ಣವರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಬಲೆಯೊಳಗೆ ಬುದ್ದಿವಂತರು” ವರದಿಗಾಗಿ ವಿಜಯ್ ಕೋಟ್ಯಾನ್ ಪಡು ಆಯ್ಕೆಯಾಗಿದ್ದಾರೆ.

ಆಂದೋಲನಾ ಪ್ರಶಸ್ತಿಗೆ ಬಾಗಲಕೋಟೆಯ ಸಂಜೆ ದರ್ಶನ್ಪತ್ರಿಕೆ,  ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಕನ್ನಡಪ್ರಭ ಪತ್ರಿಕೆಯ ಕೆರೆನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರುವರದಿಗಾಗಿ ಹುಬ್ಬಳ್ಳಿಯ ಶಿವಾನಂದ ಗೊಂಬಿ, ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗಾಗಿ ಕಲಬುರಗಿಯ ಕೆ. ನೀಲಾ, ಮಾಧ್ಯಮ ಮಹಾಸಾಧಕ ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿಗೆ ಚಿತ್ರದುರ್ಗ ಕನ್ನಡಪ್ರಭದ ಕ.ಮ. ರವಿಶಂಕರ್, ಅಭಿಮನ್ಯು ಪ್ರಶಸ್ತಿಗೆ ಮಂಗಳೂರು ಪ್ರಜಾವಾಣಿ ಪತ್ರಿಕೆಯ ಬೀಡಿಯಿಂದ ಕಮರಿದ ಕನಸುವರದಿಗಾಗಿ ಸಂಧ್ಯಾ ಹೆಗಡೆ, ಪ್ರಜಾ ಪಂದೇಶ ದತ್ತಿ ಪ್ರಶಸ್ತಿಗೆ ಮೈಸೂರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ Manual Scavenging Stinking Truth ವರದಿಗಾಗಿ ಶಿಲ್ಪ ಪಿ., ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ವಿ. ವೆಂಕಟೇಶ ಹಾಗೂ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ನೀಡುವ ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿಗೆ ಹೆಚ್.ಪಿ. ಪುಣ್ಯವತಿ ಅವರುಗಳು ಆಯ್ಕೆಯಾಗಿದ್ದಾರೆ.

2024ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪುರಸ್ಕೃತರು:
ಅಭಿಮಾನಿ ದತ್ತಿ ಪ್ರಶಸ್ತಿಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರಜಾವಾಣಿ ಪತ್ರಿಕೆಯ ಕೆರೆ ಒಡಲಿಗೆ ಬೆಂಗಳೂರಿನ ಚರಂಡಿ ನೀರು – ತರಕಾರಿ ಗುಣಮಟ್ಟ ಕುಸಿತ, ಅವಳಿ ವ್ಯಾಲಿಯಲ್ಲಿ ಅಪಾಯ ವರದಿಗಾಗಿ ಓಂಕಾರ ಮೂರ್ತಿ ಮತ್ತು ಡಿ.ಎಂ.ಕುರ್ಕೆ ಪ್ರಶಾಂತ್, ಆಂದೋಲನ ಪ್ರಶಸ್ತಿಗೆ ಹೊಸಪೇಟೆಯ ಹೊಸಪೇಟೆ ಟೈಮ್ಸ್ ಪತ್ರಿಕೆ, ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ರಿಪಬ್ಲಿಕ್ ಕನ್ನಡದ 6 ವರ್ಷಗಳಿಂದ ಪಿಂಚಣಿ ಬರದೆ ಪರದಾಟ, 50 ವರ್ಷದ ವಿಶೇಷ ಚೇತನ ನರಿಯಂಬಾಡಿ ಕಂಗಾಲು ವರದಿಗೆ ಬಿ.ಕೆ. ದೇವಯ್ಯ (ಅನು ಕಾರ್ಯಪ್ಪ), ಮತ್ತು ಸುವರ್ಣ ನ್ಯೂಸ್‍ನ ವಿಶೇಷ ಚೇತನ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಬಗ್ಗೆ ಸರಣಿ ಸುದ್ದಿ ವರದಿಗಾಗಿ ನಂದೀಶ್ ಮಲ್ಲೇನಹಳ್ಳಿಅರಗಿಣಿ ಪ್ರಶಸ್ತಿಗೆ ಎಸ್. ಶ್ಯಾಮ್ ಪ್ರಸಾದ್, ಡಾ ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ರಹಮತ್ ತರೀಕೆರೆ, ಪ್ರಜಾಸಂದೇಶ ದತ್ತಿ ಪ್ರಶಸ್ತಿಗೆ ಕೊಪ್ಪಳ ವಾರ್ತಾ ಭಾರತಿ ಪತ್ರಿಕೆಯ ಕೊಪ್ಪಳ ಜಿಲ್ಲೆಯಲ್ಲಿ ಆಳವಾಗಿ ಬೇರೂರಿರುವ ಅಸ್ಕøಶ್ಯತೆ ವರದಿಗಾಗಿ  ಮೊಹಮ್ಮದ್ ಅಖೀಲ್ ಉಡೇವು, ಅಭಿಮನ್ಯು ಪ್ರಶಸ್ತಿಗೆ ಕಲಬುರಗಿ ಪ್ರಜಾವಾಣಿ ಪತ್ರಿಕೆಯ ಕುಲುಮೆ ಕಳಚಿದ ಕಮ್ಮಾರರು ವರದಿಗಾಗಿ ಪ್ರಭು ಬ. ಅಡವಿಹಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿಗೆ  ಹೆಚ್.ಎಸ್. ಸುಧೀಂದ್ರ ಕುಮಾರ್ ಹಾಗೂ  ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ನೀಡಲಾಗುವ ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿಗೆ ಬೆಳಗಾವಿಯ ಕೀರ್ತನಾಕುಮಾರಿ ಕೆ. (ಕೀರ್ತಿಶೇಖರ ಕಾಸರಗೋಡು) ಮತ್ತು ಹಾಸನದ ವೆಂಕಟೇಶ್ ಆಯ್ಕೆಯಾಗಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";