i
ಉದ್ಯೋಗ ಮೇಳ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಬೆಂಗಳೂರು ನಗರ ವತಿಯಿಂದ ಜನವರಿ 13 ರಂದು ಬೆಳಗ್ಗೆ 10 ರಿಂದ 4 ರವರೆಗೆ “ಬೆಂಗಳೂರು ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್”, ನಂ.35, ಪಟ್ಟಣಗೆರೆ ಮೆಟ್ರೋ ನಿಲ್ದಾಣ ಎದುರು, ಮೈಸೂರು ರಸ್ತೆ, ಬೆಂಗಳೂರು-560059 ಇಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
SSLC, PUC, ITI, Diploma, BCom, BBA, BA, BCA, BE ಮತ್ತು ಸ್ನಾತಕ ಪದವಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬಹುದು. ಸುಮಾರು 50ಕ್ಕೂ ಹೆಚ್ಚಿನ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ಅಭ್ಯರ್ಥಿಗಳು ತಮ್ಮ ಅರ್ಹತೆಯನುಸಾರ ಸಂದರ್ಶನಕ್ಕೆ ಒಳಪಟ್ಟು ಉದ್ಯೋಗ ಪಡೆಯಬಹುದಾಗಿದೆ.
ಅಭ್ಯರ್ಥಿಗಳ ನೋಂದಣಿಗಾಗಿ : http://skillconnect.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9008181896, 8095852257, 9964907444 ಹಾಗೂ ಇ-ಮೇಲ್ ವಿಳಾಸ: dsdoblr.urban@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.